HULI Rum: ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾದ ನಂಜನಗೂಡಿನ 'ಹುಲಿ' ಬೆಲ್ಲದ ರಮ್!
ಇಲಿ ಕೂಡ ಎಣ್ಣೆ ಹೊಡೆದ ಬಳಿಕ ಹುಲಿಯಂತಾಗುತ್ತದೆ ಎನ್ನುವುದು ತಮಾಷೆಯಾಗಿ ಹೇಳುವ ಮಾತು. ಆದರೆ ಕುಡಿಯುವ ಮದ್ಯದ ಹೆಸರೇ 'ಹುಲಿ' ಎಂದಿದ್ದರು. ಹೌದು, ಕರ್ನಾಟಕದ ವಿಶೇಷ 'ಹುಲಿ' ಈಗ ಮದ್ಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ನಂಜನಗೂಡಿನಲ್ಲಿ ತಯಾರಾದ ವಿಶೇಷ ಬೆಲ್ಲದ ರಮ್ 'ಹುಲಿ' ಮಾರುಕಟ್ಟೆಗೆ ಬರಲಿದ್ದು, ಮದ್ಯ ಪ್ರಿಯರ ಗಮನ ಸೆಳೆಯುತ್ತಿದೆ.
ಅರುಣ ಅರಸ್ ಎನ್ನುವವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹುಲಿಯನ್ನು ಮಾರುಕಟ್ಟೆಗೆ ತರುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ. ನಮ್ಮ ಪೂರ್ವಜರ ಕಾಲದಲ್ಲಿ ಬೆಲ್ಲದ ರಮ್ ತಯಾರು ಮಾಡಲಾಗುತ್ತಿತ್ತು, 8 ವರ್ಷಗಳ ಸತತ ಪರಿಶ್ರಮದ ಬಳಿಕ ಮಾರುಕಟ್ಟೆಗೆ ತರಲು ಸಜ್ಜಾಗುತ್ತಿದ್ದೇವೆ ಎಂದರು.

ದೇಶದ ಮೊದಲ ಮೈಕ್ರೋ-ಡಿಸ್ಟಿಲರಿಯಲ್ಲಿ ನಾವು ಕರಕುಶಲತೆಯಿಂದ ತಯಾರಿಸಿದ ವಿಶ್ವದರ್ಜೆಯ ಬೆಲ್ಲದ ರಮ್ ಇದಾಗಿದ್ದು, ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದಿದ್ದಾರೆ. ಉತ್ತಮ ದರ್ಜೆಯ ರಮ್ ಅನ್ನು ಪರಿಚಯಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
This is a divine ode to the native spirits of India. Huli (ಹುಲಿ), Kannada for Tiger, is world-class single-origin jaggery rum handcrafted by us at our country’s first micro-distillery. A mad 8-year journey to bring back what our ancestors enjoyed has finally come to fruition! pic.twitter.com/zlHNooUSE7
— Aruna Urs (@Arunaurs) July 27, 2024
ಬೆಂಗಳೂರು, ಮೈಸೂರಿನಲ್ಲಿ ಲಭ್ಯ
ಆಗಸ್ಟ್ 15ರಿಂದ ಬೆಂಗಳೂರು ಮತ್ತು ಮೈಸೂರಿನ ಮದ್ಯದ ಅಂಗಡಿಗಳಲ್ಲಿ 'ಹುಲಿ' ಸಿಗಲಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಲಭ್ಯವಾಗಲಿದೆ. ಸದ್ಯ ಬೆಲ್ಲದ ರಮ್ ಬೆಲೆ 2800 ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ. ಸರ್ಕಾರ ಏನಾದರೂ ಉತ್ಪನ್ನಗಳ ಮೇಲೆ ಇಡಿ/ಎಇಡಿ ಕಡಿಮೆ ಮಾಡಿದರೆ ಬೆಲೆ ಸ್ವಲ್ಪ ಕಡಿಮೆ ಮಾಡಬಹುದು ಎಂದು ಅರುಣ್ ಅರಸ್ ಹೇಳಿದ್ದಾರೆ.












Click it and Unblock the Notifications