Karnataka Dam Water Level: ಆಲಮಟ್ಟಿಯಿಂದ 1.57 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ, ಇತರ ಡ್ಯಾಂಗಳ ನೀರಿನ ಮಟ್ಟ..

ಬೆಂಗಳೂರು, ಆಗಸ್ಟ್ 25: ಕರ್ನಾಟಕದಾದ್ಯಂತ ಮುಂಗಾರು ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಈಗಾಗಲೇ ತಿಂಗಳುಗಳಿಂದ ಮಲೆನಾಡು, ಮತ್ತಿತರ ಕಡೆಗಳಲ್ಲಿ ವ್ಯಾಪಕ ಮಳೆ ಸುರಿದ ಕಾರಣದಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನೀರಾವರಿ ನಿಗಮಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿವೆ. ಇಂದು ಯಾವೆಲ್ಲ ಜಲಾಶಯಗಳ ನೀರಿನ ಸಂಗ್ರಹ, ಹೊರ ಹರಿವಿನ ಪ್ರಮಾಣ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಕೇರಳ ಗಡಿ, ಅರಣ್ಯ ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿರಂತರ ಮುಂಗಾರು ಮಳೆ ದಾಖಲಾಗಿದೆ. ಸದ್ಯ ಕರಾವಳಿ ಹಾಗೂ ಕೊಡಗು, ಚಿಕ್ಕಮಗಳೂರು, ಹಾಸನ, ಸಕಲೇಶಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಸದ್ಯ ಮಳೆ ಕಡಿಮೆ ಯಾದರೂ ಸಹಿತ ಜಲಾಶಯಗಳಲ್ಲಿ ನೀರಿನ ಒಳ ಮತ್ತು ಹೊರ ಹರಿವು ಕಡಿಮೆ ಆಗಿಲ್ಲ.

Heavy Rain Fills Karnataka Dams Reservoirs Water Release Increased

ಭಾರೀ ಮಳೆ ಪ್ರಯುಕ್ತ ಆಲಮಟ್ಟಿ ಜಲಾಶಯದಲ್ಲಿ ಬರೋಬ್ಬರಿ 2,68,615 ಕ್ಯೂಸೆಕ್ ನೀರಿನ ಒಳ ಹರಿವು ಹೆಚ್ಚಾಯಿತು. ಇದರಿಂದಾಗಿ ಒಟ್ಟು ಹೊರ ಹರಿವಿನ ಪ್ರಮಾಣ ಏರಿಕೆ ಆಗಿದೆ. ಇಂದು ಆಗಸ್ಟ್ 25ರಂದು 1,57,082 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

ರಾಜ್ಯದ ಪ್ರಮುಖ ಜಿಲ್ಲೆಗಳ ಡ್ಯಾಂ ನೀರಿನ ಸಂಗ್ರಹ

ಕೃಷ್ಣರಾಜಸಾಗರ ಅಣೆಕಟ್ಟು

* ಡ್ಯಾಂ ಒಟ್ಟು ನೀರು ಸಂಗ್ರಹ ಮಟ್ಟ: 49.452 ಟಿಎಂಸಿ

* ಇಂದಿನಿ ನೀರಿನ ಸಂಗ್ರಹ: 48.062 ಟಿಎಂಸಿ

* ಒಳಹರಿವು: 7477 ಕ್ಯೂಸೆಕ್

* ಹೊರಹರಿವು: 6497 ಕ್ಯೂಸೆಕ್

ಹೇಮಾವತಿ ಅಣೆಕಟ್ಟು

* ಡ್ಯಾಂ ಒಟ್ಟು ನೀರು ಸಂಗ್ರಹ: 37.10 ಟಿಎಂಸಿ

* ಇಂದಿನ ನೀರು ಸಂಗ್ರಹ: 36.958

* ಇಂದಿನ ಒಳಹರಿವು : 7458 ಕ್ಯೂಸೆಕ್

* ಹೊರಹರಿವು: 7345 ಕ್ಯೂಸೆಕ್ಸ್

ಹಾರಂಗಿ ಅಣೆಕಟ್ಟು

* ಒಟ್ಟು ನೀರಿನ ಸಂಗ್ರಹ ಮಟ್ಟ 8.5 ಟಿಎಂಸಿ

* ಇಂದಿನ ನೀರು ಸಂಗ್ರಹ : 8.094 ಟಿಎಂಸಿ

* ಇಂದಿನ ಒಳಹರಿವು: 2533 ಕ್ಯೂಸೆಕ್ಸ್

* ಹೊರಹರಿವು: 2000 ಕ್ಯೂಸೆಕ್ಸ್

ಲಿಂಗನಮಕ್ಕಿ ಡ್ಯಾಂ ವಿವರ

* ಒಟ್ಟು ಶೇಖರಣಾ ನೀರು ಸಂಗ್ರಹ: 151.75 ಟಿಎಂಸಿ

* ಇಂದಿನ ನೀರು ಸಂಗ್ರಹ: 145.08 ಟಿಎಂಸಿ

* ಇಂದಿನ ಒಳ ಹರಿವು: 9188 ಕ್ಯೂಸೆಕ್

* ಒಟ್ಟು ಹೊರ ಹರಿವು: 8994 ಕ್ಯೂಸೆಕ್

ಕಬಿನಿ ಡ್ಯಾಂ ನೀರು ಸಂಗ್ರಹ ವಿವರ

* ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ

* ಇಂದಿನ ನೀರು ಸಂಗ್ರಹ: 19.32 ಟಿಎಂಸಿ

* ಇಂದಿನ ಒಳ ಹರಿವು: 4020 ಕ್ಯೂಸೆಕ್

* ಒಟ್ಟು ಹೊರ ಹರಿವು: 4650 ಕ್ಯೂಸೆಕ್

ಆಲಮಟ್ಟಿ ಅಣೆಕಟ್ಟಿನ ಇಂದಿನ ಮಟ್ಟ

* ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 123 ಟಿಎಂಸಿ

* ಇಂದಿನ ನೀರು ಸಂಗ್ರಹ: 112.62 ಟಿಎಂಸಿ

* ಇಂದಿನ ಒಳ ಹರಿವು: 26,8,615 ಕ್ಯೂಸೆಕ್

* ಒಟ್ಟು ಹೊರ ಹರಿವು: 15,7,082 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+