ಮುಂದಿನ ಐದು ವರ್ಷಕ್ಕೆ ಕುಮಾರಸ್ವಾಮಿಯೇ ಸಿಎಂ: ಸಿದ್ದರು
Recommended Video

ಚನ್ನರಾಯಪಟ್ಟಣ, ಜುಲೈ 08: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕಾಲ ಸನ್ನಿಹಿತವಾಗಿದೆ. ಈ ವರ್ಷಾಂತ್ಯದೊಳಗೆ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದು ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿಗಳು ಭವಿಷ್ಯ ನುಡಿದ ಬೆನ್ನಲ್ಲೆ ಇದಕ್ಕೆ ವಿರುದ್ಧವಾಗಿ ಸುಡುಗಾಡು ಸಿದ್ಧರು ಭವಿಷ್ಯ ಹೇಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಕುರ್ಚಿಯನ್ನು ಯಾರು ಅಲುಗಾಡಿಸಲು ಆಗಲ್ಲ. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಿದ್ದರಟ್ಟಿ ಸುಡುಗಾಡು ಸಿದ್ಧರು ಭವಿಷ್ಯ ನುಡಿದಿದ್ದಾರೆ. ರಂಭಾಪುರಿಶ್ರೀಗಳ ಹೇಳಿಕೆ ಸುಳ್ಳಾಗಲಿದೆ. ನಮ್ಮ ನುಡಿಯಲ್ಲಿ ಬದಲಾದರೆ ನಮ್ಮ ಗ್ರಾಮದ ಸಿದ್ದರೆಲ್ಲರೂ ತಮ್ಮ ಕಾಯಕವನ್ನು ತೊರೆಯಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸಿದ್ದರ ಹಟ್ಟಿ ಗ್ರಾಮದಲ್ಲಿರುವ ಸಿದ್ದರು, ಈ ಮುಂಚೆ ಭವಿಷ್ಯ ನುಡಿದು, ಏಪ್ರಿಲ್ ತಿಂಗಳಿನಲ್ಲಿ ಕುಮಾರಸ್ವಾಮಿ ಅವರು ಮಖ್ಯಮಂತ್ರಿಯಾಗುತ್ತಾರೆ ಎಂದಿದ್ದರು. ಈಗ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅನೇಕ ತೊಡರುಗಳು ಬಂದರೂ, ಅವರ ಸಿಎಂ ಸ್ಥಾನ ಉಳಿಯಲಿದೆ ಎಂದಿದ್ದಾರೆ.












Click it and Unblock the Notifications