ಕರ್ನಾಟಕ ಸಿಎಂ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ?, ತಿಳಿಯಿರಿ
ಬೆಂಗಳೂರು, ಜುಲೈ 24: ಆರ್ಥಿಕವಾಗಿ ಹಿಂದುಳಿದವರಿಗೆ, ಬಡತನದಲ್ಲಿ ಜೀವನ ಸಾಗಿಸುತ್ತಿರುವವರಿಗೆ, ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ, ವಿಶೇಷ ಚೇತನರ ಸಹಾಯ ಸೇರಿದಂತೆ ಹತ್ತು ಹಲವು ಕಾರಣಗಳಿಗಾಗಿ ಸರ್ಕಾರ, "ಮುಖ್ಯಮಂತ್ರಿ ಪರಿಹಾರ ನಿಧಿಯ ರೂಪ"ದಲ್ಲಿ ಹಣಕಾಸಿನ ನೆರವನ್ನು ಒದಗಿಸುತ್ತದೆ. ಈ ಇತ್ತೀಚಿನ ಕೆಲ ಬದಲಾವಣೆಗಳಿಂದ ಈ ಯೋಜನೆ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬ ಆರೋಪವು ಇದೆ.
ಅನಾರೋಗ್ಯದಂತಹ ಸಂಕಷ್ಟದ ಸಂದರ್ಭಗಳಲ್ಲಿ ಹಣದ ಅಗತ್ಯತೆ ಹೆಚ್ಚಿರುತ್ತದೆ. ಈ ವೇಳೆ ಸಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ನಿಮಗೆ ಸೂಕ್ತ ಮಾಹಿತಿ ಕೊರತೆ ಕಾಡುತ್ತಿದೆಯೆ?, ಯಾವ ದಾಖಲೆಗಳು ಬೇಕು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿ ತಿಳಿಯಿರಿ.

ಅರ್ಹ ಪಲಾನುಭವಿಗಳು ಸೇವಾಸಿಂಧು ಫೋರ್ಟಲ್ (https://sevasindhu.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ನೀವು ಹತ್ತಿರದ ಗ್ರಾಮ ಒನ್‌ಗೆ ಬೇಟಿ ನೀಡಬೇಕು. ಯಾರೆಲ್ಲ ಅರ್ಹರು ಎಂದು ನೋಡುವುದಾದರೆ, ಕಡುಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ, ನಿರುದ್ಯೋಗಿಗಳಿಗೆ, ದಿವ್ಯಾಂಗರು ಇದ ಸದುಪಯೋಗ ಮಾಡಿಕೊಳ್ಳಬೇಕು.
ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಆಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾದವರು ಅರ್ಜಿ ಸಲ್ಲಿಸಬಹುದು. ಆಕಸ್ಮಿಕ ದರ್ಘಟನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರಿಗೆ ವಿತರಿಸಲಾಗುತ್ತಿದೆ. ಇತ್ತೀಚೆಗೆ ಈ ಷರತ್ತುಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಸೇವಾ ಶುಲ್ಕ 30 ರೂ. ಬಿಟ್ಟು ಬೇರಾವ ಅರ್ಜಿ ಸಲ್ಲಿಕೆಗೆ ಶುಲ್ಕ ಇರುವುದಲ್ಲ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
1) ಅರ್ಜಿದಾರರ ಭಾವ ಚಿತ್ರ
2) ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಮೂಲ ಬಿಲ್‌ಗಳು
3) ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರ
4) ಬಿಪಿಎಲ್ ಪಡಿತರ ಚೀಟಿ
5) ಆಧಾರ್ ಗುರುತಿನ ಚೀಟಿ
6) ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪ್ರತಿ
7) ವಿಳಾಸ ದೃಢೀಕರಣ ದಾಖಲೆಗಳು
8) ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಅಗತ್ಯವಾಗಿರುತ್ತದೆ.
ನೀವು ಸಲ್ಲಿಸುವ ಅರ್ಜಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ವಿಷಯ ನಿರ್ವಾಹಕರು ಅವರಿಂದ ಪರಿಶೀಲನೆ ನಡೆಯುತ್ತದೆ. ನಂತರ ಅಧೀನ ಕಾರ್ಯದರ್ಶಿ/ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸುತ್ತಾರೆ. ಜಂಟಿ ಕಾರ್ಯದರ್ಶಿಯಿಂದ ಪರಿಶೀಲನೆ ನಡೆಸುತ್ತಾರೆ. ಲೆಕ್ಕಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ಮೊತ್ತವನ್ನು ಜಂಟಿ ಕಾರ್ಯದರ್ಶಿಗಳು ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.












Click it and Unblock the Notifications