Rain Alert: ಮಳೆ ಕಾಟ ಇನ್ನೂ ಮುಗಿದಿಲ್ಲ, ಇಂದಿನಿಂದ ಮತ್ತೆ 3 ದಿನ ಅಬ್ಬರಿಸಲಿದೆ ಮುಂಗಾರು ಮಳೆ!
ಮಳೆ.. ಮಳೆ.. ಎಲ್ಲೆಲ್ಲೂ ಬರೀ ಮಳೆಯದ್ದೇ ಮಾತುಕತೆ ಹಾಗೇ ಮಳೆಯದ್ದೇ ಚರ್ಚೆ. ಹೀಗೆ ಮುಂಗಾರು ಮಳೆ ಅಬ್ಬರಿಸುತ್ತಾ ಎಲ್ಲರಿಗೂ ಸಮಸ್ಯೆ ಮಾಡುತ್ತಿದೆ. ಕೆಲವೇ ತಿಂಗಳ ಹಿಂದೆ ಅಂದ್ರೆ 2024ರ ಬೇಸಿಗೆ ಸಮಯದಲ್ಲಿ ಕರ್ನಾಟಕದಲ್ಲಿ ಹನಿ ನೀರು ಇಲ್ಲದೆ ಜನ ಪರದಾಡಿದ್ದರು. ಹೀಗೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಹನಿ ಹನಿ ನೀರಿಗೂ ಸಂಕಷ್ಟ ಎದುರಾಗಿತ್ತು. ಈ ಕಾರಣಕ್ಕೆ ಜನ ಕೂಡ ಪರದಾಡಿದ್ದರು, ಅಲ್ಲದೆ ದೇವರೆ ಮಳೆ ಬರಿಸಪ್ಪಾ ಅಂತಾ ಪೂಜೆಯನ್ನು ಮಾಡಿ ಪ್ರಾರ್ಥನೆ ಮಾಡಿದ್ದರು. ಆದರೆ ಈಗ ಮಳೆ ನಿಲ್ಲಿಸು ದೇವರೆ ಅಂತಾ ಬೇಡುತ್ತಿದ್ದಾರೆ.
ಹೌದು, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಕೈಮೀರಿ ಹೋಗುತ್ತಿದೆ. ಹೀಗಾಗಿಯೇ ಜನ ಕೂಡ ನರಳಾಡಿ ಹೋಗಿದ್ದಾರೆ. ಯಾವ ಕ್ಷಣದಲ್ಲಿ ಮಳೆ ನಿಲ್ಲುತ್ತೆ ಅಂತಾ ಮುಗಿಲು ನೋಡುವ ಪರಿಸ್ಥಿತಿ ಬಂದಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಭಾರಿ ಮಳೆ ಬೀಳುತ್ತಿದೆ. ಅದರಲ್ಲೂ ಮುಂದಿನ 3 ದಿನಗಳ ಕಾಲ ಮುಂಗಾರು ಮಳೆ ಮತ್ತಷ್ಟು ಅಬ್ಬರ ತೋರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಅತಿಹೆಚ್ಚು ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಮಳೆ ಅಬ್ಬರಿಸುವ ಜಿಲ್ಲೆಗಳು ಯಾವುವು?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಮಳೆ ಅಬ್ಬರಿಸುವ ಜಿಲ್ಲೆಗಳಿಗೆ ಮುನ್ನೆಚ್ಚರಿಕೆಯ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಬೆಂಗಳೂರು ಸೇರಿ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾ., ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕೂಡ ಭಾರಿ ಮಳೆ ಬೀಳಲಿದೆ. ಜೊತೆಗೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದ ಹಲವು ಭಾಗಗಳಲ್ಲಿ ಮಳೆರಾಯ ಆರ್ಭಟಿಸಲಿದ್ದಾನೆ. ಹೀಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿ ಕರಾವಳಿ ಭಾಗದಲ್ಲೂ ಭರ್ಜರಿಯಾಗಿ ಮಳೆ ಬೀಳಲಿದೆ.
ಬೆಂಗಳೂರಿನಲ್ಲೂ ಮಳೆ ಅಬ್ಬರ ಗ್ಯಾರಂಟಿ
ಮುಂಗಾರು ಮಳೆ ಬೆಂಗಳೂರಲ್ಲಿ ಮತ್ತಷ್ಟು ಚುರುಕಾಗಿದ್ದು, ಮುಂದಿನ 4 ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ. ಅದ್ರಲ್ಲೂ ಎರಡು ದಿನಗಳ ಕಾಲ ಮಳೆಯ ಅಬ್ಬರ ಮತ್ತಷ್ಟು ಜೋರು ಜೋರಾಗಿ ಇರಲಿದೆ. ಹೀಗಾಗಿ ಮುಂದಿನ 72 ಗಂಟೆ ಕಾಲ ಬೆಂಗಳೂರಲ್ಲಿ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಿ. ಇಲ್ಲವಾದರೆ ರಸ್ತೆ ಮಧ್ಯದಲ್ಲಿ ಮಳೆಯ ನಡುವೆ ಸಿಲುಕಿ ಒದ್ದಾಡಬೇಕಾದ ಸ್ಥಿತಿ ಬರುವುದು ಗ್ಯಾರಂಟಿ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹುಷಾರ್. ಹಾಗೇ ಈ ರೀತಿ ಭರ್ಜರಿಯಾಗಿ ಮಳೆ ಬೀಳುವ ಸಮಯದಲ್ಲಿ ವಿದ್ಯುತ್ ಕಂಬ & ಮರಗಳಿಂದ ದೂರ ಇರಿ. ಹಾಗೇ ಬಸ್ & ಮೆಟ್ರೋದಲ್ಲಿ ಸಂಚಾರ ಮಾಡುವವರು ಜೊತೆಯಲ್ಲಿ ಮರೆಯದೆ ಕೊಡೆಯನ್ನು ತೆಗೆದುಕೊಂಡು ಹೋಗಿ. ಮಳೆ ಹೆಚ್ಚಾದರೆ ಹೊರಗೆ ಬರುವ ಸಾಹಸ ಮಾಡಬೇಡಿ.












Click it and Unblock the Notifications