ಮುಜರಾಯಿ ದೇವಾಲಯಕ್ಕೆ ವಾರ್ಷಿಕ 36 ಸಾವಿರ ಅನುದಾನ

ಬೆಂಗಳೂರು, ಜೂ. 16 : ಮುಜರಾಯಿ ಇಲಾಖೆ ದೇವಾಲಯಗಳಿಗೆ ವಾರ್ಷಿಕವಾಗಿ ನೀಡುತ್ತಿರುವ ಪೂಜಾ ಕೈಂಕರ್ಯ ವೆಚ್ಚವನ್ನು 36 ಸಾವಿರ ರೂ.ಗಳಿಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಸಚಿವರು, ದೇವಾಲಯಗಳ ನಿರ್ವಹಣೆಗೆ ಅನುಕೂಲವಾಗುವಂತೆ ವಾರ್ಷಿಕ 'ತಸ್ತಿಕ್‌' (ಪೂಜಾ ಕೈಂಕರ್ಯ ವೆಚ್ಚ)ವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ 24 ಸಾವಿರ ರೂ.ಗಳನ್ನು ನೀಡುತ್ತಿದ್ದು, ಇದನ್ನು 36 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ ಎಂದರು. [ದೇವಾಲಯದ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

muzrai department

ರಾಜ್ಯದಲ್ಲಿ 35, 685 ಮುಜರಾಯಿ ದೇವಾಲಯಗಳಿವೆ. ಇವುಗಳಲ್ಲಿ ಬಹುತೇಕ ದೇವಾಲಯಗಳು 'ಸಿ' ದರ್ಜೆಗೆ ಸೇರಿವೆ. 'ಎ ಮತ್ತು 'ಬಿ' ದರ್ಜೆಯ 320 ದೇವಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು 400 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. [ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?]

ಸ್ವಚ್ಛ ಮಂದಿರ ಅಭಿಯಾನ : ವಿವಿಧ ಸಂಘ ಸಂಸ್ಥೆಗಳ ಸಲಹೆಯಂತೆ ಇಲಾಖೆ 'ಸ್ವಚ್ಛ ಮಂದಿರ ಅಭಿಯಾನ'ವನ್ನು ಆರಂಭಿಸಿದೆ. ಜನರ ಸಹಭಾಗಿತ್ವದಲ್ಲಿ ದೇವಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳಲು ಅರ್ಚಕರು ಶ್ರಮಿಸಬೇಕು. ದೇವಾಲಯದ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಾಯ ಮಾಡುವ ಜನರಿದ್ದು, ಅವರನ್ನು ಗುರುತಿಸಿ ಮನವೊಲಿಸುವ ಕೆಲಸ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

ತರಬೇತಿ ಕೋರ್ಸ್ : ಅರ್ಚಕ ವೃತ್ತಿ ತರಬೇತಿ ಕೋರ್ಸ್‌ ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ, ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅರ್ಚಕರ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಸಚಿವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+