ಸುಮಲತಾ ಅಂಬರೀಶ್ ಚಾಲೆಂಜ್ ಸ್ವೀಕರಿಸಲು ಸಿದ್ಧ : ರೇವಣ್ಣ

Recommended Video

      Lok Sabha Elections 2019 : ಸುಮಲತಾ ಅಂಬರೀಶ್ ಚಾಲೆಂಜ್ ಸ್ವೀಕರಿಸಲು ಸಿದ್ಧ : ರೇವಣ್ಣ | Oneindia kannada

      ಬೆಂಗಳೂರು, ಮಾರ್ಚ್ 08 : ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ಮುಂದುವರೆಸಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಇಂದು ಸುಮಲತಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

      ಶುಕ್ರವಾರ ದೆಹಲಿಯಲ್ಲಿ ಮಾತನಾಡಿದ ರೇವಣ್ಣ ಅವರು, 'ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲಾ ಬೇಕಿತ್ತಾ?' ಎಂದು ಪ್ರಶ್ನೆ ಮಾಡಿದರು.

      ಗುರುವಾರ ಮದ್ದೂರಿನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸುಮಲತಾ ಅಂಬರೀಶ್ ವಿರುದ್ಧ ಟೀಕೆ ಮಾಡಿದ್ದರು. ಮಂಡ್ಯದಿಂದ ಚುನಾವಣೆಗೆ ಸುಮಲತಾ ಅವರು ಸ್ಪರ್ಧೆ ಮಾಡುವುದನ್ನು ಗುರಿ ಮಾಡಿಕೊಂಡು ಅವರ ವಿರುದ್ಧ ಟೀಕೆ ಮಾಡಲಾಗುತ್ತಿದೆ.

      ಮಂಡ್ಯದಿಂದ ಸುಮಲತಾ ಅಂಬರೀಶ್ ಅವರು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

      ರೇವಣ್ಣ ಹೇಳಿದ್ದೇನು?

      ರೇವಣ್ಣ ಹೇಳಿದ್ದೇನು?

      'ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಿಕೊಟ್ಟರು. ಆದರೆ, ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಅವರು ಚಾಲೆಂಜ್ ಮಾಡುತ್ತಿದ್ದಾರೆ. ಅದನ್ನು ಸ್ವೀಕರಿಸಲು ನಾವು ಸಿದ್ಧರಾಗಿದ್ದೇವೆ' ಎಂದು ರೇವಣ್ಣ ಹೇಳಿದರು.

      ಸುಮಲತಾ ಅಂಬರೀಶ್

      ಸುಮಲತಾ ಅಂಬರೀಶ್

      ಎಚ್.ಡಿ.ರೇವಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಶ್ ಅವರು, 'ಈ ರೀತಿಯ ಟೀಕೆಗಳು ರಾಜಕಾರಣದಿಂದ ಹೊರತಾಗಿಲ್ಲ. ಕೆಲವರು ವೈಯಕ್ತಿಕ ವಿಚಾರಗಳನ್ನೇ ಬಳಸಿಕೊಂಡು ವಾಗ್ದಾಳಿ ನಡೆಸುತ್ತಾರೆ' ಎಂದು ಹೇಳಿದರು.

      ನಮ್ಮ ಸಂಸ್ಕಾರವಲ್ಲ

      ನಮ್ಮ ಸಂಸ್ಕಾರವಲ್ಲ

      'ನಾನು ಈ ಹೇಳಿಕೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಅದು ನಮ್ಮ ಸಂಸ್ಕಾರವೂ ಅಲ್ಲ. ಅಂಬರೀಶ್ ಅವರು 25 ವರ್ಷ ರಾಜಕೀಯದಲ್ಲಿ ಇದ್ದರೂ ಯಾರೊಬ್ಬರ ವಿರುದ್ಧವೂ ಟೀಕೆ ಮಾಡಲಿಲ್ಲ' ಎಂದು ಸುಮಲತಾ ಅಂಬರೀಶ್ ಹೇಳಿದರು.

      ಪಕ್ಷದಿಂದ ಮೆಚ್ಚುಗೆ ಬೇಕಾಗಿತ್ತು

      ಪಕ್ಷದಿಂದ ಮೆಚ್ಚುಗೆ ಬೇಕಾಗಿತ್ತು

      ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್ ಅವರು, 'ಡಿ.ಸಿ.ತಮ್ಮಣ್ಣ ಅವರಿಗೆ ಪಕ್ಷದಿಂದ ಮೆಚ್ಚುಗೆ ಬೇಕಿತ್ತು. ಹೀಗಾಗಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಾನು ಬೇಜಾರು ಮಾಡಿಕೊಳ್ಳಲ್ಲ' ಎಂದು ತಿರುಗೇಟು ಕೊಟ್ಟರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+