ಹಿಜಾಬ್ ವಿವಾದ: ಹೈಕೋರ್ಟ್ ಎತ್ತಿದ ಆ ನಾಲ್ಕು ಪ್ರಶ್ನೆಗಳು ಮತ್ತು ಉತ್ತರಗಳೇನು?

ಬೆಂಗಳೂರು, ಮಾ.15: ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್ ನ ಪೂರ್ಣ ಪೀಠದ ತೀರ್ಪಿನಿಂದಾಗಿ ಸದ್ಯ ಒಂದು ಘಟ್ಟಕ್ಕೆ ತಲುಪಿದೆ.

ಆದರೆ ಈ ಕಾನೂನು ಹೋರಾಟ ಇಲ್ಲಿಗೆ ಮುಗಿಯವುದಿಲ್ಲ, ಇದು ಸುಪ್ರೀಂಕೋರ್ಟ್ ಗೆ ಹೋಗುವುದು ನಿಶ್ಚಿತ. ಆದರೂ ಹೈಕೋರ್ಟ್ ಎಲ್ಲ ಸಾಂವಿಧಾನಿಕ, ಧಾರ್ಮಿಕ ಮತ್ತಿತರ ಸೂಕ್ಷ್ಮ ಅಂಶಗಳನ್ನು ಪರಿಶೀಲಿಸಿ ಮಹತ್ವದ ತೀರ್ಪು ನೀಡಿದೆ. ಅದರಲ್ಲಿ ನ್ಯಾಯಪೀಠ ಸತತ 11 ದಿನ ಆಲಿಸಿದ ವಾದ-ಪ್ರತಿವಾದಗಳನ್ನು ಆಧರಿಸಿ ನಾಲ್ಕು ಪ್ರಶ್ನೆಗಳನ್ನು ರಚಿಸಿ, ಅವುಗಳಿಗೆ ಉತ್ತರವನ್ನು ನೀಡಿದೆ.

ಹಿಜಾಬ್ ನಿರ್ಬಂಧ ಪ್ರಶ್ನಿಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ, ಹಿಜಾಬ್ ಧಾರಣೆ ಇಸ್ಲಾಂನ ಅಗತ್ಯ ಧಾರ್ಮಿಕ ಪದ್ದತಿಯಲ್ಲ, ಸರಕಾರಕ್ಕೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರವಿದೆ ಎಂದು ಆದೇಶಿಸಿದೆ.

Hijab Row: What Are the Four Questions and Answers Raised by the High Court?

ಹೈಕೋರ್ಟ್ ಎತ್ತಿರುವ ನಾಲ್ಕು ಪ್ರಶ್ನೆಗಳು ಮತ್ತು ಉತ್ತರಗಳು ಹೀಗಿವೆ:

ಪ್ರಶ್ನೆ-1: ಹಿಜಾಬ್ ಧಾರಣೆ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಪದ್ದತಿಯೇ? ಅದಕ್ಕೆ ಸಂವಿಧಾನದ ಕಲಂ 25ರಡಿ ಮೂಲಭೂತ ಹಕ್ಕಿನ ರಕ್ಷಣೆ ಇದೆಯೇ?

ಉತ್ತರ: ಹಿಜಾಬ್ ಧರಿಸುವುದು ಇಸ್ಲಾಂನ ಧಾರ್ಮಿಕ ಅತ್ಯಗತ್ಯ ಪದ್ದತಿಯಲ್ಲ. ಹಾಗಾಗಿ ಅದಕ್ಕೆ ಸಂವಿಧಾನದ ಕಲಂ 25ರಡಿ ರಕ್ಷಣೆ ನೀಡಲಾಗದು

ಪ್ರಶ್ನೆ:2: ಸಮವಸ್ತ್ರ ನಿಗದಿ ಮಾಡಲು ಕಾನೂನಿನಲ್ಲಿ ಮಾನ್ಯತೆ ಇದೆಯೇ? ಇದರಿಂದ ಸಂವಿಧಾನದ ಕಲಂ 19 ರಡಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗಲಿದೆಯೇ?

ಉತ್ತರ: ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಸರಕಾರಕ್ಕೆ ಇದೆ, ಕಾನೂನಿನಲ್ಲೂ ಅದಕ್ಕೆ ಮಾನ್ಯತೆ ಇದೆ. ಸಮವಸ್ತ್ರ ನಿಗದಿ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದು, ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದು.

ಪ್ರಶ್ನೆ-3: ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿಪಡಿಸುವ ಹೊಣೆ ಸ್ಥಳೀಯ ಕಾಲೇಜು ಅಭಿವೃದ್ಧಿ ಮಂಡಳಿಗೆ ವಹಿಸಿ ಸರಕಾರ 2022ರ ಫೆ.5ರಂದು ಹೊರಡಿಸಿರುವ ಆದೇಶ ಕಾನೂನುಬಾಹಿರ ಕ್ರಮವೇ, ಅದಕ್ಕೆ ಸರಕಾರಕ್ಕೆ ಅಧಿಕಾರವಿಲ್ಲವೇ?

ಉತ್ತರ: ಸರಕಾರದ ಫೆ.5ರ ಆದೇಶ ಕಾನೂನು ಬದ್ಧವಾಗಿದೆ, ಅಂತಹ ಆದೇಶ ಹೊರಡಿಸಲು ಸರಕಾರಕ್ಕೆ ಅಧಿಕಾರವೂ ಇದೆ. ಸರಕಾರ ಕೆಲವೊಂದು ನಿರ್ಬಂಧಗಳನ್ನು ಹೇರಬಹುದಾಗಿದೆ.

ಪ್ರಶ್ನೆ-4: ಪ್ರಕರಣದಲ್ಲಿ ಹಿಜಾಬ್ ಧರಿಸಬಾರದೆಂದು ನಿರ್ದೇಶನ ನೀಡಿದ್ದ ಕಾಲೇಜು ಮತ್ತು ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಬಾರದೇ?

ಉತ್ತರ: ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ವಾದಾಂಶದಲ್ಲಿ ಯಾವುದೇ ಹುರುಳಿಲ್ಲ. ಮತ್ತು ಸರ್ಕಾರ ವಸ್ತ್ರ ಸಂಹಿತೆ ಸಂಬಂಧ ನೀಡಿರುವ ನಿರ್ದೇಶನ ಸರಿ ಇದೆ. ಹಾಗಾಗಿ ಅರ್ಜಿದಾರರ ವಾದದಲ್ಲಿ ಯಾವುದೇ ಮೆರಿಟ್ ಇಲ್ಲವಾದ್ದರಿಂದ ಈ ಅಂಶ ಪರಿಗಣಿಸಲಾಗದು.

129 ಪುಟಗಳ ತೀರ್ಪು:

ಹಿಜಾಬ್ ಸಂಬಂಧ ನ್ಯಾಯಾಲಯ ನೀಡಿರುವ 129 ಪುಟಗಳ ತೀರ್ಪಿನಲ್ಲಿ ಅರ್ಜಿದಾರರು, ಸರಕಾರ ಮತ್ತು ಎಲ್ಲ ಪ್ರತಿವಾದಿಗಳು ಮಂಡಿಸಿದ ವಾದ-ಪ್ರತಿವಾದಗಳನ್ನು ದಾಖಲು ಮಾಡಲಾಗಿದೆ.

ಎಜಿ ಪ್ರತಿಕ್ರಿಯೆ:

ಹೈಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರದ ಎಲ್ಲ ವಾದಗಳನ್ನು ಪುರಸ್ಕರಿಸಿ ನ್ಯಾಯಾಲಯ ವಿವಾದಕ್ಕೆ ಅಂತ್ಯ ಹಾಡಿದೆ. ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ, ಅದನ್ನು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ, ವಸ್ತ್ರ ಸಂಹಿತೆ ನಿಗದಿಗೆ ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+