ಹಿಜಾಬ್ ವಿವಾದದ ಹಿಂದೆ ಸಿದ್ದರಾಮಯ್ಯ ಪ್ರಚೋದನೆಯೇ ನೇರ ಹೊಣೆ: ಬಿಜೆಪಿ
ಬೆಂಗಳೂರು, ಫೆಬ್ರವರಿ 8: ರಾಜ್ಯದ ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಕರ್ನಾಟಕದಾದ್ಯಂತ ವ್ಯಾಪಿಸಿದೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಹಿಜಾಬ್ ವಿವಾದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕರ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.
Koo Appಮೂಲಭೂತವಾದಿಗಳಿಗೆ ಸಂವಿಧಾನದ ಗುರಾಣಿ ಕೊಡುವ ಸಿದ್ದರಾಮಯ್ಯ ಅವರಿಗೆ ಸಂವಿಧಾನದ 25ನೇ ವಿಧಿಯ 2(ಎ), 2(ಬಿ) ಏನು ಹೇಳುತ್ತದೆ ಎಂಬುದು ತಿಳಿಯದಾದುದು ವಿಪರ್ಯಾಸ. ಶಾಂತಿಭಂಗ, ಸಾರ್ವಭೌಮತೆಗೆ ಧಕ್ಕೆಯಾದಾಗ ಸರ್ಕಾರಕ್ಕೆ ಧಾರ್ಮಿಕ ಹಕ್ಕನ್ನು ನಿರ್ಬಂಧಿಸುವ ಅಧಿಕಾರವೂ ಇದೆ. ಈಗ ನಡೆಯುತ್ತಿರುವುದು ಶಾಂತಿಭಂಗದ ಯತ್ನ. #YesToUniform_NoToHijab - BJP KARNATAKA (@BJP4Karnataka) 8 Feb 2022
ಮಂಗಳವಾರ ಉಡುಪಿ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕಾಲೇಜುಗಳ ಮೇಲೆ ಕಿಡಿಗೇಡಿಗಳ ಗುಂಪು ಕಲ್ಲುತೂರಾಟ ನಡೆಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಸ್ ಮೇಲೆ ಕಲ್ಲು ತೂರಲಾಗಿದೆ. ಅದೇ ರೀತಿ ಬಾಗಲಕೋಟೆಯ ರಬಕವಿ ಬನಹಟ್ಟಿ ಪಟ್ಟಣದಲ್ಲೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
Koo App1983 ರ ಶಿಕ್ಷಣ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಹಿಜಾಬ್ ಒಳಗಿರುವ ಮತ ಪಡೆಯಲು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎನ್ನುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. #YesToUniform_NoToHijab - BJP KARNATAKA (@BJP4Karnataka) 8 Feb 2022
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ ಬಿಜೆಪಿ ಸರಣಿ ಕೂ ಸಂದೇಶಗಳನ್ನು ಮಾಡಿದೆ. ಮಾಜಿ ಮುಖ್ಯಮಂತ್ರಿ ನೀಡಿರುವ ಪ್ರಚೋದನಕಾರಿ ಹೇಳಿಕೆಯಿಂದ ಹಿಜಾಬ್ ವಿವಾದ ತಾರಕಕ್ಕೇರಲು ಕಾರಣ ಎಂದು ಬಿಜೆಪಿ ದೂಷಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹಿಜಾಬ್ ವಿವಾದಕ್ಕೆ ಸಿದ್ದರಾಮಯ್ಯ ನೇರ ಕಾರಣ
"ಆರಂಭದಲ್ಲಿ ಕೇವಲ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದು, ಸಮವಸ್ತ್ರ ನಿಯಮ ಉಲ್ಲಂಘಿಸಿದರು. ಇವರಿಗೆ ಪ್ರಚೋದನೆ ನೀಡಿದ ಪರಿಣಾಮ, ಈಗ ಇಡೀ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿವಾದ ಹಬ್ಬಿದೆ. ಸಿದ್ದರಾಮಯ್ಯ ಅವರ ಹಿಜಾಬ್ ಮೂಲಭೂತ ಹಕ್ಕು ಎಂಬ ಪ್ರಚೋದನೆಯೇ ಇದಕ್ಕೆ ನೇರ ಕಾರಣ," ಎಂದು ಕರ್ನಾಟಕ ಬಿಜೆಪಿ ಕೂ ಮಾಡಿದೆ.

ಸಿದ್ದರಾಮಯ್ಯರಿಂದ ಮೂಲಭೂತವಾದಿಗಳಿಗೆ ಸಂವಿಧಾನದ ಗುರಾಣಿ
"ಮೂಲಭೂತವಾದಿಗಳಿಗೆ ಸಂವಿಧಾನದ ಗುರಾಣಿ ಕೊಡುವ ಸಿದ್ದರಾಮಯ್ಯ ಅವರಿಗೆ ಸಂವಿಧಾನದ 25ನೇ ವಿಧಿಯ 2(ಎ), 2(ಬಿ) ಏನು ಹೇಳುತ್ತದೆ ಎಂಬುದು ತಿಳಿಯದಾದುದು ವಿಪರ್ಯಾಸ. ಶಾಂತಿಭಂಗ, ಸಾರ್ವಭೌಮತೆಗೆ ಧಕ್ಕೆಯಾದಾಗ ಸರ್ಕಾರಕ್ಕೆ ಧಾರ್ಮಿಕ ಹಕ್ಕನ್ನು ನಿರ್ಬಂಧಿಸುವ ಅಧಿಕಾರವೂ ಇದೆ. ಈಗ ನಡೆಯುತ್ತಿರುವುದು ಶಾಂತಿಭಂಗದ ಯತ್ನ," ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗಂಭೀರ ಆರೋಪ
"1983ರ ಶಿಕ್ಷಣ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಹಿಜಾಬ್ ಒಳಗಿರುವ ಮತ ಪಡೆಯಲು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎನ್ನುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು," ಎಂದು ಬಿಜೆಪಿ ದೂಷಿಸಿದೆ.

ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಹೇಳಿದ್ದೇನು?
ಕೇಸರಿ ಶಾಲು ಮತ್ತು ಹಿಜಾಬ್ ಅನ್ನುವ ವಿವಾದವನ್ನು ಹುಟ್ಟುಹಾಕಿದವರು ಸಂಘ ಪರಿವಾರದವರು. ಇದು ಎಲ್ಲ ಜಿಲ್ಲೆಗಳಿಗೂ, ಎಲ್ಲ ಕಾಲೇಜುಗಳಿಗೂ ಹಬ್ಬುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿವಾದಕ್ಕೆ ಶೀಘ್ರ ಕಡಿವಾಣ ಹಾಕುವ ಅಗತ್ಯವಿದೆ. ಏಕೆಂದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ, ಜಾತಿ ವಿಚಾರಗಳು ಸುಳಿಯಬಾರದು. ವಿವಾದ ತೀವ್ರ ಸ್ವರೂಪ ಪಡೆದುಕೊಂಡರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ, ಆದ್ದರಿಂದ ಸರ್ಕಾರ ಕೂಡಲೇ ಪಿಯುಸಿ ತರಗತಿಗಳನ್ನು ಮತ್ತು ಪದವಿ ತರಗತಿಗಳನ್ನು ಸ್ನಾತಕೋತ್ತರ ಪದವಿಗಳನ್ನು ನಿಲ್ಲಿಸಿ ಆನ್ ಲೈನ್ ತರಗತಿ ಪ್ರಾರಂಭಿಸುವಂತೆ ಒತ್ತಾಯ ಮಾಡುತ್ತೇನೆ. ವಿವಾದ ತಿಳಿಯಾದ ನಂತರ ಕಾಲೇಜು ಪ್ರಾರಂಭಿಸಬೇಕು," ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.












Click it and Unblock the Notifications