ಮತದಾರರ ಮನೆ ಬಾಗಿಲಿಗೆ ತಲುಪುತ್ತಿದ್ದ ರಾಜಕೀಯ ಪಕ್ಷಗಳು ಈಗ ಜನರ ಕೈಗೆ ತಲುಪುತ್ತಿವೆ!
ಬೆಂಗಳೂರು, ಏಪ್ರಿಲ್. 25: ಅದೊಂದು ಕಾಲವಿತ್ತು ಮತದಾರರ ಮತ ಪಡೆಯಲು ರಾಜಕೀಯ ಪಕ್ಷಗಳು ನೇರವಾಗಿ ಜನರ ಬಳಿಗೆ ತಲುಪಬೇಕಿತ್ತು. ಅವರ ಊರಿಗಳಿಗೆ ತಿರುಗಿ ತಾವು ಮಾಡಿರುವ ಕೆಲಸಗಳ ಬಗ್ಗೆ ಅವರಿಗೆ ತಿಳಿಸಬೇಕು. ತಾವು ಯಾವ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ನಿಲ್ಲುತ್ತಿದ್ದೇನೆ, ಗೆದ್ದರೇ ಏನು ಮಾಡುತ್ತೇನೆ ಎಂದು ಜನರಿಗೆ ವಿವರಿಸಬೇಕಿತ್ತು.
ತಂತ್ರಜ್ಞಾನ ಬದಲಾದಂತೆ ಪೋಸ್ಟರ್‌ಗಳ ಮೂಲಕ ತಮ್ಮ ಕೆಲಸಗಳನ್ನು ಜನರಿಗೆ ತಿಳಿಸಲು, ಮತ ಕೇಳಲು ಆರಂಭಿಸಿದರು. ಎಷ್ಟೋ ಬಾರಿ ಜನರಿಗೆ ಚುನಾವಣೆಗೆ ನಿಂತಿರುವ ವ್ಯಕ್ತಿಯ ಪರಿಚಯ ಕೂಡ ಇರುತ್ತಿರಲಿಲ್ಲ. ಪತ್ರಿಕೆ, ರೇಡಿಯೋಗಳಲ್ಲಿ ಅವರ ಬಗ್ಗೆ ಬಂದದ್ದು, ಸಂದರ್ಶಗಳಲ್ಲಿ ಅವರು ಏನಾದರೂ ಮಾತನಾಡಿದ್ದರೇ ಮಾತ್ರ ವಾರ ಬಗ್ಗೆ ಜನರಿಗೆ ಕೊಂಚ ಮಾಹಿತಿ ದೊರೆಯುತ್ತಿತ್ತು.

ಆದರೆ, ಈಗ ಹಾಗಲ್ಲ. ತಂತ್ರಜ್ಞಾನ ಮುಂದುವರೆದಂತೆ ರಾಜಕೀಯ ಪಕ್ಷಗಳು ಕೂಡ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿವೆ. ಜನರ ಬಳಿಗೆ ಹೇಗೆಲ್ಲ ಆತಲುಪಲು ಸಾಧ್ಯವೂ ಆ ಎಲ್ಲಾ ಪ್ರಯತ್ನಗಳನ್ನು ಪಕ್ಷಗಳು ನಡೆಸುತ್ತಿವೆ. ಅಂಗೈ ಅಗಲದ ಮೊಬೈಲ್‌ಗಳು, ಟ್ಯಾಬ್‌ಗಳು, ಲ್ಯಾಪ್‌ಟಾಪ್‌ಗಳ ಮೂಲಕ ರಾಜಕೀಯ ಪಕ್ಷಗಳು ನೇರವಾಗಿ ಜನರ ಕೈಗಳಿಗೆ ತಲುಪುತ್ತಿವೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು!.
ಸಾಮಾಜಿಕ ಜಾಲತಾಣಗಳು ಕೇವಲ ವೈಯಕ್ತಿಕ ಬಳಕೆಗೆ ಎಂಬುದು ಹೋಗಿ ತುಂಬಾ ದಿನಗಳಾದವು. ಅಲ್ಲಿ ರಾಜಕೀಯ ಚರ್ಚೆಗೆ ಭಾರಿ ಪ್ರಾಮುಖ್ಯತೆಯಿದೆ. ಸ್ಮಾರ್ಟ್ ಫೋನ್‌ಗಳ ಈ ಯುಗದಲ್ಲಿ ಮತದಾರರನ್ನು, ಅದರಲ್ಲೂ ಯುವ ಮತದಾರರನ್ನು ತಲುಪಲು ಸಾಮಾಜಿಕ ಮಾಧ್ಯಮಗಳು ಭಾರಿ ಸಹಾಯಕವಾಗಿವೆ. ಚಿಕ್ಕ ಚಿಕ್ಕ ವಿಡಿಯೋಗಳ ಮೂಲಕ ಜನರನ್ನು ವೇಗವಾಗಿ ಮತ್ತು ತೀಕ್ಷ್ಣವಾಗಿ ತಲುಪಬಹುದು.
ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರ ಬಳಿ ಈಗ ಮೊಬೈಲ್ ಫೋನ್ ಇರುತ್ತದೆ. ಇದೇ ಕಾರಣಕ್ಕೆ ಮತದಾರರನ್ನು ಟಾರ್ಗೆಟ್ ಮಾಡಿರುವ ಪಕ್ಷಗಳು, ಚುನಾವಣಾ ಪ್ರಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತವೆ. ಪಕ್ಷಗಳ ಆರೋಪ- ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ ಈ ಜಾಲತಾಣಗಳು.
ಮೊದಲಿನಂತೆ ರಾಜಕಾರಣಿಗಳು ಏನಾದರೂ ಹೇಳಬೇಕಿದ್ದರೇ ಪತ್ರಿಕಾಗೋಷ್ಟ ಕರೆಬೇಕೆನ್ನುವ ನಿಯಮವಿಲ್ಲ ಈಗ. ತಮ್ಮ ಜಾಲತಾಣಗಳಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದರೂ ಸಾಕು. ಅದು ತಲುಪುವವರ ಬಳಿಗೆ ತಲುಪುತ್ತದೆ. ಈಗ ಚುನಾವಣಾ ಸಮಯವಾಗಿರುವ ಕಾರಣ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ, ಕೆಆರ್‌ಎಸ್ ಸೇರಿದಂತೆ ಹಲವು ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಖಾತೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿವೆ. ಈಗಾಗಲೇ ತಮ್ಮ ಚುನಾವಣಾ ಅಜೆಂಡಾ, ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರು, ಪ್ರಣಾಳಿಕೆ, ಪ್ರತಿಪಕ್ಷಗಳ ವಿರುದ್ಧ ಆರೋಪ ಎಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿಯೇ ಮೊದಲು ಪ್ರಕಟಿಸುತ್ತಿವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.
ಚುನಾವಣಾ ಪ್ರಚಾರವನ್ನು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕವೇ ಆರಂಭಿಸಿರುವ ರಾಜಕೀಯ ಪಕ್ಷಗಳ ಮುಂದಿನ ಅಜೆಂಡಾ ಸಿದ್ಧವಾಗುವುದು ಕೂಡ ಇದಕ್ಕೆ ಸಿಗುವ ಪ್ರತಿಕ್ರಿಯೆಗಳ ಮೇಲೆಯೇ. ಮತದಾರರನ್ನು ಮಾತ್ರವಲ್ಲದೇ ಪಕ್ಷಗಳ ರಾಜಕೀಯ ಸುದ್ದಿಗಳಿಗಾಗಿ ಸುದ್ದಿ ಮಾಧ್ಯಮಗಳು ಕೂಡ ಇವುಗಳನ್ನೇ ಅವಲಂಬಿಸಿರುವುದು ಒಂಥರಾ ಆಶ್ವರ್ಯವೇ ಸರಿ.
ಸಾಮಾಜಿಕ ಮಾಧ್ಯಮಗಳ ಬಳಕೆ ರಾಜಕೀಯ ಪಕ್ಷಗಳಿಗೆ ಅನುಕೂಲದ ಜೊತೆಗೆ ಅನಾನುಕೂಲ ಕೂಡ ಉಂಟು ಮಾಡಲಿದೆ. ಪ್ರತಿಪಕ್ಷಗಳ ಆರೋಪಗಳ ಸುಳ್ಳು ಸುದ್ದಿಗಳನ್ನು ನಂಬುವವರಿಂದ ಮತಗಳ ಸಂಖ್ಯೆ ಕೂಡ ಕಡಿಮಯಾಗಬಹುದು. ಒಟ್ಟಾರೆ, ಒಂದು ಕಾಲದಲ್ಲಿ ರಾಜಕೀಯ ನಾಯಕರ ಮುಖ ಪರಿಚಯವಿಲ್ಲದೇ ಮತ ಹಾಕುತ್ತಿದ್ದವರು, ಇಂದು ತಾವು ಮತ ಹಾಕುವ ಅಭ್ಯರ್ಥಿಯ ಪೂರ್ತಿ ವಿವರಗಳು ತಮ್ಮ ಅಂಗೈಯಲ್ಲಿ ಹಿಡಿದು ಮತ ಹಾಕುವ ಹಂತಕ್ಕೆ ಬಂದಿದ್ದಾರೆ.












Click it and Unblock the Notifications