Rain Alert: ಮಳೆ.. ಮಳೆ.. ಬೆಂಗಳೂರಲ್ಲಿ ಇನ್ನೂ 72 ಗಂಟೆ ಕಾಲ ಭರ್ಜರಿ ಮಳೆ ಎಚ್ಚರಿಕೆ!
ಮಳೆ.. ಮಳೆ.. ಮುಂಗಾರು ಮಳೆ ಬೆಂಗಳೂರಲ್ಲಿ ಅಬ್ಬರಿಸುತ್ತಿದೆ. ಇಂದು ಮಧ್ಯಾಹ್ನದ ತನಕ ಭರ್ಜರಿ ಬಿಸಿಲು ಇದ್ದ ಕಾರಣ, ಇವತ್ತು ಮಳೆ ಬರಲ್ಲ ಅಂತಾ ಬೆಂಗಳೂರು ನಿವಾಸಿಗಳು ಆರಾಮಾಗಿ ಓಡಾಡಿಕೊಂಡು ಇದ್ದರು. ಆದರೆ, ಸಂಜೆ 4 ಗಂಟೆ ನಂತರ ನಿಧಾನವಾಗಿ ಮಳೆಯ ಮೋಡಗಳು ಬೆಂಗಳೂರಿನ ಮೇಲೆ ದಾಳಿ ಮಾಡಿದವು. ಹೀಗೆ ಆರಂಭವಾದ ಮಳೆ ಈಗಲೂ ನಿಂತಿಲ್ಲ. ಸತತ 8 ಗಂಟೆ ಕಾಲ ಮಳೆ ಬಿದ್ದಿದ್ದು, ಮುಂದಿನ 72 ಗಂಟೆ ಕಾಲ ಬೆಂಗಳೂರಿನಲ್ಲಿ ವಾತಾವರಣ ಮತ್ತಷ್ಟು ಕೈಮೀರಿ ಹೋಗಲಿದೆಯಂತೆ.
ಬೆಂಗಳೂರಿನಲ್ಲಿ ಭರ್ಜರಿಯಾಗಿ ಮಳೆ ಬೀಳುತ್ತಿರುವ ಕಾರಣಕ್ಕೆ ಕರ್ನಾಟಕದ ರಾಜಧಾನಿ ಜನರು ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಸಂಜೆ 4 ಗಂಟೆ ನಂತರ ಭರ್ಜರಿ ಮಳೆ ಶುರುವಾದ ಕಾರಣಕ್ಕೆ ಇದೇ ಸಮಯದಲ್ಲಿ ಕಚೇರಿಗಳಿಂದ ಮನೆಗೆ ಹೋಗಬೇಕಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು. ಅದರಲ್ಲೂ ದ್ವಿಚಕ್ರ ವಾಹನ ಅಂದ್ರೆ ಬೈಕ್ & ಸ್ಕೂಟರ್ ಮೂಲಕ ಮನೆಗೆ ಹೋಗಬೇಕಿದ್ದ ಲಕ್ಷ ಲಕ್ಷ ಜನ ರಸ್ತೆ ಮಧ್ಯದಲ್ಲೇ ಗಾಡಿ ಹಾಕಿಕೊಂಡು ಅಂಗಡಿಗಳ ಎದುರು ನಿಂತು ಪರದಾಡುವ ದೃಶ್ಯ ಕಂಡುಬಂತು. ಹಾಗಾದ್ರೆ ಬೆಂಗಳೂರಿನಲ್ಲಿ ಇವತ್ತಿಗೆ ಮಳೆ ಮುಗಿಯುತ್ತಾ? ಇಲ್ಲ, ಇಲ್ಲ ಇವತ್ತು ಸುರಿದ ಮಳೆದ ಬರೀ ಸ್ಯಾಂಪಲ್ ಅಷ್ಟೇ. ಯಾಕಂದ್ರೆ ನಾಳೆ & ನಾಡಿದ್ದು ಮಳೆರಾಯ ಅಸಲಿ ರೂಪ ತೋರಿಸಲಿದ್ದಾನೆ!

ಬೆಂಗಳೂರಲ್ಲಿ ಮಳೆ ಕಾರಣಕ್ಕೆ ಹೈಅಲರ್ಟ್
ಮುಂಗಾರು ಮಳೆ ಬೆಂಗಳೂರಲ್ಲಿ ಮತ್ತಷ್ಟು ಚುರುಕಾಗಿದ್ದು, ಮುಂದಿನ 4 ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ. ಅದ್ರಲ್ಲೂ ಎರಡು ದಿನಗಳ ಕಾಲ ಮಳೆಯ ಅಬ್ಬರ ಮತ್ತಷ್ಟು ಜೋರು ಜೋರಾಗಿ ಇರಲಿದೆ. ಹೀಗಾಗಿ ಮುಂದಿನ 72 ಗಂಟೆ ಕಾಲ ಬೆಂಗಳೂರಲ್ಲಿ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಿ. ಇಲ್ಲವಾದರೆ ರಸ್ತೆ ಮಧ್ಯದಲ್ಲಿ ಮಳೆಯ ನಡುವೆ ಸಿಲುಕಿ ಒದ್ದಾಡಬೇಕಾದ ಸ್ಥಿತಿ ಬರುವುದು ಗ್ಯಾರಂಟಿ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹುಷಾರ್.
ಬೇರೆ ಯಾವ ಜಿಲ್ಲೆಗಳಲ್ಲಿ ಮಳೆ?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಮಳೆ ಅಬ್ಬರಿಸುವ ಜಿಲ್ಲೆಗಳಿಗೆ ಮುನ್ನೆಚ್ಚರಿಕೆಯ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಬೆಂಗಳೂರು ಸೇರಿ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾ., ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕೂಡ ಭಾರಿ ಮಳೆ ಬೀಳಲಿದೆ. ಜೊತೆಗೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದ ಹಲವು ಭಾಗಗಳಲ್ಲಿ ಮಳೆರಾಯ ಆರ್ಭಟಿಸಲಿದ್ದಾನೆ. ಹೀಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿ ಕರಾವಳಿ ಭಾಗದಲ್ಲೂ ಭರ್ಜರಿಯಾಗಿ ಮಳೆ ಬೀಳಲಿದೆ.
ಒಟ್ನಲ್ಲಿ ಮಳೆ ಜೋರಾಗಿ ಬರುತ್ತಿದ್ದು, ಹೀಗಿದ್ದಾಗ ಅನಗತ್ಯವಾಗಿ ಹೊರಗೆ ಹೋಗಬೇಡಿ. ಅದು ಅನಿವಾರ್ಯ ಪರಿಸ್ಥಿತಿ ಇದ್ದರೆ ಹೊರಗೆ ಹೋಗುವಾಗ ಎಚ್ಚರಿಕೆಯಿಂದ ಇರಿ. ಅಕಸ್ಮಾತ್ ನಿಮಗೆ ಇನ್ನೂ ಅನಿವಾರ್ಯತೆ ಇದ್ದರೆ ವರ್ಕ್‌ಫ್ರಂ ಹೋಂ ಪಡೆಯಿರಿ ಯಾಕಂದ್ರೆ ಮುಂಗಾರು ಮಾರುತಗಳ ಅಬ್ಬರ ಮತ್ತಷ್ಟು ಜೋರಾಗುವ ಆತಂಕ ಕಾಡುತ್ತಿದೆ.












Click it and Unblock the Notifications