Heavy Rain: ಮುಂದಿನ 3 ದಿನ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮುಂಗಾರು ಮಳೆ!
ಮುಂಗಾರು ಮಳೆ ಅಬ್ಬರ ಜೋರಾಗಿದೆ, ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಭರ್ಜರಿಯಾಗಿ ಈಗ ಮುಂಗಾರು ಮಳೆ ಬೀಳುತ್ತಿದೆ. ಹೀಗಿದ್ದಾಗ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆರಾಯ ಬ್ರೇಕ್ ತೆಗೆದುಕೊಂಡಿದ್ದ. ಆದರೆ ಇದೀಗ ಮತ್ತೆ ಮಳೆಯ ಅಬ್ಬರ ಶುರು ಆಗುತ್ತಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭರ್ಜರಿ ಮಳೆ ಬೀಳಲಿದೆ ಅಂತೆ.
ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆಯೇ ಆಸರೆ, ಯಾಕಂದ್ರೆ ಮುಂಗಾರು ಮಳೆ ಬೀಳದಿದ್ದರೆ ಕನ್ನಡಿಗರ ಪರಿಸ್ಥಿತಿ ಕೈಮೀರಿ ಹೋಗಲಿದೆ. ಹೀಗಾಗಿ ಮುಂಗಾರು ಮಳೆಯನ್ನೇ ಆಶ್ರಿಯಿಸಿ ಕನ್ನಡ ನಾಡಿನ ಜನರು ಜೀವನ ಮಾಡುತ್ತಾರೆ. ಹೀಗಿದ್ದಾಗ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಆದರೆ 2024 ರಲ್ಲಿ ಮಾತ್ರ ಮುಂಗಾರು ಮಳೆ ಮೋಡಗಳು ಭರ್ಜರಿಯಾಗಿ ಎಂಟ್ರಿ ಕೊಟ್ಟು, ಭಾರಿ ಮಳೆ ಸುರಿಸುತ್ತಿವೆ. ಅದರಲ್ಲೂ ಕಳೆದ 1 ತಿಂಗಳಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಭಾರಿ ಮಳೆ ಬಿದ್ದಿದ್ದು, ಮುಂದಿನ 3 ದಿನ ಮತ್ತಷ್ಟು ಮಳೆ ಬೀಳಲಿದೆ ಎನ್ನಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಿಗೆ ಮಳೆ ಬೀಳಲಿದೆ? ಮುಂದೆ ಓದಿ.

ಯಾವ ಜಿಲ್ಲೆಗಳಲ್ಲಿ ಮಳೆ ಅಬ್ಬರ?
ಮಳೆ ಅಬ್ಬರ ಜೋರಾಗಿದ್ದು ಮುಂಗಾರು ಮಳೆ ಮೋಡಗಳು ಭಾಗಶಃ ಕರ್ನಾಟಕವನ್ನ ಆವರಿಸಿ ಮಳೆ ಸುರಿಸುತ್ತಿವೆ. ಹೀಗಿದ್ದಾಗ ಮುಂದಿನ 3 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳೋದು ಗ್ಯಾರಂಟಿ ಆಗಿದೆ? ಬೆಂಗಳೂರಲ್ಲಿ ಇನ್ನೂ ಎಷ್ಟು ದಿನ ಮಳೆ ಅಬ್ಬರಿಸಲಿದೆ? ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಎಷ್ಟು ಮಳೆ ಬೀಳಬಹುದು? ಈ ಕುರಿತು ನೀವು ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಈ ಜಿಲ್ಲೆಗಳಿಗೆ ಭರ್ಜರಿ ಮಳೆ
ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ವಾರ ಪೂರ್ತಿ ಮಳೆ ಅಬ್ಬರಿಸಲಿದೆ ಎಂದು, ಹೇಳಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು, ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ ಜಿಲ್ಲೆ ಸೇರಿದಂತೆ ದಾವಣಗೆರೆಯ ಬಹುತೇಕ ಹಲವು ಪ್ರದೇಶದಲ್ಲಿ ಮಳೆ ಅಬ್ಬರಿಸಲಿದೆ. ಬಳ್ಳಾರಿ ಜಿಲ್ಲೆಗೂ ಭರ್ಜರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ತೋರಿಸಲಿದೆ, ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ ಎನ್ನಲಾಗಿದೆ. ಹಾಗೇ ಮುಂಗಾರು ಮಳೆ ಮತ್ತಷ್ಟು ಚುರುಕಾಗಿ ಕರ್ನಾಟಕದಲ್ಲಿ ಡ್ಯಾಂ ಮತ್ತು ನದಿಗಳನ್ನ ತುಂಬಿ ಹರಿಯುವಂತೆ ಮಾಡಲಿದೆ ಎಂದು ಇದೀಗ ಮುನ್ನೆಚ್ಚರಿಕೆಯ ರವಾನೆ ಮಾಡಲಾಗಿದೆ. ಈ ಸುದ್ದಿ ಕರ್ನಾಟಕದ ರೈತರಿಗೆ ಖುಷಿ ಕೂಡ ಕೊಡುತ್ತಿದೆ.












Click it and Unblock the Notifications