Rain Alert: ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆ ಗ್ಯಾರಂಟಿ!
ಬೇಸಿಗೆ ಕೊತ ಕೊತ ಕುದಿಯುತ್ತಿದೆ, ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆ ಎದುರಾದ ಕಾರಣ, ಈಗ ಕುಡಿಯುವ ನೀರಿಗೆ ಕೂಡ ಬರ ಬಂದಿದೆ. ಗ್ರಾಮೀಣ ಭಾಗದಲ್ಲಿ ಅಂದ್ರೆ ಹಳ್ಳಿ ಜನರಿಗೆ ನೀರು ತುಂಬಿಸುವುದೇ ದೊಡ್ಡ ಸಾಹಸ. ಪರಿಸ್ಥಿತಿ ಹೀಗಿದ್ದಾಗ ಹವಾಮಾನ ಇಲಾಖೆಯ ವತಿಯಿಂದ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ಕೆಲವು ದಿನಗಳ ಕಾಲ ಭರ್ಜರಿ ಮಳೆ ಬಿದ್ದು ಭೂಮಿ ತಂಪಾಗುವ ಮುನ್ಸೂಚನೆ ನೀಡಲಾಗಿದೆ.
ಮುಂಗಾರು ಮಳೆ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನೇ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕವೂ ಸೇರಿದಂತೆ ದೇಶ ಸಾಕಷ್ಟು ಮಳೆ ಕೊರತೆ ಎದುರಿಸಿತ್ತು. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೀಗಾಗಿ ಹಲವು ಭಾಗದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಇದೇ ಸ್ಥಿತಿಯಲ್ಲಿ ಹವಾಮಾನ ಇಲಾಖೆ ಮಳೆ ಬಗ್ಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹಾಗಾದರೆ ಎಲ್ಲೆಲ್ಲಿ ಭರ್ಜರಿ ಮಳೆ ಬೀಳಲಿದೆ ಗೊತ್ತೆ?

ಭೂಮಿಯನ್ನ ತಂಪಾಗಿಸಲಿದೆ ಮಳೆ
ಏನೇ ಹೇಳಿ ಮಳೆ ಬಂದರೆ ಮಾತ್ರ ಭೂಮಿಗೆ ಕಳೆ, ಇಲ್ಲವಾದ್ರೆ ಪರದಾಟ ಕಟ್ಟಿಬುತ್ತಿ. ಈ ಕಾರಣಕ್ಕೆ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗಲೇ ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ. ದೇಶದ ಹಲವು ರಾಜ್ಯದಲ್ಲಿ ಮಳೆ ಮತ್ತು ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿ ಉತ್ತರ ಭಾರತದ ವಿವಿಧ ಭಾಗಕ್ಕೆ ಮುಂದಿನ ಒಂದು ವಾರ ಹವಾಮಾನ ವೈಪರೀತ್ಯದ ಪ್ರಭಾವ, ಮಳೆ ಬೀಳಲಿದೆ ಎನ್ನಲಾಗಿದೆ.
ನಾಳೆಯಿಂದಲೇ ಮಳೆಯ ಅಬ್ಬರ?
ಹವಾಮಾನ ಇಲಾಖೆ ಮಾಹಿತಿ ಹೇಳುವಂತೆ, ಫೆಬ್ರವರಿ 26, 27 ರಂದು ಮಧ್ಯ ಭಾರತ ಮತ್ತು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಭಾರಿ ಮಳೆ & ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಅಲ್ಲದೆ ಹವಾಮಾನ ವೈಪರೀತ್ಯದ ಪರಿಣಾಮ, ಉತ್ತರ ಭಾರತದ ರಾಜ್ಯಗಳಲ್ಲಿ ಲಘುವಾಗಿ ಸಾಧಾರಣ ಮಳೆಯ ನಿರೀಕ್ಷೆ ಮಾಡಲಾಗಿದೆ. ಹಾಗೇ ವಿಪರೀತ ವಾಯು ಮಾಲಿನ್ಯದ ಪರಿಣಾಮ ಈಗ ನರಳಾಡಿ ಹೋಗಿರುವ ರಾಷ್ಟ್ರ ರಾಜಧಾನಿ ದೆಹಲಿ ಕೂಡ ಮಳೆಯ ತಂಪನ್ನ ಕಾಣಲಿದೆಯಂತೆ. ಕೆಲ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಹಿಮಾಚಲ ಪ್ರದೇಶದಲ್ಲಿ ಸ್ಥಳೀಯ ಹವಾಮಾನ ಅಧಿಕಾರಿಗಳು ಫೆಬ್ರವರಿ 24 ರಿಂದ 28 ರವರೆಗೆ ಮಳೆ ಮತ್ತು ಹಿಮಪಾತ ಆಗಲಿದೆ ಎಂದಿದ್ದಾರೆ. ಫೆಬ್ರವರಿ 26 ಹಾಗೂ 27 ರಂದು ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶ ಸೇರಿ ವಿವಿಧ ಭಾಗದ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈಶಾನ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆಯು ಸುರಿಯುವ ಸಾಧ್ಯತೆ ಇದೆ. ಒಡಿಶಾ & ಆಂಧ್ರಪ್ರದೇಶ ಕರಾವಳಿಯಲ್ಲಿ ಲಘು ಮಳೆಯು ಬೀಳುವ ಸಾಧ್ಯತೆ ಇದ್ದು, ಮಳೆಗಾಲಕ್ಕೆ ಮೊದಲೇ ವರುಣನ ಆರ್ಭಟ ಈ ಮೂಲಕ ಶುರುವಾಗಲಿದೆ.
ಕಾವೇರಿ ಕೊಳ್ಳದಲ್ಲಿ ಭೀಕರ ಪರಿಸ್ಥಿತಿ
ಕರ್ನಾಟಕದ ಜನ ಮಳೆಯ ಕೊರತೆ ನಡುವೆ ಭೀಕರ ಬೇಸಿಗೆ ಎದುರಿಸುವಂತಾಗಿದೆ. ರಾಜ್ಯ ಈಗ ಸಾಕಷ್ಟು ನೀರಿನ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಕಾವೇರಿ ನದಿ ಕೊಳ್ಳದಲ್ಲಂತು ನೀರಿಗಾಗಿ ತೀವ್ರ ಪರದಾಟ ಮುಂದುವರಿದಿದೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಮಳೆ ಬಿದ್ದು ಭೂಮಿ ತಂಪಾಗಲಿ ಅಂತಾ ರೈತರು ಬೇಡುತ್ತಿದ್ದಾರೆ. ಆದರೆ ವರುಣ ದೇವ ಈಗಲಾದರೂ, ರೈತರು & ಜನರ ಮೇಲೆ ಕೃಪೆ ತೋರಿಸುತ್ತಾನಾ? ಕಾದು ನೋಡಬೇಕಿದೆ. ಅದಕ್ಕೂ ಮೊದಲು ಇದೀಗ ಉತ್ತರ ಭಾರತದಲ್ಲಿ ಬೇಸಿಗೆ ಆರಂಭದಲ್ಲೇ ಮಳೆಯ ಅಬ್ಬರ ಶುರುವಾಗಿದ್ದು, ಸ್ವಲ್ಪ ಬೇಸಿಗೆಯಿಂದ ಮುಕ್ತಿ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ ಜನ.












Click it and Unblock the Notifications