Rain Alert: 24 ಗಂಟೆಗಳಲ್ಲಿ ಭಾರಿ ಮಳೆ ಅಬ್ಬರ, ಯಾವ ಯಾವ ಜಿಲ್ಲೆಗಳಲ್ಲಿ ಅಲರ್ಟ್?
ಉಯ್ಯೊ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ... ಹೀಗೆ ಈ ಪದ್ಯವನ್ನ ಈಗ ಉಲ್ಟಾ ಹೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಯ್ಯೊ ಉಯ್ಯೋ ಮಳೆರಾಯ ಬದಲಾಗಿ, ನಿಲ್ಲೋ ನಿಲ್ಲೋ ಮಳೆರಾಯ ಅನ್ನೋ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ಅಷ್ಟೊಂದು ಮಳೆ ಸುರಿದ ಕಾರಣ ಕನ್ನಡ ನಾಡಿನಲ್ಲಿ ಹಸಿ ಬರ ಶುರುವಾಗುವ ಆತಂಕ ಎದುರಾಗಿದೆ. ಮಳೆ ಬರದೇ ಇದ್ದರೆ ಒಣ ಬರ, ಹಾಗೇ ಅತಿಯಾಗಿ ಮಳೆ ಬಿದ್ದರೆ ಅದರಿಂದ ಸೃಷ್ಟಿ ಅಗುವ ಪ್ರಾಕೃತಿಕ ವಿಕೋಪಕ್ಕೆ ಹಸಿ ಬರ ಎನ್ನಬಹುದು. ಇಂತಹ ಸಮಯದಲ್ಲೇ... 24 ಗಂಟೆಗಳಲ್ಲಿ ಭಾರಿ ಮಳೆ ಅಬ್ಬರ, ಯಾವ ಯಾವ ಜಿಲ್ಲೆಗಳಲ್ಲಿ ಅಲರ್ಟ್?
ಮಳೆ.. ಮಳೆ.. ಮಳೆ.... ಎಲ್ಲಿ ನೋಡಿದರೂ ಬರೀ ಮಳೆಯದ್ದೇ ಸುದ್ದಿ, ಹೀಗೆ ಮಳೆಯದ್ದೇ ಸದ್ದು. ಮಳೆ ಸುರಿಯುತ್ತಿರುವ ರೀತಿಗೆ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಯಾಕಪ್ಪ ಅಂದ್ರೆ ಇನ್ನೇನು ಚಳಿಗಾಲದ ಎಂಟ್ರಿ ಆಗುತ್ತಿದ್ದರೂ ಮಳೆ ಆರ್ಭಟ ಮಾತ್ರ ಕಡಿಮೆ ಆಗುತ್ತಿಲ್ಲ. ಬದಲಾಗಿ ಈಗ ಮಳೆ ಮತ್ತೆ ತನ್ನ ಆರ್ಭಟ ತೋರಿಸಲು ಸಜ್ಜಾಗಿದೆ. ಅದರಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಅಬ್ಬರ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. 24 ಗಂಟೆಗಳಲ್ಲಿ ರಣಮಳೆ ಶುರುವಾಗುವ ಮುನ್ಸೂಚನೆ ಇದ್ದು, ಒಳನಾಡು ಪ್ರದೇಶಗಳಲ್ಲಿ ಭಾರಿ ದೊಡ್ಡ ಪ್ರಾಕೃತಿಕ ವಿಕೋಪದ ಭಯ ಕೂಡ ಆವರಿಸಿದೆ.

ಮಳೆ ಭಾರಿ ಭರ್ಜರಿ ಮಳೆ!
ಹೌದು, 2025 ವರ್ಷ ಪೂರ್ತಿ ಬರೀ ಮಳೆಯ ಆರ್ಭಟ ನೋಡಿ ನೋಡಿ ಜನರು ಕೂಡ ಸುಸ್ತಾಗಿದ್ದಾರೆ. ಇಷ್ಟಾದರೂ ಮತ್ತೆ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೇ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆಯ ನೀಡಲಾಗಿದೆ. ಅಕ್ಟೋಬರ್ 09 ಗುರುವಾರ ನಂತರ ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ, ಹೀಗಾಗಿ ಈಗ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಮಳೆ ಆರ್ಭಟದ ನಡುವೆ ರಜೆ ಘೋಷಣೆ!
ಕರ್ನಾಟಕದಲ್ಲಿ ಇದೀಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದು ಮತ್ತೊಂದು ಒಳ್ಳೆ ಕೆಲಸ ಮಾಡಿದಂತೆ ಆಗಿದೆ. ಯಾಕಂದ್ರೆ ಕರ್ನಾಟಕದಲ್ಲಿ ಮತ್ತೆ ಘೋರ ಮಳೆ ಸುರಿಯುವ ಬಗ್ಗೆ ಈಗ ಮುನ್ನೆಚ್ಚರಿಕೆ ನೀಡಿದ್ದು, ಅಕ್ಟೋಬರ್ 09 ಗುರುವಾರ ನಂತರ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಮಳೆ ಸುರಿಯುತ್ತಿರುವ ರೀತಿಗೆ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಯಾಕಪ್ಪ ಅಂದ್ರೆ ಇನ್ನೇನು ಚಳಿಗಾಲದ ಎಂಟ್ರಿ ಆಗುತ್ತಿದ್ದರೂ ಮಳೆ ಆರ್ಭಟ ಮಾತ್ರ ಕಡಿಮೆ ಆಗುತ್ತಿಲ್ಲ. ಬದಲಾಗಿ ಈಗ ಮಳೆ ಮತ್ತೆ ತನ್ನ ಆರ್ಭಟ ತೋರಿಸಲು ಸಜ್ಜಾಗಿದೆ. ಅದರಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಅಬ್ಬರ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಈಗ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.












Click it and Unblock the Notifications