Highway Bypass: 10.575 ಕಿಮೀ. ನವಲಗುಂದ ಬೈಪಾಸ್ ಯೋಜನೆ, DPRಗೆ ಕೇಂದ್ರ ಅಸ್ತು, ವಿವರ
ನವದೆಹಲಿ, ಮೇ 15: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನವಲಗುಂದ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಧಾರವಾಡ ಜಿಲ್ಲೆಯ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದೀಗ ಅದರ ಸರ್ವೇ ಕಾರ್ಯಕ್ಕೂ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಾಹಿತಿ ನೀಡಿದ್ದಾರೆ.
ಹೆದ್ದಾರಿ ಬೈಪಾಸ್ ಕುರಿತು ಟ್ವಿಟ್ ಮಾಡಿರುವ ಅವರು, ನಮ್ಮ ಬೇಡಿಕೆಯಂತೆ ಈಗಾಗಲೇ ಕೇಂದ್ರ ಸರ್ಕಾರದಿಂದ ನವಲಗುಂದ ಬೈಪಾಸ ರಸ್ತೆಗೆ ಅನುಮೋದನೆ ನೀಡಿರುವುದು ತಿಳಿದಿದೆ. ಇದೇ ಯೋಜನೆಯ ಭಾಗಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ MoRTH) ಸಲ್ಲಿಸಲಾಗಿದ್ದ ಜೋಡಣೆ (Alignment) ಮತ್ತು ವಿವರವಾದ ಯೋಜನಾ ವರದಿ (DPR) ಯನ್ನು ಜೋಡಣೆ ಅನುಮೋದನೆ ಸಮಿತಿ (AAC) ಒಪ್ಪಿಗೆ ನೀಡಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಸಾರಿಗೆ ಮೂಲ ಸೌಕರ್ಯ ಅಭವೃದ್ಧಿಗೆ ಕೇಂದ್ರ ಉತ್ತೇಜನ ನೀಡಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೈಪಾಸ್ ನಿರ್ಮಾಣಕ್ಕೆ 327 ಕೋಟಿ ರೂ.
ಬೈಪಾಸ್ ಯೋಜನೆ ಕಾರಣದಿಂದ ನವಲಗುಂದ ಪಟ್ಟಣದಲ್ಲಿ 10.575 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಲಿದೆ. ಸುಮಾರು 327 ಕೋಟಿ ರೂಪಾಯಿ ವೆಚ್ಚದ ಬೈಪಾಸ್ ರಸ್ತೆ ಯೋಜನೆ ಇದಾಗಿದೆ. ನವಲಗುಂದ ಪಟ್ಟಣ ಅನೇಕ ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುವ ಪಟ್ಟಣವಾಗಿದೆ.
ಈ ನವಲಗುಂದದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಸರ್ಕಾರ ಕೈಗೊಂಡಿರುವ ಈ ಬೈಪಾಸ್ ನಿರ್ಮಾಣ ಯೋಜನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣಿಕರಲ್ಲದೆ ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗಲಿದೆ. ಸಂಚಾರ ಸುಗಮವಾಗಲಿದೆ. ಸಮಯ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.

ಈ ಬೈಪಾಸ್ ರಸ್ತೆ ಏಕೆ?
ಹೆಬಸೂರು, ಯಮನೂರು, ಕುಸುಗಲ್, ಬಲ್ಲಾರವಾಡ ಸೇರಿದಂತೆ ನವಲಗುಂದ ವ್ಯಾಪ್ತಿಯಲ್ಲಿ ಹರಿದು ಹೋಗುವ ಬೆಣ್ಣಿಹಳ್ಳವು ಮಳೆಗಾಲದಲ್ಲಿ ಹೊಳೆಯಂತೆ ಹರಿಯುತ್ತದೆ. ಇದು ರೈತರ ಜಮೀನುಗಳಿಗೆ ಸಮಸ್ಯೆ ಉಂಟು ಮಾಡುವುದು ಮಾತ್ರವಲ್ಲದೇ ಕೆಲವೆಡೆ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ. ಬೆಣ್ಣಿ ಹಳ್ಳ ಹಾಗೂ ಅದಕ್ಕೆ ಸೇರುವ ಸಣ್ಣ ನಾಲೆಗಳು ಮಳೆಗಾದಲ್ಲಿ ಪ್ರವಾಹ ವಾತಾವರಣ ಸೃಷ್ಟಿಸುತ್ತದೆ. ಇದರಿಂದ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ. ಕೃಷಿ ಭೂಮಿ ಹಾಳಾಗದಂತೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜೋಡಣೆ ಅನುಮೋದನೆ ಸಮಿತಿ (AAC) ನೀಡಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಅಭಿಪ್ರಾಯ ಪರಿಗಣನೆ
ಬೆಣ್ಣಿಹಳ್ಳ ಮತ್ತು ಅದಕ್ಕೆ ಸೇರುವ ಸಣ್ಣ ಹೊಳೆಗಳ (ನಾಲಾಗಳು) ವಿಚಾರದಲ್ಲಿ ಸ್ಥಳಿಯರ ಅಭಿಪ್ರಾಯ ಪರಿಗಣಿಸಲಾಗುವುದು. ಈ ಕುರಿತು ಸ್ಥಳೀಯ ನಾಯಕರ ಜೊತೆಗೆ ಚಿರ್ಚಿಸುವ ಬಗ್ಗೆ ಅವರು ತಿಳಿಸಿದ್ದಾರೆ. ನವಲಗುಂದ ಭಾಗದಲ್ಲಿ ಅತ್ಯಂತ ಅವಶ್ಯಕವಾಗಿದ್ದ ಈ ಕಾಮಗಾರಿಗೆ ನನ್ನ ಮನವಿಗೆ ಸ್ಪಂದಿಸಿ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಸಚಿವರು ಧನ್ಯವಾದ ತಿಳಿಸಿದರು.
ಬೈಪಾಸ್ ಯೋಜನೆ ಪ್ರಾಥಮಿಕ ಕಾರ್ಯಗಳು ಆರಂಭವಾಗುವುದ ಯಾವಾಗಿನಿಂದ ಸಿವಿಲ್ ಕೆಲಸ ಶುರುವಾಗಲಿದೆ. ಈ ಯೋಜನೆ ಗಡುವು, ಕಾಮಗಾರಿ ವಿವರ ಇನ್ನಷ್ಟೇ ತಿಳಿಯಬೇಕಿದೆ.












Click it and Unblock the Notifications