Lok Sabha Election 2024: ಚಿತ್ರದುರ್ಗ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಭಾರೀ ಲಾಬಿ: ರೇಸ್‌ ನಲ್ಲಿ ಯಾರಿದ್ದಾರೆ?

ಚಿತ್ರದುರ್ಗ ನವೆಂಬರ್‌ 27: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆದ್ದು ಸರ್ಕಾರವನ್ನ ಕಾಂಗ್ರೆಸ್‌ ರಚಿಸಿದ್ರೆ, ಇತ್ತ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿ ಕಾಂಗ್ರೆಸ್‌ ಗೆ ಸಡ್ಡು ಹೊಡೆಯಲು ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸಿದ್ದು, 28 ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ರಾಜಕೀಯ ಪಕ್ಷಗಳು ತೆಗೆದುಕೊಂಡಿದ್ದಾರೆ.

ಹೌದು, ಕೋಟೆನಾಡು ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದಲ್ಲಿ ಬಿಜೆಪಿ ಹಾಲಿ ಸಂಸದರಿದ್ದು, ಈ ಬಾರೀ ಕೋಟೆನಾಡು ಚಿತ್ರದುರ್ಗವನ್ನ ವಶಪಡಿಸಿಕೊಳ್ಳಲು ಕೈ ಪಡೆ ಸಕಲ ಸಿದ್ದತೆಯನ್ನ ನಡೆಸುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸಿದ್ದು, ಅಸಮಾಧಾನಗೊಂಡ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್‌ ನಾಯಕರು ಗಾಳ ಹಾಕಿದ್ದಾರೆ.

ಇತ್ತ ಚಿತ್ರದುರ್ಗದಲ್ಲಿ ಈ ಬಾರೀ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಗಾಗಿ ಬಾರೀ ಲಾಬಿ ಮುಂದುವರೆದಿದ್ದು, ಕ್ಷೇತ್ರದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಸದ್ಯ ಬಿಜೆಪಿಯ ಹಾಲಿ ಸಂಸದರಾದ ಎ ನಾರಾಯಣಸ್ವಾಮಿ ಅವರು ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದು, ಈ ಬಾರೀ ಬಿಜೆಪಿಯಿಂದ ಮಾಜಿ ಸಂಸದ ಜನಾರ್ಧನಸ್ವಾಮಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರ ಪುತ್ರ ರಘುಚಂದನ್‌ ಅವರು ಟಿಕೆಟ್‌ ಗಾಗಿ ಲಾಬಿ ನಡೆಸಿದ್ದಾರೆ. ಇನ್ನೂ ಈ ಬಾರೀ ಚಿತ್ರದುರ್ಗ ಸಂಸದರಾದ ಎ ನಾರಾಯಣಸ್ವಾಮಿ ಅವರು ಕ್ಷೇತ್ರ ಬದಲಾಯಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಕೋಲಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಕಮಲ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ.

Huge Lobby for Chitradurga Lok Sabha Seat: Who Will Secure BJP and Congress Tickets?

ಇನ್ನೂ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ನಲ್ಲೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಗಾಗಿ ಹಲವು ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ. ಮಾಜಿ ಸಂಸದ ಚಂದ್ರಪ್ಪ, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪುತ್ರ ವಿನಯ್‌ ತಿಮ್ಮಾಪುರ, ಮಾಜಿ ಶಾಸಕ ವೆಂಕಟರವಣಪ್ಪರ ಪುತ್ರರಲ್ಲಿಕಿರಿಯ ಪುತ್ರ ಪಾವಗಡ ಕ್ಷೇತ್ರದ ಎಎಲ್‌ಎ ಆಗಿದ್ದು ಅವರ ದೊಡ್ಡ ಮಗ ಕುಮಾರಸ್ವಾಮಿ ಲೋಕಸಭೆಗೆ ಕೈ ಪಕ್ಷದಿಂದ ಅಖಾಡಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆ.

ಚಿತ್ರದುರ್ಗ ಲೋಕಸಭೆಯಲ್ಲಿ ಸೋತ ನಂತರವೂ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಸೋತ ನಂತರವೂ ನಿರಂತರವಾಗಿ ಪಕ್ಷದ ಜತೆ ಸಂಪರ್ಕವಿರಿಸಿಕೊಂಡು ಕಾರ್ಯಕರ್ತರು, ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಈ ಬಾರೀ ಇವರ ಸ್ಪರ್ಧೆಗೆ ಹೆಚ್ಚು ಅಡ್ಡಿ ಆತಂಕಗಳು ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನೂ ಕಾಂಗ್ರೆಸ್‌ ಪಕ್ಷದಿಂದ 2009ರ ಲೋಕಸಭೆ ಚುನಾವಣೆಯಲ್ಲಿಕಣಕ್ಕಿಳಿದಿದ್ದ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರು ಟಿಕೆಟ್‌ ಗಾಗಿ ಮತ್ತೆ ಲಾಬಿ ನಡೆಸುತ್ತಿದ್ದಾರೆ. ಇತ್ತ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ರಾಮಪ್ಪ ಅವರು ಸುದೀರ್ಘ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಕಾರಣ ನೀಡಿ ಟಿಕೆಟ್‌ ಗೆ ಬೇಡಿಕೆ ಇಟ್ಟಿದ್ದಾರೆ.

ಚಿತ್ರದುರ್ಗದಲ್ಲಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ!

ಹೌದು, ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಲಾಭ ನಷ್ಟ ಲೆಕ್ಕಾಚಾರ ಪ್ರತಿ ಬಾರೀ ವರ್ಕೌಟ್‌ ಆಗಿದ್ದು, ಯಾವ ಪಕ್ಷದ ಶಾಸಕರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಎನ್ನುವುದರ ಆಧಾರಸ ಮೇಲೆ ಫಲಿತಾಂಶ ಬಂದಿದೆ. ಈ ಹಿಂದೆ 2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೊರತುಪಡಿಸಿ ಮಿಕ್ಕ ಏಳು ಶಾಸಕರು ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ್ದರು. ಆಗ ಬಿ.ಎನ್‌.ಚಂದ್ರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು.

Huge Lobby for Chitradurga Lok Sabha Seat: Who Will Secure BJP and Congress Tickets?

ಇನ್ನೂ 2019 ರ ಲೋಕಸಭಾ ಚುನಾವಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ ನಾರಾಯಣ ಸ್ವಾಮಿ ಅವರು ಆಯ್ಕೆಯಾಗಿದ್ದರು. ಇನ್ನೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಓರ್ವ ಮಾತ್ರ ಬಿಜೆಪಿ ಶಾಸಕರಿದ್ದಾರೆ, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಗಳ ದಂಡೇ ಸಜ್ಜಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+