ರಕ್ಕಸನಂತೆ ಕಾಡುತ್ತಿರುವ H3N2 ವೈರಸ್ ಬಗ್ಗೆ ಭಯ ಯಾಕೆ? ಇಲ್ಲಿದೆ ನೋಡಿ ನಿಯಂತ್ರಣಕ್ಕೆ ಮನೆಮದ್ದು!
ಕೊರೊನಾ ನಂತರ H3N2 ವೈರಸ್ ಕೇಸ್ ಗಳು ಪತ್ತೆಯಾಗಿದ್ದು, ಈ ವೈರಸ್ ನಿಯಂತ್ರಣಕ್ಕೆ ಮನೆ ಮದ್ದು ಇಲ್ಲಿದೆ ನೋಡಿ
ಬೆಂಗಳೂರು,ಮಾರ್ಚ್ 16: ವಿಶ್ವದಾದ್ಯಂತ ಕಾಡಿದ್ದ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಕಡಿಮೆಯಾಗಿ ಜನರು ಚೇತರಿಸಿಕೊಳ್ಳುವಷ್ಟರಲ್ಲಿ ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಈ ವೈರಸ್ ನಿಂದ ಜನರು ಮತ್ತೆ ಆತಂಕಕ್ಕಿಡಾಗಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಸದ್ಯ ಕರ್ನಾಟಕದಲ್ಲಿ ಈವರೆಗೆ ಎಚ್3ಎನ್2 ವೈರಸ್ 26 ಮಂದಿಯಲ್ಲಿ ಪತ್ತೆಯಾಗಿದ್ದು, ನವದೆಹಲಿ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಹಾವಳಿ ಹೆಚ್ಚಾಗಿದೆ. ಇದಕ್ಕೆ ಎಚ್3ಎನ್2 ವೈರಸ್ ಕಾರಣವಾಗಿದ್ದು, ಕಳೆದ ಎರಡು ತಿಂಗಳಿನಿಂದ ಈ ಕುರಿತು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.ಅಲ್ಲದೇ ಬೇಸಿಕೆ ಕಾಲ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ಎಚ್3ಎನ್2 ವೈರಸ್ ಕೇಸ್ ಗಳು ಪತ್ತೆಯಾಗುತ್ತಿದ್ದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರು, ತಾಂತ್ರಿಕಾ ಸಲಹಾ ಸಭೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಕ್ಕೆ ಚಿಂತನೆ ನಡೆಸಿದ್ದು, ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಡಾ.ಸುಧಾಕರ್ ಹೇಳಿದ್ದಾರೆ.
ಇನ್ನೂ ಗರ್ಭಿಣಿ ಹೆಂಗಸರು, ಮಕ್ಕಳು ಸಹ ಅಗತ್ಯ ಮುಂಜಾಗೃತೆ ವಹಿಸಬೇಕು. ಇವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಈ ವೈರಸ್ ಬೇಗ ತಗುಲುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಜ್ವರ ಕೆಮ್ಮು, ಶೀತ ಜ್ವರದಂತೆ ಅನಾರೋಗ್ಯ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಬೇಕು. ಸದ್ಯಕ್ಕೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

H3N2 ವೈರಸ್ ನಿಯಂತ್ರಣಕ್ಕೆ ಮನೆಮದ್ದು!
ಕೊರೊನಾ ನಂತರ H3N2 ವೈರಸ್ ಕೇಸ್ ಗಳು ಪತ್ತೆಯಾಗಿದ್ದು, H3N2 ನಿಂದ ಹೆಚ್ಚಿನ ರೋಗಿಗಳು ದೇಹದ ನೋವು, ಜ್ವರ, ಶೀತ, ಆಯಾಸ, ಅತಿಸಾರ, ವಾಂತಿ, ಕೆಮ್ಮು, ಗಂಟಲು ನೋವು, ಮತ್ತು ತಲೆನೋವು ಮುಂತಾದ ಲಕ್ಷಣ ಕಂಡು ಬರುತ್ತವೆ.
ಇನ್ನೂ ಕೆಮ್ಮು ರೋಗಿಗಳನ್ನು ಹೆಚ್ಚು ಕಾಡುತ್ತಿದೆ. H3N2 ವೈರಸ್ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು. ಗಂಟಲು, ಮೂಗು, ಶ್ವಾಸನಾಳ, ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ.

ಈ ಸೋಂಕಿಗೆ ಗುರಿಯಾಗುವ ರೋಗಿಗಳಲ್ಲಿ ಕೆಮ್ಮು ತಿಂಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಕೆಲವು ಎದೆಯಲ್ಲಿ ನೋವು, ರೋಗಿಗಳಲ್ಲಿ ಪಕ್ಕೆಲುಬುಗಳು ಸಹ ಮುರಿತವಾಗಿವೆ. ಇದನ್ನು ಹೋಗಲಾಡಿಸಲು ತುಳಸಿಯ ಕಷಾಯ ಕುಡಿಯಿರಿ. ಆಯುರ್ವೇದದ ಪ್ರಕಾರ ತುಳಸಿಯು ಶೀತ ಮತ್ತು ಕೆಮ್ಮಿಗೆ ಪರಿಣಾಮಕಾರಿಯಾಗಿದೆ.
ತುಳಸಿ ಕಷಾಯ ಮಾಡಲು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು, ಕುದಿಸಿ, ಶುಂಠಿ ಮತ್ತು 5-6 ಕರಿಮೆಣಸು ಸೇರಿಸಿ ಕುದಿಸಿ. ಚಿಟಿಕೆ ಕಪ್ಪು ಉಪ್ಪು ಸೇರಿಸಿ ಮತ್ತು ಅದರಲ್ಲಿ ಅರ್ಧ ನಿಂಬೆ ಹಿಂಡಿ. 1 ನಿಮಿಷ ಬಿಡಿ. ನಂತರ ಶೋಧಿಸಿ ಮತ್ತು ಬಿಸಿಯಾಗಿ ಕುಡಿದರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಗಂಟಲು ನೋವನ್ನು ಕಡಿಮೆ ಮಾಡಲು ಹಾಗೂ ಕಫ ಕಡಿಮೆ ಮಾಡಲು ಜೇನುತುಪ್ಪ ಮತ್ತು ಶುಂಠಿ ರಸ ಸೇವಿಸಿರೀ. ಎದೆಯ ಬಿಗಿತಕ್ಕೆ ಪರಿಹಾರ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ತಿನ್ನಿ. ಚಮಚ ಜೇನುತುಪ್ಪ, ಅದಕ್ಕೆ 1 ಚಮಚ ಶುಂಠಿ ರಸ ಮತ್ತು 1 ಚಿಟಿಕೆ ಕರಿಮೆಣಸು ಸೇರಿಸಿ. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ತಿದ್ದರೆ ಗಂಟಲು ಸಮಸ್ಯೆ ಪರಿಹಾರವಾಗುತ್ತದೆ.
ಒಣ ಶುಂಠಿಯನ್ನು ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು ಮತ್ತು ಶೀತ ಕಡಿಮೆಯಾಗುತ್ತದೆ. ನೋಯುತ್ತಿರುವ ಗಂಟಲು ಕಡಿಮೆ ಮಾಡುತ್ತದೆ. 1/4 ಚಮಚ ಒಣ ಶುಂಠಿ, ಚಮಚ ಜೇನುತುಪ್ಪ ಸೇರಿಸಿ 3 ದಿನ ತಿನ್ನುವುದರಿಂದ ಕೆಮ್ಮು ಮತ್ತು ಶೀತ ಕಡಿಮೆಯಾಗುತ್ತದೆ.
ಶೀತ ಮತ್ತು ಗಲಗ್ರಂಥಿಯ ಉರಿಯೂತ ಇರುವವರು ಗಿಲೋಯ್ ರಸವನ್ನ ಸೇವಿಸುವುದರಿಂದ ಶೀತ ಮತ್ತು ಕೆಮ್ಮನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಗಿಲೋಯ್ ರಸವನ್ನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಗಿಲೋಯ್ ರಸವನ್ನು ಬೆಚ್ಚಗಿನ ನೀರಿನ ಜೊತೆ ಕುಡಿದರೇ ಆರೋಗ್ಯಕ್ಕೆ ಉತ್ತಮ.












Click it and Unblock the Notifications