ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯ ಇಳಿಸಲು ಡಿಕೆಶಿ ಸ್ಟಿಂಗ್‌ ಆಪರೇಶನ್‌ : ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಡೆಸಿದ 'ಸ್ಟಿಂಗ್ ಆಪರೇಷನ್'ನಿಂದಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜು ಅವರಿಗಿಂತ ಹೆಚ್ಚಿನ ಅವಧಿಗೆ ರಾಜ್ಯವನ್ನು ಆಳಿದವರು. ಅಹಿಂದಾ ವರ್ಗಕ್ಕೆ ದೊಡ್ಡ ನಾಯಕರು. ಅವರ ಮೇಲಿನ ಪ್ರೀತಿಗೆ ಅಭಿಮಾನಿಗಳು ಅವರ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅಂತಹ ವ್ಯಕ್ತಿ ಡಿಕೆಶಿ ಸ್ಟಿಂಗ್ ಆಪರೇಷನ್ ಗೆ ಬಲಿಯಾದರು ಎಂದು ಆರೋಪಿಸಿದರು.

HD Kumaraswamy Siddaramaiah Removed as Chief Minister Through Sting Operation by CM DK Shivakumar

ಸ್ಟಿಂಗ್ ಆಪರೇಷನ್ ನಿಂದಾಗಿ ಸಿದ್ದು ರಾಜೀನಾಮೆ

ಡಿಕೆಶಿ ಮಾಡಿದ ಸ್ಟಿಂಗ್ ಆಪರೇಷನ್ ನಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಅಪಮಾನಕಾರಿಯಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿತು. ಡಿಕೆಶಿ ಜತೆ ಒಂದು ಸುದ್ದಿವಾಹಿನಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾದ ಪರಿಣಾಮ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿತು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದಾರೆ ಎಂದು ನಂಬಿ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವಿಷಯ ತಿಳಿಸಿ ರಾಜೀನಾಮೆ ಪಡೆದುಕೊಳ್ಳಲಾಯಿತು ಎಂದು ಕುಮಾರಸ್ವಾಮಿ ಅವರು ದೂರಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಯಿತು ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಅವರ ರಾಜಿನಾಮೆ ಪಡೆದ ರೀತಿ ಸರಿಯಲ್ಲ. ಅಂತಹ ಹಿರಿಯ ನಾಯಕನನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೆಲ್ಲವನ್ನೂ ಯಾರು ಮಾಡಿದ್ದಾರೆ? ಇದರ ಹಿಂದೆ ಯಾರು ಯಾರು ಇದ್ದಾರೆ? ಯಾವ ಮಾಧ್ಯಮ ಸಂಸ್ಥೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ?

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನನ್ನೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರಿಗೆ ಈಗ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದ ಸಚಿವರು; ಸ್ಟಿಂಗ್ ಮಾಡಿರುವುದು ಅವರು, ರಮೇಶ್ ಜಾರಕಿಹೊಳಿ, ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ? ಇಂತಹ ವಿಷಯದಲ್ಲಿ ಅವರು ದೊಡ್ಡ ಅನುಭವಸ್ತರು. ಅವರೇ ಎಲ್ಲವನ್ನೂ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದ ವ್ಯಕ್ತಿಯೇ ನಮ್ಮ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಆರೋಪಿಸಿದರು.

ದೇವೇಗೌಡರ ಕುಟುಂಬ ಮುಗಿಸಲು ಸಂಚು

ಸ್ಟಿಂಗ್ ಮಾಡುವುದರಲ್ಲಿ ಅವರು ನಿಪುಣರು (ಮಾಸ್ಟರ್). ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರು ಎಲ್ಲಾ ಸಚಿವರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದರು. ದೇವೇಗೌಡರ ಕುಟುಂಬವನ್ನು ಮುಗಿಸಲು ಮುಖ್ಯಮಂತ್ರಿ ಇಂಥದ್ದೇ ಸಂಚು ರೂಪಿಸಿದ್ದರು. 'ತಡಿಯಪ್ಪಾ ಒಬ್ಬರನ್ನು ಕರೆಸಿ ಮಾಡೋಷ್ಟೊತ್ಟಿಗೆ ಸಾಕಾಗಿದೆ' ಎಂದು ಹೇಳಿದವರು ಯಾರಪ್ಪಾ? ಈಗ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಈ ಮುಖ್ಯಮಂತ್ರಿ ಅದೇ ಕುತಂತ ಬಳಸುತ್ತಿದ್ದಾರೆ ಎಂದು ದೂರಿದರು.

ಹಿಂದೆ ಸಂಪುಟ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಡಿಕೆಶಿ ಕಾಲದಲ್ಲಿ ಹನಿಟ್ರಾಪ್, ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಆಗುತ್ತಿದೆ. ಇದು ಈ ರಾಜ್ಯಕ್ಕೆ ಬಂದು ಒದಗಿಸಿರುವ ದುಸ್ಥಿತಿ ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಅಂತೂ ಇಂತೂ ಮುಖ್ಯಮಂತ್ರಿ ಆಗಿರುವ ಈ ವ್ಯಕ್ತಿ ಜನರ ಕೆಲಸ ಮಾಡುತ್ತಿಲ್ಲ. ಬದಲಿಗೆ ಬೆಳಗ್ಗೆಯಿಂದ ಸಂಜೆವರೆಗೂ ಸ್ಟಿಂಗ್ ಆಪರೇಷನ್ ಮಾಡಿಕೊಂಡು ಕೂತಿರುತ್ತಾರೆ. ಅವರ ಪಕ್ಷದ ಶಾಸಕರೇ ಬಂದು ಹೇಳುತ್ತಾರೆ ನನಗೆ. ಈಗ ಅದೇ ವಿಷಯ ಮೀಡಿಯಾದಲ್ಲಿ ಬರುತ್ತಿದೆ. ಒಂದು ವೇಳೆ ನಾನು ಸ್ಟಿಂಗ್ ಮಾಡಿದರೆ ಕ್ರಮ ಕೈಗೊಳ್ಳಲಿ. ಇವರ ಬಳಿ ಎಸ್ ಐಟಿ ಇದೆಯಲ್ಲವೇ? ಅದಕ್ಕೆ ₹35 ಲಕ್ಷ ಬಹುಮಾನ ಬೇರೆ ಕೊಟ್ಟಿದ್ದಾರೆ! ತನಿಖೆ ಮಾಡಿಸಲಿ. ಬೇಡ ಅಂದವರು ಯಾರು? ವಿಧಾನಸಭೆಯಲ್ಲಿ ರಾಜಣ್ಣ ಏನು ಹೇಳಿದ್ದರು. ನನ್ನದಷ್ಟೇ ಅಲ್ಲ, ಇನ್ನೂ ನಲವತ್ತು ಜನರ ಸ್ಟಿಂಗ್ ಮಾಡಿಸಿದ್ದಾರೆ ಎಂದು ಹೇಳಿರಲ್ಲವೇ? ಅವರ ಹೇಳಿಕೆ ಏನಾಯಿತು? ನಂತರ ಅವರ ಬಾಯಿ ಮುಚ್ಚಿಸಿದರು ಎಂದು ಸಚಿವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ಸ್ನೇಹಿತರೇ ನನಗೆ ಡಿಕೆಶಿ ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಆಗಿದ್ದಾರೆ ‌ಎಂದು ನನಗೆ ಹೇಳಿದ್ದಾರೆ. ಹಿಂದೆಯೂ ಕೆಲವು ಸಚಿವರು ಸ್ಟೇ ತೆಗೆದುಕೊಂಡರು. ಆ ರೀತಿ ಕೋರ್ಟಿನಿಂದ ಸ್ಟೇ ತೆಗೆದುಕೊಂಡಿರುವ ವೃತ್ತಿ ಅಯೋಧ್ಯೆ, ನೇಪಾಳ ಮತ್ತು ಕೆನಡಾಗೆ ಹೋಗಿ ಏನೋ ಷಡ್ಯಂತ್ರ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+