ಡಾ.ಹೊ.ಶ್ರೀನಿವಾಸಯ್ಯ ಅವರಿಗೆ ಗಾಂಧಿ ಸೇವಾ ಪುರಸ್ಕಾರ

ಬೆಂಗಳೂರು, ಸೆಪ್ಟೆಂಬರ್ 30 : ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ.ಹೊ.ಶ್ರೀನಿವಾಸಯ್ಯ ಅವರಿಗೆ 2015ನೇ ಸಾಲಿನ ಕರ್ನಾಟಕ ಗಾಂಧಿ ಸೇವಾ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷದಿಂದ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ ಸೇವಾ ಪ್ರಶಸ್ತಿಯನ್ನು ನೀಡುತ್ತಿದೆ.

ಗಾಂಧಿ ತತ್ವಗಳನ್ನು ಅನುಷ್ಠಾನಕ್ಕೆ ತಂದು, ಅವರ ಚಿಂತನೆಗಳಲ್ಲೇ ಬದುಕುತ್ತಿರುವ ಗಣ್ಯರನ್ನು ಗೌರವಿಸಲು ಕರ್ನಾಟಕ ಸರ್ಕಾರ 2014ರಿಂದ 'ಕರ್ನಾಟಕ ಗಾಂಧಿ ಸೇವಾ ಪ್ರಶಸ್ತಿ'ಯನ್ನು ನೀಡುತ್ತಿದೆ. ಪ್ರಶಸ್ತಿಯು 5 ಲಕ್ಷ ರೂ.ಗಳ ನಗದು ಪುರಸ್ಕಾರ ಒಳಗೊಂಡಿದೆ.

karnataka government

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ, ಗರುಡನಗಿರಿ ನಾಗರಾಜ್, ಡಾ.ವೂಡೇ. ಪಿ. ಕೃಷ್ಣ ಮತ್ತು ಇಂದಿರಾ ಕೃಷ್ಣಪ್ಪ ಅವರ ನೇತೃತ್ವದ ಸಮಿತಿ ಕರ್ನಾಟಕ ಗಾಂಧಿ ಸೇವಾ ಪ್ರಶಸ್ತಿ 2015ಕ್ಕೆ ಡಾ.ಹೊ. ಶ್ರೀನಿವಾಸಯ್ಯ ಅವರನ್ನು ಆಯ್ಕೆ ಮಾಡಿದೆ. [ನೂರು ವರ್ಷಗಳ ಹಿಂದೆ ಬಾಪು ಕನ್ನಡ ನಾಡಿಗೆ ಕಾಲಿಟ್ಟ ಆ ಕ್ಷಣ!]

ಮಧ್ಯಪ್ರದೇಶದ ಚಂಬಲ್ ಕಣಿವೆಯ ಡಕಾಯಿತರ ಮನಪರಿವರ್ತನೆ ಮಾಡಿ ಅವರನ್ನು ಮುಖ್ಯವಾಹಿನಿಗೆ ತಂದ ಗಾಂಧಿವಾದಿ ಡಾ. ಎಸ್. ಎನ್.ಸುಬ್ಬರಾವ್ ಅವರಿಗೆ 2014ನೇ ಸಾಲಿನ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ನೀಡಲಾಗಿತ್ತು. [ಸುಬ್ಬುರಾವ್ ಅವರಿಗೆ ಗಾಂಧಿ ಪ್ರಶಸ್ತಿ]

ಶ್ರೀನಿವಾಸಯ್ಯ ಅವರ ಪರಿಚಯ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೌದರಿ ಕೊಪ್ಪಲು ಗ್ರಾಮದಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಸ್ಥಾನದವರೆಗೆ ನಡೆದುಬಂದ ಶ್ರೀನಿವಾಸಯ್ಯ ಅವರ ಹಾದಿ ಕಠಿಣ ಪರಿಶ್ರಮದ್ದು.

ಚೌದರಿ ಕೊಪ್ಪಲನ್ನು ಮಾದರಿ ಗ್ರಾಮ ಮಾಡಿ, ಗಾಂಧಿ ದರ್ಶನಕ್ಕೊಂದು ಆಯಾಮ ಕಲ್ಪಿಸಿಕೊಟ್ಟವರು ಶ್ರೀನಿವಾಸಯ್ಯ. 20,000 ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತು ಪ್ರವಚನ ನೀಡಿ ಯುವ ಮನಗಳಿಗೆ ಕ್ರಿಯಾತ್ಮಕ ಆಯಾಮ ಕಟ್ಟಿಕೊಟ್ಟ ಶ್ರೀನಿವಾಸಯ್ಯ ಅವರು 200ಕ್ಕೂ ಹೆಚ್ಚು ಗಾಂಧಿ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಕಾರಣರಾಗಿದ್ದಾರೆ.

ಬಡವರ ಕಂಬನಿಯೊರೆಸಲು ಸಹಕಾರ ತತ್ವದ ಮೇಲೆ ಸಹಕಾರಿ ಬ್ಯಾಂಕ್‌ಗಳನ್ನು ಪ್ರಾರಂಭಿಸಿದ್ದಾರೆ. ಗಾಂಧೀಜಿಯವರ ಕುರಿತು ಹಲವಾರು ಕೃತಿ ರಚಿಸಿ, ಗಾಂಧಿಜೀಯವರ ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಿದ್ದಾರೆ. ಶ್ರೀನಿವಾಸಯ್ಯ ಅವರ 'ನಾ ಕಂಡ ಜರ್ಮನಿ' ಪುಸ್ತಕ ಶ್ರೇಷ್ಠ ಪ್ರವಾಸಕಥನವಾಗಿ, ಪಠ್ಯವಾಗಿ ಸಾಹಿತ್ಯಾಸಕ್ತರ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+