ಕೆಮ್ಮು, ನೆಗಡಿ, ಶೀತ, ಜ್ವರದಿಂದ ರಕ್ಷಣೆ ಆರೋಗ್ಯ ಇಲಾಖೆಯ ನಿಯಮ ಪಾಲಿಸಿ
ಬೆಂಗಳೂರು, ಡಿಸೆಂಬರ್ 12: 'ಮಾಂಡೌಸ್' ಚಂಡಮಾರುತದ ಪರಿಣಾಮ ಚಳಿ, ಮಳೆ, ತಂಪು ಗಾಳಿ ಬೀಸುವಿಕೆ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ಮಳೆಯು ಮುಂದುವರಿದ ಪರಿಣಾಮ ಜನರ ಆರೋಗ್ಯ ಹದಗೆಡುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗದಂತೆ ಆರೋಗ್ಯ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.
ಮಾಂಡೌಸ್ ಚಂಡಮಾರುತ ಅಪ್ಪಳಿಸಿ ದುರ್ಬಲಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗೆ ಮಳೆ, ಗಾಳಿ, ಚಳಿ ಹೆಚ್ಚಾಗುತ್ತಿದ್ದಂತೆ ಜನರಿಗೆ ಶೀತ, ಜ್ವರ ಇನ್ನಿತರ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಇಂತಹ ಅನಾರೋಗ್ಯ ಸಮಸ್ಯೆ ಹೆಚ್ಚು. ಈ ಕಾರಣಕ್ಕೆ ನಿಮ್ಮ ಕುಟುಂಬದ ಆರೋಗ್ಯ ದೃಷ್ಟಿಯಿಂದ ಹಲವು ಆರೋಗ್ಯ ಕ್ರಮ ಅನುಸರಿಸುವಂತೆ ರಾಜ್ಯ ಆರೋಗ್ಯ ಸೂಚಿಸಿದೆ.
ಆರೋಗ್ಯಕ್ಕಾಗಿ ಪಾಲಿಸಬೇಕಾದ ಅಂಶಗಳೇನು?
* ಸದಾ ಬೆಚ್ಚಗಿನ ನೀರು, ಸೂಪ್ ಕುಡಿಯಬೇಕು
* ಸುಲಭವಾಗಿ ಜೀರ್ಣವಾಗುವ ಮತ್ತು ಬಿಸಿ ಆಹಾರ ಪದಾರ್ಥ ಸೇವಿಸಬೇಕು.
* ಸಾಧ್ಯವಾದಷ್ಟು ಸ್ವೇಟರ್, ಸಾಕ್ಸ್, ಕೈಗವಸು ಸೇರಿದಂತೆ ಬೆಚ್ಚಿನ ಧಿರಿಸು ಧರಿಸಬೇಕು. ಮನೆಯಲ್ಲಿಯೂ ಬೆಚ್ಚಗಿರಬೇಕು.
* ಸ್ನಾನಕ್ಕೆ ಬಿಸಿ ನೀರು/ ಇಲ್ಲವೇ ತುಸು ಬೆಚ್ಚಗಿನ ನೀರು ಬಳಸಬೇಕು.
* ಅನಗತ್ಯ ಹೊರಗಿನ ಸಂಚಾರ ನಿಲ್ಲಿಸಬೇಕು.
* ಕಿವಿಗಳಿಗೆ ಸ್ಕಾರ್ಪ್ ಕಟ್ಟಿಕೊಳ್ಳುವುದು ಮತ್ತು ಹೊರ ಹೋಗುವಾಗ ಮಾಸ್ಕ್ ಧರಿಸಬೇಕು.
* ಕೆಮ್ಮು, ಶೀತ, ಜ್ವರ ಇರುವವರಿಂದ ದೂರವಿರಬೇಕು.

* ಸೀನುವಾಗ ಕರವಸ್ತ್ರ ಬಳಸಿ, ಇಲ್ಲವೇ ಕೈ, ಮೊಣಕೈ ಅಡ್ಡಿ ವಿಟ್ಟುಕೊಂಡು ಸೀನಬೇಕು.
* ಕೈಗಳನ್ನು ಆಗಾಗ ತೊಳೆಯಿರಿ. ಜ್ವರ, ಇನ್ನಿತರ ಖಾಯಿಲೆ ಲಕ್ಷಣ ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯಕ್ಕಾಗಿ ಮಾಡಬಾರದ ಕೆಲಸಗಳೇನು?
* ತಣ್ಣಗಿನ ಪಾನೀಯ, ನೀರು, ಐಸ್‌ಕ್ರೀಂ ಸೇವಿಸಬೇಡಿ
* ಮಳೆಯಲ್ಲಿ ನೆನೆಯುವುದು ಇಲ್ಲವೇ ಶೀತಗಾಳಿಗೆ ಮೈ ಒಡ್ಡುವುದನ್ನು ನಿಲ್ಲಿಸಬೇಕು.
* ಹೊರಗಿನ ಗಿರಿಧಾಮ ಇನ್ನಿತರ ಕಡೆಗಳಲ್ಲಿನ ಪ್ರವಾಸ ಆದಷ್ಟು ನಿರ್ಬಂಧಿಸಿ.
* ಮಸಾಲಯುಕ್ತ/ಜಂಕ್ ಫುಡ್‌ಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.












Click it and Unblock the Notifications