ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಡಿ.ಕುಮಾರಸ್ವಾಮಿ ಸಂಪುಟ, ಜಿಲ್ಲಾ ಮತ್ತು ಜಾತಿ ಪ್ರಾತಿನಿಧ್ಯ

|
Google Oneindia Kannada News

Recommended Video

ಸಂಪುಟ ವಿಸ್ತರಣೆಯಲ್ಲಿ ಎಡವಿದ ಕುಮಾರಣ್ಣ..! | Oneindia Kannada

ಬೆಂಗಳೂರು, ಡಿಸೆಂಬರ್ 24 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆ ಮತ್ತು ಜಾತಿ ಪ್ರಾತಿನಿಧ್ಯದಲ್ಲಿ ಸಮತೋಲ ಕಾಯ್ದುಕೊಳ್ಳಲು ಸರ್ಕಾರ ವಿಫಲವಾಗಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 11 ಜಿಲ್ಲೆಗಳಲ್ಲಿ ಯಾವುದೇ ಸಚಿವರು ಇಲ್ಲ. ಕೆಲವು ಜಿಲ್ಲೆಗಳಿಗೆ 3, ಕೆಲವು ಜಿಲ್ಲೆಗಳಿಗೆ 2 ಸಚಿವ ಸ್ಥಾನಗಳು ಸಿಕ್ಕಿವೆ. ಹಾಗೆಯೇ ಸಂಪುಟದಲ್ಲಿ ಏಕೈಕ ಮಹಿಳೆಗೆ ಅವಕಾಶ ನೀಡಲಾಗಿದೆ.

ಎಂಬಿ ಪಾಟೀಲ್ ಸೇರಿ 8 ಮಂದಿ ಸಚಿವರ ಕಿರು ಪರಿಚಯಎಂಬಿ ಪಾಟೀಲ್ ಸೇರಿ 8 ಮಂದಿ ಸಚಿವರ ಕಿರು ಪರಿಚಯ

ಸಚಿವ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 8 ಮಂದಿ ಸಚಿವರಿದ್ದಾರೆ. ಲಿಂಗಾಯತ ಮತ್ತು ಪರಿಶಿಷ್ಟ ಜಾತಿಯ ತಲಾ 5 ಸಚಿವರು ಸಂಪುಟದಲ್ಲಿದ್ದಾರೆ. ಕುರುಬ ಸಮುದಾಯದ ನಾಲ್ವರು ಸಚಿವರಾಗಿದ್ದಾರೆ.

ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನ ಎಂಟು ಹೊಸ ಸಚಿವರು ಸೇರ್ಪಡೆಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನ ಎಂಟು ಹೊಸ ಸಚಿವರು ಸೇರ್ಪಡೆ

ಇದೇ ಮೊದಲ ಬಾರಿಗೆ ಲಿಂಗಾಯತ ಸಮುದಾಯದಕ್ಕೆ ಸಂಪುಟದಲ್ಲಿ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ರಾಜ್ಯದ ಪ್ರಭಾವಿ ಸಮುದಾಯವಾದ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ

ಯಾವ ಜಿಲ್ಲೆಯವರು ಸಚಿವರು

ಯಾವ ಜಿಲ್ಲೆಯವರು ಸಚಿವರು

* ಬೆಳಗಾವಿ - ಸತೀಶ್ ಜಾರಕಿಹೊಳಿ
* ಬಾಗಲಕೋಟೆ - ಆರ್.ಬಿ.ತಿಮ್ಮಾಪುರ
* ವಿಜಯಪುರ - ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಎಂ.ಸಿ.ಮನಗೂಳಿ
* ಕಬುರಗಿ - ಪ್ರಿಯಾಂಕ ಖರ್ಗೆ

ಸಚಿವರ ಪಟ್ಟಿ

ಸಚಿವರ ಪಟ್ಟಿ

* ಬೀದರ್ - ಬಂಡೆಪ್ಪ ಕಾಶೆಂಪೂರ, ರಾಜಶೇಖರ್ ಪಾಟೀಲ್, ರಹೀಂಖಾನ್
* ರಾಯಚೂರು - ವೆಂಕಟರಾವ್ ನಾಡಗೌಡ
* ಧಾರವಾಡ - ಸಿ.ಎಸ್.ಶಿವಳ್ಳಿ
* ಉತ್ತರ ಕರ್ನಾಟಕ - ಆರ್.ವಿ.ದೇಶಪಾಂಡೆ

ಯಾವ ಜಿಲ್ಲೆಗೆ ಸಚಿವ ಸ್ಥಾನ

ಯಾವ ಜಿಲ್ಲೆಗೆ ಸಚಿವ ಸ್ಥಾನ

* ಬಳ್ಳಾರಿ - ಇ.ತುಕಾರಾಂ, ಪಿ.ಟಿ.ಪರಮೇಶ್ವರ ನಾಯ್ಕ್
* ತುಮಕೂರು - ಡಾ.ಜಿ.ಪರಮೇಶ್ವರ, ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್
* ಚಿಕ್ಕಬಳ್ಳಾಪುರ - ಜಿ.ಎಚ್.ಶಿವಶಂಕರ ರೆಡ್ಡಿ
* ಬೆಂಗಳೂರು - ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್

ಮೈತ್ರಿ ಸರ್ಕಾರದ ಸಚಿವರ ಪಟ್ಟಿ

ಮೈತ್ರಿ ಸರ್ಕಾರದ ಸಚಿವರ ಪಟ್ಟಿ

* ಬೆಂಗಳೂರು ಗ್ರಾಮಾಂತರ - ಎಂ.ಟಿ.ಬಿ.ನಾಗರಾಜ್
* ರಾಮನಗರ - ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್
* ದಕ್ಷಿಣ ಕನ್ನಡ - ಯು.ಟಿ.ಖಾದರ್
* ಮೈಸೂರು - ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್
* ಚಾಮರಾಜನಗರ - ಪುಟ್ಟರಂಗ ಶೆಟ್ಟಿ
* ಹಾಸನ - ಎಚ್.ಡಿ.ರೇವಣ್ಣ
* ಮಂಡ್ಯ - ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು

ಸಚಿವರು ಇಲ್ಲದ ಜಿಲ್ಲೆಗಳು

ಸಚಿವರು ಇಲ್ಲದ ಜಿಲ್ಲೆಗಳು

ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಡಗು, ಉಡುಪಿ, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಥವ ಜೆಡಿಎಸ್‌ನಿಂದ ಯಾವುದೇ ಸಚಿವರು ಇಲ್ಲ.

English summary
Karnataka Chief Minister H.D.Kumaraswamy expended his cabinet. Here are the list of the ministers district wise minister list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X