ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ಡಿಕ್ಕಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 23 : ಎರಡು ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸಿದ ಪರಿಣಾಮ ಡಿಕ್ಕಿ ಸಂಭವಿಸಿ 12 ಬೋಗಿಗಳಿಗೆ ಹಾನಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಲೋಕಮಾನ್ ತಿಲಕ್ ಎಕ್ಸ್‌ಪ್ರೆಸ್ ಮತ್ತು ಸಿಕಂದರಾಬಾದ್ ರೈಲುಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. [ಹುಬ್ಬಳ್ಳಿ ರೈಲು ನಿಲ್ದಾಣದ ಕಟ್ಟಡ ಕುಸಿತ]

hubballi

ಎರಡೂ ರೈಲುಗಳು ಖಾಲಿಯಾಗಿದ್ದವು. ಬೋಗಿಗಳನ್ನು ಬದಲಾಯಿಸುತ್ತಿದ್ದ ಸಂದರ್ಭದಲ್ಲಿ ಡಿಕ್ಕಿ ಸಂಭವಿಸಿದೆ. ತಿಲಕ್ ಎಕ್ಸ್‌ಪ್ರೆಸ್ ರೈಲಿನ 12 ಖಾಲಿ ಬೋಗಿಗಳಿಗೆ ಅಪಘಾತದಲ್ಲಿ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಪ್ಪು ಸಿಗ್ನಲ್‌ನಿಂದಾಗಿ ಈ ಅಪಘಾತ ಸಂಭವಿಸಿದೆ. [ಅವ್ಯವಸ್ಥೆಯ ಗೂಡು ಹುಬ್ಬಳ್ಳಿ ರೈಲು ನಿಲ್ದಾಣ]
{gallery-feature_1}

ಈ ಅಪಘಾತದ ನಂತರ ಇಲಾಖೆಯ ಗ್ರೂಪ್‌ ಡಿ ದರ್ಜೆ ನೌಕರ (ಪಾಯಿಂಟ್‌ಮನ್‌) ಎಸ್‌.ಎಂ.ಮೂಲಿಮನಿ ಅವರನ್ನು ಅಮಾನತುಗೊಳಿಸಿ ನೈರುತ್ಯ ರೈಲ್ವೆಯ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಚಂದ್ರಶೇಖರ ಶಾಸ್ತ್ರಿ ಆದೇಶ ಹೊರಡಿಸಿದ್ದಾರೆ.

ಕಟ್ಟಡ ಕುಸಿದುಬಿದ್ದಿತ್ತು : 2016ರ ಫೆಬ್ರವರಿಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆಗೆ ಸೇರಿದ 50 ವರ್ಷ ಹಳೆಯ ಪಾರ್ಸೆಲ್ ಕಟ್ಟಡ ಕುಸಿದು ಬಿದ್ದಿತ್ತು. ಈ ಭೀಕರ ದುರಂತದಲ್ಲಿ ಈವರೆಗೆ 7 ಕ್ಕೂ ಅಧಿಕ ಜನರು ಜನರು ಮೃತಪಟ್ಟಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two empty trains colliding at the railway yard of Hubballi station resulting in damage to 12 coaches. The mishap also resulted in Platform No. 6 being shut for over four hours at the railway station on Friday, April 22, 2016.
Please Wait while comments are loading...