Karnataka Rain: ಮಳೆ ಅಬ್ಬರ ಜೋರು, 72 ಗಂಟೆಗಳ ಕಾಲ ಅಬ್ಬರಿಸಲಿರುವ ವರುಣ!
ಮಳೆ.. ಮಳೆ.. ಎಲ್ಲೆಲ್ಲೂ ಬರೀ ಮಳೆ.. ಮುಂಗಾರು ಮಳೆ ಕಾಲ ಮುಗಿದು ಹೋದರೂ ಮಳೆ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಬೆಳಗ್ಗೆ ಎದ್ದ ತಕ್ಷಣ ಮನೆಯ ಸುತ್ತಮುತ್ತ ಮಂಜು ಕವಿದು, ಚಳಿಗಾಲದ ಮುನ್ಸೂಚನೆ ಸಿಗುತ್ತಿದ್ದರೂ ಮಳೆರಾಯ ಮಾತ್ರ ಸುಮ್ಮನೆ ಕೂರದೆ ಈ ಸಂದರ್ಭದಲ್ಲೂ ಅಬ್ಬರಿಸುತ್ತಿದ್ದಾನೆ.
ಒಂದು ಕಡೆ, ಕೈಗೆ ಬಂದ ಬೆಳೆ ಕಳೆದುಕೊಳ್ಳುವ ಭಯ ಅನ್ನದಾತ ರೈತರಿಗೆ ಕಾಡುತ್ತಿದ್ದರೆ, ಮತ್ತೊಂದು ಕಡೆ ಸಿಟಿ ಜನರಿಗೆ ಭಾರಿ ಮಳೆಯಿಂದ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಹೀಗೆ ಭಾರಿ ಮಳೆಯಿಂದಾಗಿ ಕನ್ನಡಿಗರು ಹಲವು ರೀತಿಯ ಸಮಸ್ಯೆ ಎದುರಿಸಿ, ಬೇಸರ ಹೊರ ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, 72 ಗಂಟೆಗಳ ಕಾಲ ಅಬ್ಬರಿಸಲಿರುವ ಮಳೆರಾಯ...

ಮಳೆ.. ಮಳೆ.. ಭಾರಿ ಮಳೆ!
ಹೋದ್ಯಾ ಪಿಶಾಚಿ ಅಂದ್ರೆ... ಹೌದು ಈ ಗಾದೆ ಮಾತನ್ನು ಮಳೆರಾಯ ಪೂರ್ಣಗೊಳಿಸುತ್ತಿದ್ದಾನೆ. ಯಾಕಂದ್ರೆ ದಸರಾದಲ್ಲಿ ಶುರುವಾಗಿದ್ದ ಮಳೆ ದೀಪಾವಳಿ ಸಮಯದಲ್ಲೂ ಅಬ್ಬರಿಸಿತ್ತು, ಇದು ಸಾಲದು ಎನ್ನುವಂತೆ ದೀಪಾವಳಿ ಹಬ್ಬ ಮುಗಿದ ನಂತರ ಕೂಡ ಮತ್ತೆ ಭಾರಿ ಮಳೆ ಬಗ್ಗೆ ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ.
ಹೀಗಾಗಿ ಕೈಗೆ ಬಂದ ಬೆಳೆ ಉಳಿಸಿಕೊಳ್ಳಲು ಈಗ ಅನ್ನದಾತ ರೈತರು ನರಳುವಂತೆ ಆಗಿದೆ. 2023 ರಲ್ಲಿ ಮಳೆ ಬಾರದ ಹಿನ್ನೆಲೆ ಬರ ಆವರಿಸಿ ರೈತರು ನರಳಿದ್ದರು, ಆ ನಂತರ 2024 ರಲ್ಲಿ ಮಳೆ ಬಂದರೂ ಪ್ರಯೋಜನ ಇಲ್ಲ ಎಂಬಂತೆ ಆಗುತ್ತಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಅಬ್ಬರಿಸುವ ಎಚ್ಚರಿಕೆ ಇದೀಗ ಸಿಕ್ಕಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಮಳೆ ಕಾಟ ಕೊಡಲಿದೆ? ಮುಂದೆ ಓದಿ.
6 ಜಿಲ್ಲೆಗಳಲ್ಲಿ ಭಾರಿ ಮಳೆ!
ಕರ್ನಾಟಕ ರಾಜ್ಯದ 6 ಜಿಲ್ಲೆಗಳಲ್ಲಿ ಮಳೆ ಅಬ್ಬರ ತೋರಿಸುವ ಬಗ್ಗೆ ವಾರ್ನಿಂಗ್ ಕೊಡಲಾಗಿದೆ. ಕೇವಲ 6 ಜಿಲ್ಲೆಗಳಲ್ಲಿ ಮಾತ್ರವಲ್ಲ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ತೋರಲಿದೆ. ನವೆಂಬರ್ 9 ರಿಂದಲೇ ಒಟ್ಟು 3 ದಿನಗಳ ಕಾಲ ಭಾರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು & ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಮತ್ತೆ ಭಾರಿ ಮಳೆ ಕಾರಣಕ್ಕೆ ಭಯದ ವಾತಾವರಣ ಇದೀಗ ಎಲ್ಲೆಲ್ಲೂ ನಿರ್ಮಾಣ ಆಗಿದೆ.
ಬೆಂಗಳೂರಲ್ಲಿ ಕೂಡ ಮಳೆರಾಯನ ಅಬ್ಬರ
ದಕ್ಷಿಣ ಕನ್ನಡ ಸೇರಿ ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗೂ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಮತ್ತೊಂದು ಕಡೆ ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಕೂಡ ಮಳೆ ಸಿಂಚನ ಆಗಲಿದ್ದು, ಜನರಿಗೆ ಚಿಂತೆ ಕೂಡ ಶುರುವಾಗಿದೆ. ಹಾಗೇ ಹವಾಮಾನ ವೈಪರಿತ್ಯದ ಪರಿಣಾಮ ಇನ್ನಷ್ಟು ಸಮಸ್ಯೆ ಎದುರಾಗುವ ಭಯ ಕಾಡುತ್ತಿದೆ.












Click it and Unblock the Notifications