ಸಿಇಟಿಗೂ ಗ್ರೇಸ್ ಮಾರ್ಕ್, ತಾತ್ಕಾಲಿಕ ಉತ್ತರ ಇಲ್ಲಿದೆ
ಬೆಂಗಳೂರು, ಮೇ.17: ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳು ಕಂಡು ಬಂದಿದ್ದರಿಂದ ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಕೃಪಾಂಕ ನೀಡಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಈ ನಡುವೆ ಕೀ ಉತ್ತರಗಳು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಮೇ.18 ಕೊನೆ ದಿನಾಂಕವಾಗಿದೆ.
ಬ್ಲೋ-ಅಪ್ ಪಠ್ಯವಸ್ತುವಿನ ಗೊಂದಲ ಹಾಗೂ ಮುದ್ರಣ ದೋಷದಿಂದ ಕೃಪಾಂಕ ನೀಡುವುದು ಅನಿವಾರ್ಯ ಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಭೌತಶಾಸ್ತ್ರಕ್ಕೆ 2 ಅಂಕ ಹಾಗೂ ಗಣಿತಕ್ಕೆ 1 ಕೃಪಾಂಕ ಕೊಡಲಾಗುತ್ತಿದೆ.
ತಾತ್ಕಾಲಿಕ ಸರಿ ಉತ್ತರಗಳನ್ನು ಮೇ.15ರಂದೇಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ವಿಷಯ, ಕೋಡ್, ಪ್ರಶ್ನೆ ಸಂಖ್ಯೆಯೊಂದಿಗೆ [email protected] ಗೆ ಮೇ 18ರ ಸಂಜೆ 5.30ರೊಳಗೆ ಇಮೇಲ್ ಮಾಡಿ ತಿಳಿಸಿ.
ಪ್ರಾವಿಷನಲ್ ಕೀ ಉತ್ತರಗಳನ್ನು ಪಡೆಯಲು ಪ್ರಾಧಿಕಾರದ ಅಧಿಕೃತ ವೆಬ್ ತಾಣದ ಲಿಂಕ್ ಕ್ಲಿಕ್ ಮಾಡಿ
ಬಲ ಬದಿಯಲ್ಲಿ ಸಿಇಟಿ 2015 ಲಿಂಕ್ ಕ್ಲಿ ಮಾಡಿ ನಂತರ ಪ್ರಾವಿಷನಲ್ ಕೀ ಉತ್ತರ ಲಿಂಕ್ ಒತ್ತಿ ನಿಮ್ಮ ಉತ್ತರವನ್ನು ತಾಳೆ ಮಾಡಿ ನೋಡಿ

ಮೇ 26ರಂದು ಫಲಿತಾಂಶ ಪ್ರಕಟವಾಗಲಿದೆ. ರೈತರ ಮಕ್ಕಳಿಗೆ ಕೃಷಿ ಕೋಟಾ ಮೀಸಲಾತಿಯನ್ನು ಶೇ.23.8ರಿಂದ ಶೇ.40ಕ್ಕೆ ಹೆಚ್ಚಿಸಲಾಗಿದೆ.ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಕೇಂದ್ರ ಆರಂಭಿಸಿದ್ದು , 080-2346 0460ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಈ ಬಾರಿ ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications