'ಮೈಸೂರಿನ ಆರಡಿಯ ತೂಗುದೀಪದಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ!'
ಬೆಂಗಳೂರು, ಜೂನ್.23: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜೈಲು ಸೇರಿದ್ದಾರೆ. 12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅವರು, ಜುಲೈ 4ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಈಗಾಗಲೇ ಚಿತ್ರರಂಗದ ಬೆರಳೆಣಿಕೆಯಷ್ಟು ಮಂದಿ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ತೊಗುದೀಪ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದಾಗಿನಿಂದಲೂ ಕನ್ನಡ ಚಿತ್ರರಂಗ ಮೌನವಾಗಿದೆ. ಆಗೊಮ್ಮೆ ಈಗೊಮ್ಮೆ ಕೆಲವರು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಅನುಷಾ ರೈ ದರ್ಶನ್ ಅವರನ್ನು ಹಾಡಿ ಹೊಗಳಿದ್ದು, ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ. ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ ಎಂದಿದ್ದಾರೆ.

ಮೈಸೂರಿನ ಆರಡಿಯ ತೂಗುದೀಪ
ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುಷಾ ರೈ, "ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದ್ರೆ ನಾನು ಹುಟ್ಟುಹಬ್ಬದ ಒಂದು ದಿನ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್... ಮೈಮೇಲೆ ಆತರ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಬೇಡಿ ಸಿನಿಮಾ ನೋಡಿ ಸಾಕು, ನಿಮ್ಮ ಅಪ್ಪ ಅಮ್ಮನ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ..." ಎಂದಿದ್ದಾರೆ.
"ನಾನು ಕಾರಲ್ಲಿ ಸ್ಪೀಡಾಗಿ ಹೋಗುವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು?? ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ.ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ. ಅದೇನೆ ಆದರೂ ಕಾನೂನು ಇದೆ ನೋಡಿಕೊಳ್ಳುತ್ತೆ. ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನ ಕಾಪಾಡುತ್ತೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ ಅಪರಾಧಿಯಾಗಿಲ್ಲ... ಮುಂದೆ ಕಾದು ನೋಡೋಣ" ಎಂದು ಬರೆದುಕೊಂಡಿದ್ದಾರೆ.

"ಇನ್ನು ಈ ಅನಾಹುತಕ್ಕೆ ಬಲಿಯಾದ ರೇಣುಕಾಸ್ವಾಮಿ ಗೂ ಅವರ ಕುಟುಂಬಕ್ಕೂ ಆ ದೇವರು ದುಃಖವನ್ನು ಭರಿಸೊ ಶಕ್ತಿ ನೀಡಲಿ. ಅವರು ಮಾಡಿದ್ದು ಸಹ ತಪ್ಪೇ ಆದರೂ ಈರೀತಿಯ ಶಿಕ್ಷೆ ಸರಿಯಲ್ಲ. ಕಾನೂನಿನ ಪ್ರಕಾರವೇ ರೇಣುಕಾಸ್ವಾಮಿ ಗೆ ಶಿಕ್ಷೆ ಕೊಡಿಸೊ ಬದಲು ಯಾರೋ ಜೀವ ತೆಗೆದಿದ್ದು ಅಕ್ಷಮ್ಯ ಅಪರಾಧ. ತಂದೆಯಾಗುವ ಮೊದಲೇ ಕಣ್ ಮುಚ್ಚಿದ ರೇಣುಕಾಸ್ವಾಮಿ ಮತ್ತೆ ಮಗುವಾಗಿ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಲಿ ಅನ್ನೋದೆ ನಮ್ಮ ಹಾರೈಕೆ.... ಕ್ಷಮಿಸಿ" ಎಂದು ಕ್ಷಮೆ ಕೇಳಿದ್ದಾರೆ.
"ಈ ಪ್ರಕರಣದಲ್ಲಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು..?? ನನ್ನ ತಂದೆ ಒಬ್ಬ ದೊಡ್ಡ ಸ್ಟಾರ್ ಅನ್ನೋದು ಸಹ ಗೊತ್ತಿಲ್ಲದ ಆ ಹಾಲುಗಲ್ಲದ ಮುದ್ದು ಹುಡುಗ ವಿನೀಶ್ ನೋಡಿದರೆ ಸಂಕಟವಾಗದಿರುವುದೆ..? ಫಾದರ್ಸ್ ಡೇ ದಿನ ತಂದೆಯನ್ನು ನೆನೆದು ವಿನೀಶ್ ಹಾಕಿದ ಪೋಸ್ಟ್ ಗೆ ಮನಕಲಕದೆ ಇರುವುದೇ..? ಜೊತೆಗೆ ದರ್ಶನ್ ಜೀವನಕ್ಕೆ 22 ವರ್ಷದಿಂದ ವಿಜಯವೂ ಆಗಿ ಲಕ್ಷ್ಮಿಯೂ ಆಗಿರುವ ವಿಜಯಲಕ್ಷ್ಮಿ ಯವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ..?? ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸುವುದು ಬೇಡ..." ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.












Click it and Unblock the Notifications