ವಿಜಯಪುರದಲ್ಲಿ ಬೈಕ್ ಡಿಕ್ಕಿ, ರಸ್ತೆ ಮಧ್ಯದಲ್ಲಿ ಬೈಕ್ ಸವಾರ ಭಸ್ಮ

Posted By:
Subscribe to Oneindia Kannada

ವಿಜಯಪುರ, ಫೆಬ್ರವರಿ 3: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆ ಮಧ್ಯದಲ್ಲಿಯೇ ಒಬ್ಬ ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ತಾಲೂಕಿನಲ್ಲಿ ನಡೆದಿದೆ. ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಮೇಶ ಸಿದ್ದಪ್ಪ ಕಂಬಾಳೆ(50) ಸಜೀವ ದಹನವಾದ ವ್ಯಕ್ತಿ, ಇನ್ನೊಬ್ಬ ಬೈಕ್ ಸವಾರ ಪ್ರಕಾಶ ಚವ್ಹಾಣ(28). ರಮೇಶ ಕಂಬಾಳೆ ವಿಜಯಪುರ ತಾಲ್ಲೂಕಿನ ಅರಕೇರಿ ತಾಂಡಾ ಬಳಿ ಬೈಕ್ ಮೇಲೆ ಸೀಮೆಎಣ್ಣೆ ತುಂಬ್ಬಿದ್ದ ಕ್ಯಾನಗಳನ್ನು ಇಟ್ಟುಕೊಂಡು ಬರುತ್ತಿದ್ದರು ಈ ವೇಳೆ ಚವ್ಹಾಣ ಅವರ ಬೈಕ್ ಎದುರಿಗೆ ಬಂದು ಇಬ್ಬರ ವಾಹನಗಳಿಗೂ ಘರ್ಷಣೆ ಸಂಭವಿಸಿದೆ. ಆಗ ಸೀಮೆಎಣೆ ಹೊರ ಸುರಿದು ಬೆಂಕಿ ಹೊತ್ತಿಕೊಂಡಿದೆ.[ಬೈಕ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು]

Head-on collision between two bikes being burnt by a bike rider in Vijayapura

ಈ ಸಮಯದಲ್ಲಿ ರಮೇಶ ಸಿದ್ದಪ್ಪ ಅವರ ಮೇಲೂ ಸೀಮೆ ಎಣ್ಣೆ ಸುರಿದ ಪರಿಣಾಮ ಬೆಂಕಿಗೆ ಆಹುತಿಯಾಗಿದ್ದಾರೆ. ಅಲ್ಲದೆ ಎರಡು ಬೈಕುಗಳೂ ಸುಟ್ಟು ಭಸ್ಮವಾಗಿವೆ. ಚವ್ಹಾಣ ಅವರೂ ಅಗ್ನಿ ಅನಾಹುತದಲ್ಲಿ ಗಂಬೀರ ಗಾಯಗಳಿಗೆ ತುತ್ತಾಗಿದ್ದಾರೆ.

ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳಕ್ಕೆ ವಿಜಯಪುರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Head-on collision between two bikes in the middle of the road after being burnt by a bike rider in near Arakeri Tanda, Vijayapura. One is in the hospital being treated for a serious injury.
Please Wait while comments are loading...