ಮುಂದಿನ 48 ಗಂಟೆ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ... Karnataka Rain
ಮಳೆ.. ಮಳೆ.. ಮುಂಗಾರು ಮಳೆ.. ನಮ್ಮ ರೈತರು ಮುಂಗಾರು ಮಳೆಯ ಬಗ್ಗೆ ದೇವರ ರೀತಿ ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರೆ. ಯಾಕಂದ್ರೆ ಮುಂಗಾರು ಮಳೆ ನಮ್ಮ ಕನ್ನಡ ನಾಡಿನ ಜೀವನಾಡಿ, ಜೊತೆಗೆ ಇಡೀ ದಕ್ಷಿಣ ಭಾರತಕ್ಕೆ ಇದೇ ಮುಂಗಾರು ಮಳೆ ಆಧಾರವಾಗಿ ನಿಂತಿದೆ. ಇಂತಹ ಸಮಯದಲ್ಲೇ ಮುಂಗಾರು ಮಳೆ ಈ ಬಾರಿ ಬಹು ಬೇಗನೇ ಎಂಟ್ರಿಯನ್ನ ಕೂಡ ನೀಡಿದ್ದು, ಮತ್ತೊಂದು ಸಿಹಿಸುದ್ದಿ ಇದೀಗ ಸಿಗುತ್ತಿದೆ. ಆದರೆ ಭರ್ಜರಿ ಮಳೆ ಬಗ್ಗೆ ಇದೀಗ ಭಯ ಕೂಡ ಶುರುವಾಗಿದೆ...
ಮುಂಗಾರು ಮಳೆ ಕೈಕೊಟ್ಟ ಕಾರಣ ಕರ್ನಾಟಕ 2023ರಲ್ಲಿ ಸಮಸ್ಯೆಗೆ ಸಿಲುಕಿತ್ತು. ಹೀಗಾಗಿಯೇ 2024ರ ಬೇಸಿಗೆ ಆರಂಭಕ್ಕೂ ಮೊದಲೇ ದೊಡ್ಡ ತಲೆನೋವು ಶುರುವಾಗಿ, ಕುಡಿಯುವ ನೀರಿಗೂ ಸರ್ಕಾರ ಪರದಾಡಿತ್ತು. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಶುರು ಆಗಿತ್ತು. ಇಷ್ಟೆಲ್ಲದರ ನಡುವೆ ದಿಢೀರ್ ಅಂತಾ 2024 ಬೇಸಿಗೆ ಸಮಯದಲ್ಲಿ ಶುರು ಆಗಿದ್ದ ಮಳೆ ಭರ್ಜರಿಯಾಗಿ ಬಿದ್ದು ಖುಷಿ ನೀಡಿತ್ತು. ಹೀಗಿದ್ದಾಗಲೇ, 2025 ಕೂಡ ಮುಂಗಾರು ಮಳೆ ವಿಚಾರದಲ್ಲಿ ಭರ್ಜರಿ ಸುದ್ದಿ ನೀಡುತ್ತಿದೆ. ಅದರಲ್ಲೂ ಮುಂದಿನ 48 ಗಂಟೆ ಕಾಲ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ!

ಮಳೆ.. ಮಳೆ.. ಭರ್ಜರಿ ಮಳೆ...
ಹೌದು, ಮುಂದಿನ 48 ಗಂಟೆ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಸುರಿಯುವ ಕುರಿತು ಈಗ ಮುನ್ಸೂಚನೆ ನೀಡಲಾಗಿದೆ. ಮುಂಗಾರು ಮಳೆ ಅಬ್ಬರ ಕಂಡು ರೈತರಿಗೆ ಭಾರಿ ಖುಷಿ ಆಗಿ, ಕುಣಿದಾಡುತ್ತಾ ಇದ್ದರೆ ಮತ್ತೊಂದು ಕಡೆ ಭಾರಿ ಮಳೆ ಕಾರಣಕ್ಕೆ ಹಲವು ಪ್ರದೇಶಗಳ ಜನರು ಇದೀಗ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡ ಈ ವಿಚಾರದಲ್ಲಿ ಭಾರಿ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಹೀಗಿದ್ದರೂ ಮಳೆ ಕಾರಣಕ್ಕೆ ಜನರು ಹೆದರಿ ಕೂರುವ ರೀತಿ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಈಗ ಸುರಿಯಲಿದೆ? ಮುಂದೆ ಓದಿ.
ಭರ್ಜರಿ ಮಳೆ ಸುರಿಯುವ ಮುನ್ನೆಚ್ಚರಿಕೆ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ, ಉತ್ತರ ಕರ್ನಾಟಕ & ಮಧ್ಯ ಕರ್ನಾಟಕದಲ್ಲಿ ಕೂಡ ಇದೀಗ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇದೇ ಕಾರಣಕ್ಕೆ ಎಲ್ಲೆಲ್ಲೂ ಭಾರಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ಜಿಲ್ಲೆಗಳು ಸೇರಿ ಬೆಂಗಳೂರು ನಗರ ಜಿಲ್ಲೆ & ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ.
ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲೂ ಈಗ ಮಳೆ ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಹಾಗೂ ಇತರ ಜಿಲ್ಲೆಗಳಲ್ಲೂ ಭರ್ಜರಿ ಮಳೆಯ ಮುನ್ಸೂಚನೆ ಇದೆ.
ಮಳೆ ಆರ್ಭಟದ ಬಗ್ಗೆ ವಾರ್ನಿಂಗ್...
ಕಳೆದ 1 ವಾರದಿಂದ ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆಯೇ ಸುರಿಯುತ್ತಿದೆ. ಮಳೆ ಈ ರೀತಿ ಅಬ್ಬರಿಸುತ್ತಿರುವುದು ನೋಡಿದ ಜನರು ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ಯಾವಾಗ ನಿಲ್ಲುತ್ತೆ? ಅಂತಾ ಕರಾವಳಿ & ಮಲೆನಾಡು ಜನ ಚಿಂತೆ ಮಾಡುವಂತೆ ಆಗಿದೆ. 2023 ವರ್ಷ ಪೂರ್ತಿ ಕೈಕೊಟ್ಟು ಬರ ತರಿಸಿದ್ದ ಮಳೆ, ಆ ನಂತರ 2024 ವರ್ಷ ಪೂರ್ತಿ ಸುರಿದು ಸಮಾಧಾನ ನೀಡಿತ್ತು. ಇದೀಗ 2025 ರಲ್ಲಿ ಕೂಡ ಭಾರಿ ಭರ್ಜರಿಯಾಗಿ ಸುರಿಯುತ್ತಿದ್ದು, ಮೇ ತಿಂಗಳಲ್ಲೇ ಮುಂಗಾರು ಮಳೆ ಶುರುವಾಗಿದೆ. ಹೀಗಿದ್ದಾಗ ಮತ್ತೆ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ...












Click it and Unblock the Notifications