Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಗುರುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಶುಕ್ರವಾರ ಕೂಡ ಮಳೆ ಮುಂದುವರೆಯಿತು.
ಬೆಂಗಳೂರು ಜಿಲ್ಲೆಯಲ್ಲಿ ಕೂಡ ವರ್ಷದ ಮೊದಲ ಮಳೆಯಾಗಿದ್ದು, ಜನರಲ್ಲಿ ಆಶಾಭಾವನೆ ಮೂಡಿಸಿದೆ. ಸುದೀರ್ಘ ಕಾಯುವಿಕೆ ನಂತರ ಬೆಂಗಳೂರಿನ ಹಲವು ಕಡೆಗಳಲ್ಲಿ ಮಳೆಯಾಯಿತು. ಕೆಂಗೇರಿ, ಯಲಹಂಕ, ಚಿಕ್ಕಬಾಣಾವಾರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿ ಕೂಡ ವರ್ಷದ ಮೊದಲ ಮಳೆಯಾಗಿದೆ, ತುಮಕೂರು ನಗರದ ಹೊರಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರಲ್ಲಿ ಕೂಡ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಮಿಮೀ ಮಳೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಜಿಲ್ಲೆಯಾಗಿದೆ.
| ಜಿಲ್ಲಾವಾರ ಮಳೆ ವಿವರ | |
| ದಕ್ಷಿಣ ಕನ್ನಡ | 44 ಮಿ.ಮೀ |
| ದಾವಣಗೆರೆ | 44 ಮಿ.ಮೀ |
| ಶಿವಮೊಗ್ಗ | 38 ಮಿ.ಮೀ |
| ಮಂಡ್ಯ | 32 ಮಿ.ಮೀ |
| ಬಳ್ಳಾರಿ | 31 ಮಿ.ಮೀ |
| ಹಾವೇರಿ | 31 ಮಿ.ಮೀ |
| ತುಮಕೂರು | 30 ಮಿ.ಮೀ |
| ಹಾಸನ | 29 ಮಿ.ಮೀ |
| ಮೈಸೂರು | 26 ಮಿ.ಮೀ |
| ಕೊಡಗು | 24 ಮಿ.ಮೀ |
| ರಾಮನಗರ | 19 ಮಿ.ಮೀ |
| ಬೆಂಗಳೂರು ಗ್ರಾಮಾಂತರ | 16 ಮಿ.ಮೀ |
| ಚಾಮರಾಜನಗರ | 11 ಮಿ.ಮೀ |
| ಬೆಂಗಳೂರು ನಗರ | 9 ಮಿ.ಮೀ |
ಇನ್ನೂ ಮೂರು ದಿನ ಮಳೆ
ವಾರಾಂತ್ಯದಲ್ಲಿ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಶನಿವಾರ ಮಳೆಯಾಗುವ ಸಾಧ್ಯತೆ ಇದ್ದು, ಮಳೆಯನ್ನು ನಿರೀಕ್ಷೆ ಮಾಡಬಹುದಾಗಿದೆ.
ಉತ್ತರ ಒಳನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಾವಣಗೆರೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಶನಿವಾರ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಶುಕ್ರವಾರ ತಡರಾತ್ರಿ ಚಿಕ್ಕಮಗಳೂರು ಮತ್ತು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ ರಾತ್ರಿ 1 ರಿಂದ 2 ಗಂಟೆಯವರೆಗೆ ವ್ಯಾಪಕ ಮಳೆಯಾಗಿದ್ದರೆ. ಮಂಗಳೂರು ಮತ್ತು ಉಡುಪಿಯಲ್ಲಿ ರಾತ್ರಿ 3 ಗಂಟೆಯವರೆಗೆ ಭಾರಿ ಮಳೆಯಾಗಿದೆ
ಉಡುಪಿಯ ತೆಂಕದಲ್ಲಿ 106 ಮಿ.ಮೀ ಮಳೆಯಾಗಿದ್ದರೆ, ದಕ್ಷಿಣ ಕನ್ನಡದ ಕಾಶಿಪಟ್ನದಲ್ಲಿ 96 ಮಿಮೀ ಮಳೆಯಾಗಿದೆ. ಚಿಕ್ಕಮಗಳೂರಿನ ಆಲ್ದೂರಿನಲ್ಲಿ 94 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶನಿವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಭಾನುವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಭಾನುವಾರ ಮಾತ್ರ ಮಳೆ ಮುನ್ಸೂಚನೆ ನೀಡಿದ್ದು, ಬಳಿಕ ಮಳೆ ಬ್ರೇಕ್ ನೀಡುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಹಲವು ಜಿಲ್ಲೆಗಳು ವಾಡಿಕೆಗಿಂತ ಹೆಚ್ಚು ಮಳೆಯನ್ನು ಪಡೆದಿರುವುದು, ಮುಂದಿನ ದಿನಗಳಲ್ಲಿ ಉತ್ತಮ ಮುಂಗಾರನ್ನು ನಿರೀಕ್ಷಿಸುವಂತೆ ಮಾಡಿದೆ.












Click it and Unblock the Notifications