ಜನರಿಗೆ ಮೋಸ ಮಾಡಲಿಕ್ಕೆ ಅಂತಾನೆ ಇಟ್ಕೊಂಡಿರೋ ಹೆಸರು ಗಾಂಧಿ ಅಂತ : ಸಿ.ಟಿ.ರವಿ ವಾಗ್ದಾಳಿ
ಜನರಿಗೆ ಮೋಸ ಮಾಡಬೇಕು ಎಂದು ಗಾಂಧಿ ಹೆಸರು ಇಟ್ಟುಕೊಂಡಿದ್ದಾರೆ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಕೊಪ್ಪಳ,ಮಾರ್ಚ್ 13: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಿಷನ್ 150 ಟಾರ್ಗೆಟ್ ಹಾಕಿಕೊಂಡಿರುವ ರಾಜ್ಯ ಬಿಜೆಪಿ ಈ ಬಅರಿ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಲು ಪಣ ತೊಟ್ಟಿದೆ. ಈಗಾಗಾಲೇ ರಾಜ್ಯಾದ್ಯಂತ ಹಲವು ತಂಡಗಳಾಗಿ ರಾಜ್ಯ ಪ್ರವಾಸವನ್ನ ಕೈಗೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಕೊಪ್ಪಳದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾತನಾಡಿ, ಮಹಾತ್ಮಾ ಗಾಂಧಿಗೂ ಹಾಗೂ ಸೋನಿಯಾ ಗಾಂಧಿಗೂ ಸಂಬಂದ ಇದೆಯಾ, ಆದರೂ ಜನರಿಗೆ ಮೋಸ ಮಾಡಲಿಕ್ಕೆ ಅಂತಾನೆ ಗಾಂಧಿ ಅಂತ ಹೆಸರಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ನಾವು ಯಾತ್ರೆಯಲ್ಲಿ ಏನು ಹೇಳುತ್ತೇವೋ, ಮಾಡಿದಿವಿ ಅದನ್ನೆ ಮಾಡುತ್ತೇವೆ. ಕಾಂಗ್ರೆಸ್ ನವರು ಮಾಡಿದ್ದು ಮಾತಾಡಲ್ಲ, ಅವರು ಮಾಡಿದ್ದು ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ. ಈಗ ಹೇಳ್ತಾರೆ 200 ಯುನಿಟ್ ಕರೆಂಟ್ ಪ್ರೀ ಅಂತಾ. ಅವರು ಹೇಳ್ತಾರೆ ಸುಳ್ಳು ನಮ್ಮಲ್ಲಿಲ್ಲ, ಆದ್ರೆ ಸುಳ್ಳೆ ಅವರ ಮನೆ ದೇವರು ಎಂದು ಕಿಡಿಕಾರಿದರು.
ಕರೆಂಟ್ ಇಲ್ಲ ಎಂದು ಪೋನ್ ಮಾಡಿದ ವ್ಯಕ್ತಿಯನ್ನ ಜೈಲಿಗೆ ಹಾಕಿದ್ದು ಡಿ.ಕೆ ಶಿವಕುಮಾರ್, ಇಂತಹ ಸುಳ್ಳಿನ ಜನ ಕರೆಂಟ್ ಕೊಡದವರು, ಇನ್ನೂ ಪ್ರೀ ಕೊಡ್ತಿರಾ ಎಂದು ಪ್ರಶ್ನಿಸಿದ ಅವರು,
ಕಾಂಗ್ರೆಸ್ ನವರೇ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಮೋಸ ವಂಚನೆ ಅವರಿಗೆ ಮೊದಲಿಂದಲು ಬಂದಿದ್ದು. ಈಗ ಏನೇನೊ ಕೊಡ್ತಿವಿ ಅಂತಿದಾರೆ, ಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲಿ ಕೊಟ್ಟಿದ್ದಿರಾ, ಕೊಟ್ಟಿದ್ದರೆ ಹೇಳಿ ಎಂದರು.

ಮೋದಿ ಹೇಳದೆ ಅನೇಕ ಯೋಜನೆ ಕೊಟ್ಟಿದ್ದಾರೆ. ನಿಮ್ಮ ಸರ್ಕಾರ ಇರುವಲ್ಲಿ ಇವೆಲ್ಲ ಯೋಜನೆ ಯಾಕೆ ಕೊಟ್ಟಿಲ್ಲ. ಹಿಮಾಚಲ ಪ್ರದೇಶದಲ್ಲಿ ಅಧಿಕಾರಿಕ್ಕೆ ಬಂದ ನಂತರ ಇವರು ಮಾಡಿದ ಕೆಲಸ ಪೆಟ್ರೋಲ್ ಗೆ 04 ರೂ, ಡಿಸೇಲ್ 03 ರೂ ಹೆಚ್ಚಳ ಮಾಡಿದೆ, ನಾವು ಹೇಳದೆ ರೈತರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನವರು ಮಾಡಿದ್ದು ಕೊಲೆಭಾಗ್ಯ. ಇವರು ಅಧಿಕಾರಕ್ಕೆ ಬಂದ್ರೆ ತುಕಡೇ ಗ್ಯಾಂಗ್ ಹೊರಗೆ ಬರುತ್ತೆ. ಅವರೆಲ್ಲ ಕುಣಿಯೋಕೆ ಶುರು ಮಾಡುತ್ತಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಕುಕ್ಕರ್ ಬಾಂಬ್ ಬ್ರದರ್ಸ ಅವರೆಲ್ಲ ಎದ್ದು ಕುಳಿತು ಕೊಳ್ಳುತ್ತಾರೆ. ನಾನು ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದಿನಿ ನಾವು ಯೋಗಿಜಿ ಮಾದರಿ ತರಬೇಕು. ಎಲ್ಲಾ ಕಡೆ ಅಲ್ಲದಿದ್ದರು ಬಾಲ ಬಿಚ್ಚೊ ಕಡೆ ಒಂದು ಬುಲ್ಡೋಜರ್ ತರೋನ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ಶಾಲಾ ಮಕ್ಕಳ ಮನಸ್ಸಲ್ಲಿ ಜಾತಿ ಬೀಜ ಬಿತ್ತಿದ್ದು ಸಿದ್ದರಾಮಯ್ಯ ಸರ್ಕಾರ. ಕುಂಕುಮ ಕೇಸರಿ, ಜಿಲೆಬಿ, ಅಲರ್ಜಿ ಇದ್ದಂತ ಡ್ಯಾಶ್ ಡ್ಯಾಶ್ ಖಾನ್ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಅವರು, ಶಾದಿಭಾಗ್ಯ ತಂದಿದ್ದು ಜಾತಿ ವಿಷಬೀಜ ಬಿತ್ತಿದವರು ನೀವು, ಮತಾಂದ ಟಿಪ್ಪು ಜಯಂತಿಗೆ ಮುಂದಾದವರು ನೀವು, ಒಡೆದಾಳುವ ನೀತಿ ಅನುಸರಿಸಿದ್ದಿರಿ. ನಾವು ಅನುಭವ ಮಂಟಪ ಅಭಿವೃದ್ಧಿಗೆ ಕೈಹಾಕಿದ್ದೆವೆ ಎಂದು ಹೇಳಿದರು.
ಈ ಚುನಾವಣೆ ನಡೆದ್ರೆ ಬಸವಣ್ಣನವರ ಹಾಗೂ ಟಿಪ್ಪುವಿನ ವಿಚಾರದ ಮೇಲೆ ಚುನಾವಣೆ ನಡೆಯತ್ತೆ. ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ನಡೆಯತ್ತೆ, ನಿಮ್ಮದು ತುಕಡೆ ಗ್ಯಾಂಗ್ ನೇತೃತ್ವದಲ್ಲಿ. ಇವತ್ತಿಂದ ಚುನಾವಣೆ ಮುಗಿಯುವವರೆಗೂ ಕೂಡುವ ಲೆಕ್ಕ ಮಾಡಬೇಕು. ಎಣ್ಣೆ ಹಾಕೊಂಡು ಕೆಲಸ ಮಾಡಬೇಕು, ಎಣ್ಣೆ ಹಾಕೋದು ಅಂದ್ರೆ ಹೊಟ್ಟೆಗೆ ಅಲ್ಲ, ಕಣ್ಣಿಗೆ ಎಣ್ಣೆ ಹಾಕೊಂಡು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.












Click it and Unblock the Notifications