School Holiday: ಫೆಬ್ರವರಿ 26ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ
School Holiday: ವಿಶೇಷ ಕಾರ್ಯಕ್ರಮಗಳು, ಹಬ್ಬಗಳ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಈ ಬಾರಿ ಅಂದರೆ 2025ರ ಜನವರಿ ಆರಂಭದಿಂದ ಇಲ್ಲಿಯವರೆಗೂ ಕೆಲವು ರಾಜ್ಯಗಳಲ್ಲಿ ಸಾಲು ರಜೆಗಳನ್ನು ನೀಡಲಾಗಿದೆ. ಹಾಗೆಯೇ ಇದೀಗ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳು ರಜೆ ಇರಲಿದೆ. ಹಾಗಾದರೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಹಬ್ಬಗಳು, ವಿಶೇಷ ಕಾರ್ಯಕ್ರಮಗಳು, ಪ್ರಕೃತಿ ವಿಕೋಪದಿಂದ ತೊಂದರೆ ಆಗುವಂತಹ ಮುನ್ಸೂಚನೆ ಸಮಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದರೆ, ಇದೀಗ 2025ರ ಫೆಬ್ರವರಿ 26ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.

ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಮೂರು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಈ ದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಿವೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿನ ಶಾಲಾ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಶಿವರಾತ್ರಿಯ ಒಂದು ದಿನದ ರಜೆಯನ್ನು ಘೋಷಿಸಿವೆ.
ಫೆಬ್ರವರಿ 15 ರಂದು ಬಂಜಾರರು ಪೂಜಿಸುವ ಸಂತ ಸೇವಾಲಾಲ್ ಮಹಾರಾಜರ ಜಯಂತಿಯ ಹಿನ್ನೆಲೆ ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಬಂಜಾರ ಜನರು ಸೇರುತ್ತಾರೆ. ಹಿಂದಿನಿಂದಲೂ ಸಹ ಬಂಜಾರ ಸಮುದಾಯದವರು ಈ ದಿನವನ್ನು ಸರ್ಕಾರಿ ರಜಾ ದಿನವೆಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಇನ್ನು ಕಳೆದ ವರ್ಷ ಸರ್ಕಾರವು ಸೇವಾಲಾಲ್ ಜಯಂತಿಯನ್ನು ಐಚ್ಛಿಕ ರಜಾದಿನ ಎಂದು ಘೋಷಣೆ ಮಾಡಿತು. ಈಗ ಸಹ ಅದೇ ರಜೆ ನೀಡುವಂತೆ ಇಲ್ಲಿನ ಸಮುದಾಯದವರು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಫೆಬ್ರವರಿ 16 ಭಾನುವಾರ ಆಗಿರುವುದರಂದ ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಬ್ಯಾಂಕ್‌ಗಳಿಗೆ ರಜೆ ಇದ್ದೇ ಇರುತ್ತದೆ. ಒಟ್ಟಿನಲ್ಲಿ ಈ ಮೂಲಕ ತೆಲಂಗಾಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನ ಸಿಕ್ಕಂತಾಗಲಿದೆ. ಹಿಂದೆ ಒಂದಲ್ಲ ಆಚರಣೆಗಳು ನಡೆಯುತ್ತಲೇ ಇವೆ.
ಕೆಲವೊಂದು ರಾಜ್ಯಗಳಲ್ಲಿ ಅವರದ್ದೇ ಸಂಸ್ಕೃತಿ ಪ್ರತಿಬಿಂಬಿಸುವಂತಹ ಹಬ್ಬಗಳಿಗೆ ಸರ್ಕಾರಿ ರಜೆ ಇಲ್ಲದಿದ್ದರೂ ಶಾಲಾ-ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಸರ್ಕಾರಿ ರಜೆಗಳನ್ನು ಮಾತ್ರ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ವಿಶೇಷ ಕಾರ್ಯಕ್ರಮ ಹಾಗೂ ಹೋರಾಟ ಹಿನ್ನೆಲೆ ರಜೆ ಘೋಷಿಸಲಾಗಿದೆ.












Click it and Unblock the Notifications