ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!
ಬೆಂಗಳೂರು, ಮಾರ್ಚ್ 26: 2019 ರ ಲೋಕಸಭೆ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟು ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳಿವೆ. ಬಿಜೆಪಿ ಹೈಕಮಾಂಡ್ ಇದೀಗ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ಬಹುತೇಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ.
ಹೌದು, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಚನ್ನಪಟ್ಟಣದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಂಡ್ಯದಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಚನ್ನಪಟ್ಟಣದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಂಡ್ಯದಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಸಂಜೆ ಒಳಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಮೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಸಂಜೆ ಘೋಷಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ತಲೆಕೊಡಲು ಸಿದ್ಧ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.
ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನ ವ್ಯಕ್ತಪಡಿಸಿದ್ದಾರೆ, ನಾವು ಇವತ್ತು ನೆಲಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿನ ಲೋಪದೋಷಗಳಿವೆ, ಸರಿಪಡಿಸಿಕೊಳ್ಳುತ್ತೇವೆ, ನನ್ನ ಪಕ್ಷದ ಭವಿಷ್ಯ, ಪಕ್ಷದ ಹೃದಯ ಭಾಗ ಮಂಡ್ಯದ ಜನರ ಅಪೇಕ್ಷೆಯಂತೆ ಪಕ್ಷ ಗಟ್ಟಿಗೊಳಿಸಲು ಈ ತೀರ್ಮಾನ. ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ಬಳಿಕ ತಮ್ಮ ಸ್ಪರ್ಧೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷದ ಉಳಿವಿವಾಗಿ ತಲೆ ಕೊಡುತ್ತಿದ್ದೇನೆ. ರಾಮನಗರ, ಚನ್ನಪಟ್ಟಣ ಜನತೆ ಅನ್ಯಾತಾ ಭಾವಿಸಬೇಡಿ, 28 ಕ್ಕೆಯಿಂದ ಗೆಲ್ಲಸಬೇಕು ಎಂಬವುದು ನಮ್ಮ ಗುರಿ ಆಗಿದೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತಿರ್ಮಾನಕ್ಕೆ ಗೌರವ ಕೊಡಬೇಕು ನಮ್ಮ ಕರ್ತವ್ಯ. ನಿಖಿಲ ಕುಮಾರಸ್ವಾಮಿ ಹೇಳಿದ್ರು ನಾನು ಈಗಾಗಲೇ ನೋವು ಪಟ್ಟಿದ್ದೇನೆ. ಪುಟ್ಟರಾಜ ಅವರನ್ನ,ನೀಖಿಲ್ ಕುಮಾರಸ್ವಾಮಿ ಅವರನ್ನ ಸ್ಫರ್ಧೆ ಮಾಡಸಬೇಕು ಎಂಬುದು ನಮ್ಮಗೂ ಇತ್ತು. ಅದಕ್ಕೆ ಅವರು ಸ್ಪರ್ಧೆ ಸಾದ್ಯವಿಲ್ಲ ಎಂದು ಕಠಿಣ ನಿರ್ಣಯ ಮಾಡಿಕೊಂಡಿದ್ದಾರೆ. ಆ ಜಿಲ್ಲೆಯ ಜನರ ಋಣವನ್ನು ತಿರಿಸಿಬೇಕು.
ಇಡೀ ನಾಡೇ ನನ್ನ ಕರ್ಮ ಭೂಮಿ. ರಾಮನಗರ ಬಿಟ್ಟು ನಾನು ಹೋಗುವುದಿಲ್ಲ, ಈ ಪಕ್ಷದ ಉಳಿವಿಗಾಗಿ ಒಂದು ತಿರ್ಮಾನ ಕೈಗೊಳ್ಳಬೇಕಾಗಿದೆ. ಮಂಡ್ಯದಲ್ಲಿ ನಿಖಲ್ ಸ್ಪರ್ಧೆ ಮಾಡುವುದಕ್ಕೆ ಆಗುತ್ತಿಲ್ಲ. ಮಂಡ್ಯಯ ಅಭಿವೃದ್ಧಿ ಆಗಬೇಕು ಈ ಹಿನ್ನೆಲೆಯಲ್ಲಿ ನಾನೇ ತಲೆ ಕೊಡ್ತಿನಿ ಎಂದು ಪರೋಕ್ಷವಾಗಿ ಮಂಡ್ಯದಲ್ಲಿ ನಾನೇ ಸ್ಪರ್ಧೆ ಮಾಡ್ತಿನಿ ಎಂದು ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದರು.
ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ ಅವರು. ನನ್ನ ಅಷ್ಟು ಸುಲಭವಾಗಿ ರಾಮನಗರ ಜಿಲ್ಲೆಯಿಂದ ಓಡಿಸಲು ಆಗುವುದಿಲ್ಲ. ನಾನು ಭೂಮಿಗೆ ಹೋಗುವವರೆಗೂ ನನ್ನ ಹೃದಯಲ್ಲಿ ರಾಮನಗರ ಇರುತ್ತದೆ. ಮಂಡ್ಯ , ಜೆಡಿಎಸ್ ನ ಹೃದಯ ಭಾಗ ಆಗಿದೆ. ಮಂಡ್ಯಕ್ಕೆ ಬರಬೇಕು ಅಂತ ಜನರು ಒತ್ತಾಯ ಮಾಡುತ್ತಿದ್ದಾರೆ. ಕಳೆದ ಭಾರಿ ಮಂಡ್ಯ ಸೋಲು ನನ್ನ ಪ್ರಕಾರ ಸೋಲು ಅಲ್ಲ, ಅಂಕಿಅಂಶಗಳಲ್ಲಿ ಸೋಲು ಆಗಿರಬಹುದು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮುಗಿಸಿದ್ದೀನಿ ಅಂತ ಕೆಲವು ಹೇಳುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications