Heavy Rain: ಮಳೆ.. ಮಳೆ.. ಭರ್ಜರಿ ಮಳೆ.. ಮುಂಗಾರು ಮಳೆ ಮುಗಿದರೂ ಹಿಂಗಾರು ಮಳೆ ಕಾಟ!

ಮಳೆ ನಿಂತರೂ ಮರದ ಹನಿ ಸೈಲೆಂಟ್ ಆಗಲಿಲ್ಲ ಎನ್ನುವಂತೆ, ಮುಂಗಾರು ಮಳೆ ಅಬ್ಬರ ಮುಗಿದು ಹೋಗಿದ್ದರೂ ಹಿಂಗಾರು ಮಳೆ ಅಬ್ಬರ ದಿನದಿಂದ ದಿನಕ್ಕೆ ಓವರ್ ಆಗುತ್ತಿದೆ. ಈ ಮೂಲಕ ಮತ್ತೆ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಮಳೆಯ ಅಬ್ಬರ ಶುರುವಾಗಿ, ದೀಪಾವಳಿ ಹಬ್ಬ ಮಾಡೋದಕ್ಕೆ ಆಗುತ್ತಾ? ಇಲ್ವಾ? ಎಂಬ ಅನುಮಾನ ಕೂಡ ಮೂಡಿದೆ. ನಿನ್ನೆ ಅಂದ್ರೆ ಬುಧವಾರ ಕೂಡ ಮಳೆರಾಯ ಅಬ್ಬರಿಸಿದ್ದು, ಇಂದು ಕೂಡ ಮಳೆಯ ಆರ್ಭಟ ಗ್ಯಾರಂಟಿ ಆಗಿದೆ. ಹಾಗಿದ್ರೆ ಯಾವ ಯಾವ ಜಿಲ್ಲೆಗಳಿಗೆ ಮಳೆ ಬೀಳಲಿದೆ? ಮುಂದೆ ಓದಿ.

ಮಳೆ.. ಮಳೆ.. ಮಳೆ.. ಹೀಗೆ ಯಾವುದೇ ಜಿಲ್ಲೆಗೆ ಹೋದರೂ ಬರೀ ಮಳೆಯದ್ದೇ ಚರ್ಚೆ. ಮಳೆ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು, ಹಿಂಗಾರು ಮಳೆಯ ಅಬ್ಬರಕ್ಕೆ ಜನರು ಕೂಡ ಬೆಚ್ಚಿಬಿದ್ದಿದ್ದು ಪರದಾಟ ನೋಡಲು ಆಗುತ್ತಿಲ್ಲ. ಉತ್ತರ ಕರ್ನಾಟಕ ಟು ದಕ್ಷಿಣ ಕರ್ನಾಟಕ, ಮಲೆನಾಡು ಟು ಕರಾವಳಿ ಪ್ರದೇಶ ಹೀಗೆ ಕರ್ನಾಟಕದ ಪ್ರತಿಯೊಂದು ಜಾಗಕ್ಕೂ ಮಳೆಯ ಅಬ್ಬರ ಭಾರಿ ಸಮಸ್ಯೆ ಉಂಟು ಮಾಡಿದೆ. ಹೀಗಿದ್ದರೂ ಸೈಲೆಂಟ್ ಆಗದ ವರುಣ ದೇವ, ಮತ್ತಷ್ಟು ಅಬ್ಬರ ತೋರಲು ಸಿದ್ಧವಾಗಿದ್ದು, ಮುಂದಿನ 48 ಗಂಟೆ ಕಾಲ ಅಂದ್ರೆ 2 ದಿನ ಭರ್ಜರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

Heavy Rain Alert Has Been Given To These Districts Of Karnataka On 31st October Of 2024

ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ?

ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆಯೇ ಗಟ್ಟಿ ಯಾಕಂದ್ರೆ ಹಿಂಗಾರು ಮಳೆ ಕರ್ನಾಟಕದ ಜನರಲ್ಲಿ ಅಷ್ಟು ನಂಬಿಕೆ ಉಳಿಸಿಕೊಂಡಿಲ್ಲ. ಹೀಗಿದ್ದಾಗ 2024 ರಲ್ಲಿ ಮುಂಗಾರು ಮಳೆ ತನ್ನ ಆರ್ಭಟ ತೋರಿಸಿದ್ದು, ಮಳೆ ಸಹವಾಸ ಸಾಕು ಅಂತಾ ಜನರು ಇದ್ದಾಗಲೇ ಹಿಂಗಾರು ಮಳೆ ಕೂಡ ಕಿರಿಕ್ ಶುರು ಮಾಡಿದೆ. ಅಂದಹಾಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುರುವಾರ & ಶುಕ್ರವಾರ ಕೂಡ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯ...

ಈಗಿರುವ ಮಾಹಿತಿ ಪ್ರಕಾರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಲಾಗಿದೆ.

ಮತ್ತೊಂದು ಕಡೆ ರಾಮನಗರ ಸೇರಿದಂತೆ ತುಮಕೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ಕೂಡ ಮಳೆ ಸಿಂಚನ ಆಗಲಿದ್ದು, ಬೆಂಗಳೂರಿನಲ್ಲಿ ಮಳೆರಾಯ ತನ್ನ ಆರ್ಭಟ ಮತ್ತೊಮ್ಮೆ ಮುಂದುವರಿಸುವ ಮುನ್ಸೂಚನೆ ಸಿಕ್ಕಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಹಿಂಗಾರು ಮಳೆಯು ಆರ್ಭಟ ತೋರಲಿದೆ ಎಂದು ಎಚ್ಚರಿಸಲಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ...

ಮಳೆ ಇಲ್ಲದೆ ಸೊರಗಿದ್ದ ಕರ್ನಾಟಕದ ಜನರಿಗೆ ಮಳೆರಾಯ ಕಳೆದ 6 ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗ ಹಿಂಗಾರು ಮಳೆ ಮೋಡಗಳು ಕರ್ನಾಟಕದ ಕಡೆಗೆ ಓಡೋಡಿ ಬರುತ್ತಿದ್ದು ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿ ಮತ್ತಷ್ಟು ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ ಈಗಾಗಲೇ ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿ ಖುಷಿಯಾಗಿದ್ದ ರೈತರಿಗೆ ಈಗ ಮಳೆಯ ಎಂಟ್ರಿ ಆಗಿರುವುದು ಭಯ ಹುಟ್ಟಿಸಿದೆ. ಯಾಕಂದ್ರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣ ಆಗುತ್ತಿದ್ದು, ಹಿಂಗಾರು ಮಳೆ ಅಬ್ಬರದಲ್ಲಿ ಬೆಳೆ ಕೂಡ ನೀರು ಪಾಲಾಗುವ ಭಯ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+