Cabinet Expansion: ಸಿದ್ದರಾಮಯ್ಯ ಸರ್ಕಾರದ ಸಚಿವರ ಕಂಪ್ಲೀಟ್ ಜಾತಿ ಲೆಕ್ಕಾಚಾರ ಹೀಗಿದೆ..
ಬೆಂಗಳೂರು, ಮೇ 27: ಮೂರ್ನಾಲ್ಕು ದಿನಗಳ ಹಗ್ಗಜಗ್ಗಾಟದ ನಂತರ ಸಿದ್ದರಾಮಯ್ಯನವರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಫೈನಲ್ ಆಗಿದೆ. ರಾಜಭವನದ ಗಾಜಿನಮನೆಯಲ್ಲಿ ಇಂದು (ಮೇ 27) ಮಧ್ಯಾಹ್ನ 11.45ಕ್ಕೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹತ್ತು ಮುಖಂಡರು ಕಳೆದ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಭವ್ಯ ಈ ಸಮಾರಂಭದಲ್ಲಿ ಎನ್ಡಿಎ ಮೈತ್ರಿಕೂಟದ ಹೊರತಾದ ಪಕ್ಷಗಳ ಹೆಚ್ಚಿನ ಮುಖಂಡರು ಆಗಮಿಸಿ, ಶುಭ ಹಾರೈಸಿದ್ದರು.

ಈಗ ಕಳೆದ ಬುಧವಾರದಿಂದ ನಡೆಯುತ್ತಿದ್ದ ಸಂಪುಟ ವಿಸ್ತರಣೆ ಸರ್ಕಸಿಗೆ ಹೈಕಮಾಂಡ್ ಅಂತಿಮ ಮುದ್ರೆ ಒತ್ತಿದೆ. ಜಾತಿ ಮತ್ತು ಜಿಲ್ಲಾವಾರು ಲೆಕ್ಕಾಚಾರದಲ್ಲಿ ಮಂತ್ರಿಗಿರಿಯನ್ನು ನೀಡಲಾಗಿದೆ. ಯಾರಿಗೆ ಯಾವ ಖಾತೆ ಎನ್ನುವುದು ಇನ್ನೂ ಫೈನಲ್ ಆಗಬೇಕಿದೆ. ಅಂತಿಮ ಪಟ್ಟಿಯ ಪ್ರಕಾರ ಸಿದ್ದರಾಮಯ್ಯನವರ ಸರ್ಕಾರದ ಜಾತಿ ಲೆಕ್ಕಾಚಾರ ಇಂತಿದೆ:
| ಕ್ರ.ಸಂಖ್ಯೆ | ಹೆಸರು | ಪ್ರತಿನಿಧಿಸುವ ಕ್ಷೇತ್ರ | ಸಮುದಾಯ | |||
| 1 | ಸಿದ್ದರಾಮಯ್ಯ | ವರುಣಾ | ಕುರುಬ | |||
| 2 | ಡಿ.ಕೆ.ಶಿವಕುಮಾರ್ | ಕನಕಪುರ | ಒಕ್ಕಲಿಗ | |||
| 3 | ಡಾ. ಜಿ.ಪರಮೇಶ್ವರ್ | ಕೊರಟಗೆರೆ | ಪರಿಶಿಷ್ಟ ಜಾತಿ | |||
| 4 | ರಾಮಲಿಂಗಾ ರೆಡ್ಡಿ | ಬಿಟಿಎಂ ಲೇಔಟ್, ಬೆಂಗಳೂರು | ರೆಡ್ಡಿ | |||
| 5 | ಎಂ.ಬಿ.ಪಾಟೀಲ್ | ಬಬಲೇಶ್ವರ | ಲಿಂಗಾಯತ | |||
| 6 | ಸತೀಶ್ ಜಾರಕಿಹೊಳಿ | ಯಮಕನಮರಡಿ | ಪರಿಶಿಷ್ಟ ಪಂಗಡ | |||
| 7 | ಪ್ರಿಯಾಂಕ್ ಖರ್ಗೆ | ಚಿತ್ತಾಪುರ | ಪರಿಶಿಷ್ಟ ಜಾತಿ | |||
| 8 | ಜಮೀರ್ ಅಹ್ಮದ್ ಖಾನ್ | ಚಾಮರಾಜಪೇಟೆ, ಬೆಂಗಳೂರು | ಮುಸ್ಲಿಂ | |||
| 9 | ಕೆ.ಎಚ್.ಮುನಿಯಪ್ಪ | ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ | ಪರಿಶಿಷ್ಟ ಜಾತಿ | |||
| 10 | ಕೆ.ಜೆ.ಜಾರ್ಜ್ | ಸರ್ವಜ್ಞ ನಗರ, ಬೆಂಗಳೂರು | ಕ್ರಿಶ್ಚಿಯನ್ | |||
| 11 | ಡಾ.ಎಂ.ಸಿ.ಸುಧಾಕರ್ | ಚಿಂತಾಮಣಿ | ಒಕ್ಕಲಿಗ | |||
| 12 | ಮಂಕಾಳ ವೈದ್ಯ | ಭಟ್ಕಳ | ಮೊಗವೀರ | |||
| 13 | ಈಶ್ವರ್ ಖಂಡ್ರೆ | ಭಾಲ್ಕಿ | ಲಿಂಗಾಯತ | |||
| 14 | ಲಕ್ಷ್ಮೀ ಹೆಬ್ಬಾಳ್ಕರ್ | ಬೆಳಗಾವಿ ಗ್ರಾಮೀಣ | ಲಿಂಗಾಯತ | |||
| 15 | ಮಧು ಬಂಗಾರಪ್ಪ | ಸೊರಬ | ಈಡಿಗ | |||
| 16 | ಕೆ.ವೆಂಕಟೇಶ್ | ಪಿರಿಯಾಪಟ್ಟಣ | ಒಕ್ಕಲಿಗ | |||
| 17 | ಡಿ ಸುಧಾಕರ್ | ಹಿರಿಯೂರು | ಜೈನ್ | |||
| 18 | ಎಚ್.ಕೆ.ಪಾಟೀಲ್ | ಗದಗ | ನಾಮಧಾರಿ ರೆಡ್ಡಿ | |||
| 19 | ಎನ್.ಚೆಲುವರಾಯಸ್ವಾಮಿ | ನಾಗಮಂಗಲ | ಒಕ್ಕಲಿಗ | |||
| 20 | ಶಿವಾನಂದ ಪಾಟೀಲ್ | ಬಸವನಬಾಗೇವಾಡಿ | ಲಿಂಗಾಯತ | |||
| 21 | ಡಾ.ಎಚ್.ಸಿ.ಮಹದೇವಪ್ಪ | ತಿ.ನರಸೀಪುರ | ಪರಿಶಿಷ್ಟ ಜಾತಿ | |||
| 22 | ಬೈರತಿ ಸುರೇಶ್ | ಹೆಬ್ಬಾಳ, ಬೆಂಗಳೂರು | ಕುರುಬ | |||
| 23 | ಕೃಷ್ಣ ಭೈರೇಗೌಡ | ಬ್ಯಾಟರಾಯನಪುರ, ಬೆಂಗಳೂರು | ಒಕ್ಕಲಿಗ | |||
| 24 | ಕೆ.ಎನ್.ರಾಜಣ್ಣ | ಮಧುಗಿರಿ | ಪರಿಶಿಷ್ಟ ಪಂಗಡ | |||
| 25 | ಬಿ.ನಾಗೇಂದ್ರ | ಬಳ್ಳಾರಿ ಗ್ರಾಮಾಂತರ | ಪರಿಶಿಷ್ಟ ಪಂಗಡ | |||
| 26 | ಶರಣಬಸಪ್ಪ ದರ್ಶನಾಪುರ | ಶಹಾಪುರ | ಲಿಂಗಾಯತ | |||
| 27 | ಎಸ್.ಎಸ್. ಮಲ್ಲಿಕಾರ್ಜುನ | ದಾವಣಗೆರೆ ಉತ್ತರ | ಲಿಂಗಾಯತ | |||
| 28 | ಶಿವರಾಜ ತಂಗಡಗಿ | ಕನಕಗಿರಿ | ಭೋವಿ | |||
| 29 | ರಹೀಂ ಖಾನ್ | ಬೀದರ್ | ಮುಸ್ಲಿಂ | |||
| 30 | ಸಂತೋಷ್ ಲಾಡ್ | ಕಲಘಟಗಿ | ಮರಾಠ | |||
| 31 | ಆರ್.ಬಿ.ತಿಮ್ಮಾಪುರ | ಮುಧೋಳ | ಪರಿಶಿಷ್ಟ ಜಾತಿ | |||
| 32 | ಡಾ.ಶರಣಪ್ರಕಾಶ್ ಪಾಟೀಲ್ | ಸೇಡಂ | ಲಿಂಗಾಯತ | |||
| 33 | ದಿನೇಶ್ ಗುಂಡೂರಾವ್ | ಗಾಂಧಿನಗರ, ಬೆಂಗಳೂರು | ಬ್ರಾಹ್ಮಣ | |||
| 34 | ಎನ್.ಎಸ್.ಬೋಸ್ ರಾಜು | ಮಾಜಿ ಎಂಎಲ್ಎ, ರಾಯಚೂರು ಮೂಲ | ಕ್ಷತ್ರಿಯ ರಾಜು |
ಸಚಿವ ಸ್ಥಾನಕ್ಕಾಗಿ ಸುಮಾರು ಅರವತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಕೆಲವರಿಗೆ ಖಚಿತ ಭರವಸೆ ದೆಹಲಿಯಲ್ಲೇ ಸಿಕ್ಕಿದ್ದರೆ, ಇನ್ನಷ್ಟು ಜನರಿಗೆ ನಿರಾಸೆಯಾಗಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಭರ್ಜರಿ ಜಯಗಳಿಸಿದ್ದ ಲಕ್ಷ್ಮಣ ಸವದಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.
ಹಾಗೆಯೇ, ದಾಖಲೆ ಸಂಖ್ಯೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿರುವ ಹಿರಿಯ ನಾಯಕ ಆರ್.ವಿ.ದೇಶಪಾಂಡೆಗೂ ಸಂಪುಟದಲ್ಲಿ ಜಾಗವಿಲ್ಲ. ಸ್ಪೀಕರ್ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಒತ್ತಾಯಿಸಿದ್ದರೂ ಅದಕ್ಕೆ ದೇಶಪಾಂಡೆ ನಿರಾಕರಿಸಿದ್ದರು. ಹಾಗಾಗಿ, ಯು.ಟಿ.ಖಾದರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.












Click it and Unblock the Notifications