ಸಿದ್ದರಾಮಯ್ಯ ಅವರ ಬೆಂಜ್ ಕಾರಿನ ಕುರಿತು ಬೈರತಿ ಸುರೇಶ್ ಸ್ಪಷ್ಟನೆ

ಬೆಂಗಳೂರು, ಜನವರಿ 20 : ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬೆಂಜ್‌ ಕಾರಿನ ಬಗ್ಗೆ ಶನಿವಾರ ಭಾರಿ ಚರ್ಚೆ ನಡೆದಿತ್ತು. ಹೆಬ್ಬಾಳ ಶಾಸಕ ಬೈರತಿ ಸುರೇಶ್ ಕಾರನ್ನು ಉಡುಗೊರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಶುಕ್ರವಾರ ಸಂಜೆ ಬೆಂಜ್ ಕಾರು ಪತ್ತೆಯಾಗಿತ್ತು. 1 ಕೋಟಿಗೂ ಅಧಿಕ ಬೆಲೆಬಾಳುವ ಈ ಕಾರನ್ನು ಸಿದ್ದರಾಮಯ್ಯ ಅವರಿಗೆ ಶಾಸಕ ಬೈರತಿ ಸುರೇಶ್ ಉಡುಗೊರೆ ನೀಡಿದ್ದಾರೆ ಎಂಬ ಚರ್ಚೆ ಶನಿವಾರ ಆರಂಭವಾಗಿತ್ತು.

ಶಾಸಕ ಬೈರತಿ ಸುರೇಶ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ಸಿದ್ದರಾಮಯ್ಯ ಅವರಿಗೆ ನಾನು ಕಾರನ್ನು ಉಡುಗೊರೆ ನೀಡಿಲ್ಲ. ಅದು ನನ್ನದೇ ಕಾರು, ನಾನು ರೆಸಾರ್ಟ್‌ಗೆ ಬಸ್ಸಿನಲ್ಲಿ ಹೋದ ಕಾರಣ ಕಾರು ಅಲ್ಲಿತ್ತು. ಡ್ರೈವರ್ ಅದನ್ನು ತೆಗೆದುಕೊಂಡು ಹೋಗಿರಲಿಲ್ಲ' ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಜ್ರ ಖಚಿತ ಊಬ್ಲೋ ವಾಚ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ 1 ಕೋಟಿ ಬೆಂಜ್ ಕಾರಿನ ವಿಚಾರ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ವಿರುದ್ಧ ಕಮೆಂಟ್‌ಗಳನ್ನು ಮಾಡಲಾಗಿತ್ತು.

ಶಾಸಕ ಬೈರತಿ ಸುರೇಶ್ ಹೇಳಿದ್ದೇನು?

ಶಾಸಕ ಬೈರತಿ ಸುರೇಶ್ ಹೇಳಿದ್ದೇನು?

'ಸಿದ್ದರಾಮಯ್ಯ ಅವರಿಗೆ ಏಕೆ ನಾನು ಕಾರನ್ನು ಉಡುಗೊರೆ ಕೊಡಲಿ. ಮೊನ್ನೆ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದೆ. ಅಲ್ಲಿಂದ ಬಸ್ ಮೂಲಕ ರೆಸಾರ್ಟ್‌ಗೆ ಹೋದೆ. ಆದ್ದರಿಂದ, ಕಾರನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು. ಡ್ರೈವರ್ ಸಹ ಅದನ್ನು ತೆಗೆದುಕೊಂಡು ಹೋಗಿರಲಿಲ್ಲ' ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹೇಳಿದರು.

ನನ್ನ ಕಾರನ್ನು ಬಳಸುತ್ತಿದ್ದರು

ನನ್ನ ಕಾರನ್ನು ಬಳಸುತ್ತಿದ್ದರು

'ಸಿದ್ದರಾಮಯ್ಯ ಅವರು ಲಾಂಗ್ ಜರ್ನಿ ಹೋಗುವಾಗ ನನ್ನ ಕಾರನ್ನು ಬಳಸುತ್ತಾರೆ. ಅವರು ಹಿಂದೆ ಓಡಾಡುತ್ತಿದ್ದ ಆಡಿ ಕಾರು ನನ್ನದೇ. ಅವರಿಗೆ ನಾನೇಕೆ ಕಾರನ್ನು ಗಿಫ್ಟ್ ನೀಡಲಿ. ಮಾಧ್ಯಮಗಳು ಸುಳ್ಳುಸುದ್ದಿ ಪ್ರಸಾರ ಮಾಡಿದರೆ ನಾನೇನು ಮಾಡಲಿ?' ಎಂದು ಬೈರತಿ ಸುರೇಶ್ ಪ್ರಶ್ನೆ ಮಾಡಿದರು.

ಅವರ ಬಳಿ ದುಬಾರಿ ಕಾರುಗಳಿಲ್ಲವೇ?

ಅವರ ಬಳಿ ದುಬಾರಿ ಕಾರುಗಳಿಲ್ಲವೇ?

'ಸಿದ್ದರಾಮಯ್ಯ ಅವರ ಬಳಿ ಇದಕ್ಕಿಂತ ದುಬಾರಿ ಕಾರುಗಳಿವೆ. ಆದ್ದರಿಂದ, ನಾನೇಕೆ ಅವರಿಗೆ ಕಾರನ್ನು ಉಡುಗೊರೆ ನೀಡಲಿ. ಶನಿವಾರ ಬೆಳಗ್ಗೆಯೇ ಕಾರನ್ನು ಡ್ರೈವರ್ ಮನೆಗೆ ತಂದಿದ್ದಾನೆ. ಅದರಲ್ಲಿಯೇ ನಾನು ಓಡಾಡುತ್ತಿದ್ದೇನೆ' ಎಂದು ಬೈರತಿ ಸುರೇಶ್ ಹೇಳಿದರು.

ಸ್ನೇಹಿತರಿಗೂ ಕೊಟ್ಟಿದ್ದೇನೆ?

ಸ್ನೇಹಿತರಿಗೂ ಕೊಟ್ಟಿದ್ದೇನೆ?

'ನಾನು ಯಾವ ಕಾರ್ ಕೂಡ ಗಿಫ್ಟ್ ಕೊಟ್ಟಿಲ್ಲ. ಅದು ನನ್ನದೇ ಕಾರು, ನನ್ನಲ್ಲೇ ಇದೆ. ಅವರ ಮನೆ ಹತ್ತಿರ ಕಾರು ನಿಲ್ಲಿಸಿದ್ದೂ ಅವರಿಗೆ ಗೊತ್ತಿಲ್ಲ. ನನ್ನ ಸ್ನೇಹಿತರಿಗೂ ಓಡಾಡಲು ಕೊಟ್ಟಿದ್ದೇನೆ. ದೂರ ಹೋಗುವುದಿದ್ದರೆ ಇದನ್ನೂ ಒಡಿಸೋಕೆ ಕೊಡ್ತೇನೆ. ನಾನು ಯಾವುದೇ ಕಾರ್ ಉಡುಗೊರೆ ಕೊಟ್ಟಿಲ್ಲ. ಎಲ್ಲವೂ ಸುಳ್ಳು, ಸುಮ್ಮನೆ ಸುಳ್ಳು ಸುದ್ದಿ ಯಾಕೆ ಮಾಡ್ತಿರಾ?' ಎಂದು ಶಾಸಕರು ಪ್ರಶ್ನಿಸಿದರು.

ಕಾರಿನ ಬಗ್ಗೆ ಭಾರಿ ಚರ್ಚೆ

ಕಾರಿನ ಬಗ್ಗೆ ಭಾರಿ ಚರ್ಚೆ

ಸಿದ್ದರಾಮಯ್ಯ ಅವರ ನಿವಾಸ ಕಾವೇರಿ ಮುಂದೆ ಶುಕ್ರವಾರ ಸಂಜೆ ಬೆಂಜ್ ಕಾರು ಪತ್ತೆಯಾಗಿತ್ತು. 1 ಕೋಟಿಗೂ ಅಧಿಕ ಬೆಲೆಬಾಳುವ ಈ ಕಾರನ್ನು ಸಿದ್ದರಾಮಯ್ಯ ಅವರಿಗೆ ಶಾಸಕ ಬೈರತಿ ಸುರೇಶ್ ಉಡುಗೊರೆ ನೀಡಿದ್ದಾರೆ ಎಂಬ ಚರ್ಚೆ ಶನಿವಾರ ಆರಂಭವಾಗಿತ್ತು. ಈಗ ಶಾಸಕರೇ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+