ಕುಮಾರಸ್ವಾಮಿಗಿಂತ ಮಗನೇ ಶ್ರೀಮಂತ: ದುಬಾರಿ ಕಾರು ಮಾಲೀಕ ನಿಖಿಲ್‌ ಒಟ್ಟು ಆಸ್ತಿ ಎಷ್ಟು?

ಬೆಂಗಳೂರು, ಏಪ್ರಿಲ್‌ 18: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸೋಮವಾರ( ಏಪ್ರಿಲ್‌ 17)ರಂದು ನಾಮಪತ್ರ ಸಲ್ಲಿಸಿದ್ದಾರೆ. ಸಾವಿರಾರು ಕಾರ್ಯಕರ್ತರ ಜೊತೆ ಚನ್ನಪಟ್ಟಣದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಎಚ್‌ಡಿ ಕುಮಾರಸ್ವಾಮಿ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರ ಪುತ್ರ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ಮೌಲ್ಯ 46.57 ಕೋಟಿ ರೂಪಾಯಿ. ಕುಮಾರಸ್ವಾಮಿ ಪತ್ನಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ಮೌಲ್ಯ 124.72 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ.

HD Kumaraswamy And Nikhil Kumaraswamy Asset Details

ಎಚ್‌ಡಿ ಕುಮಾರಸ್ವಾಮಿ ಒಟ್ಟು ಸಾಲ 17. 36 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಕುಮಾರಸ್ವಾಮಿ ಒಂದು ಟ್ರ್ಯಾಕ್ಟರ್‌, ಹಾಗೂ ಅದರ ಉಪಕರಣಗಳು, ಪತ್ನಿ ಅನಿತಾ ಕುಮಾರಸ್ವಾಮಿ ಕಂಪನಿ ಹೆಸರಿನಲ್ಲಿ 8 ಮಾರುತಿ ಇಕೋ ಕಾರುಗಳು, ಒಂದು ಇನೋವಾ ಕ್ರಿಸ್ಟಾ ಕಾರು ಇದೆ. ಇನ್ನು ಕುಮಾರಸ್ವಾಮಿ ಬಳಿಕ 750 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ, ವಜ್ರ ಇದೆ. ಪತ್ನಿ ಅನಿತಾ ಕುಮಾರಸ್ವಾಮಿ ಬಳಿಕ 3.8 ಕೆ.ಜಿ ಚಿನ್ನ, 17 ಕೆ.ಜಿ ಬೆಳ್ಳಿ, 50 ಕ್ಯಾರೇಟ್‌ ವಜ್ರ ಇದೆ ಎಂದು ತಮ್ಮ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಒಟ್ಟು ಆಸ್ತಿ ಎಷ್ಟು?

ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಅಫಿಡವಿಟ್​​ನಲ್ಲಿ ತಮ್ಮ ಒಟ್ಟು ಆಸ್ತಿ ಬಗ್ಗೆ ಉಲ್ಲೇಖಿಸಿದ್ದಾರೆ. 77 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ನಿಖಿಲ್ ಕುಮಾರಸ್ವಾಮಿ ಮೇಲೆ 38.94 ಕೋಟಿ ರೂ ಸಾಲದ ಹೊರೆ ಇದೆ.

HD Kumaraswamy And Nikhil Kumaraswamy Asset Details

ನಿಖಿಲ್ ಕುಮಾರಸ್ವಾಮಿ ಬಳಿ 46.81 ಕೋಟಿ ರೂ. ಮೌಲ್ಯದ ಚರಾಸ್ತಿ ಇದ್ದು, ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ವಾರ್ಷಿಕ 4.27 ಕೋಟಿ ರೂ. ಆದಾಯ ಗಳಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಬಳಿ 2.16 ಕೋಟಿ ರೂ. ಮೊತ್ತದ ರೇಂಜ್‌ ರೋವರ್, 2.9 ಕೋಟಿ ರೂ. ಮೊತ್ತದ ಲ್ಯಾಂಬೊರ್ಗಿನಿ ಸೇರಿದಂತೆ ಐದು ಕಾರುಗಳಿವೆ. ಇನ್ನು ನಿಖಿಲ್ ಕುಮಾರಸ್ವಾಮಿ ಬಳಿ 1.01 ಲಕ್ಷ ರೂ. ನಗದು ಹಾಗೂ ಪತ್ನಿ ಬಳಿ 3.53 ಲಕ್ಷ ರೂ. ನಗದು ಇದೆ ಎಂದು ತಿಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಬಳಿ 64.45 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಹಾಗೂ 16 ಕೆಜಿ ತೂಕದ 11.08 ಲಕ್ಷ ರೂ. ಮೌಲ್ಯದ ಬೆಳ್ಳಿ ಇದೆ. ಪತ್ನಿ ರೇವತಿ ಬಳಿ ಬಳಿ 36.35 ಲಕ್ಷ ರೂ. ಮೌಲ್ಯದ 641 ಗ್ರಾಂ ಚಿನ್ನ, 12.59 ಕ್ಯಾರೆಟ್‌ನಷ್ಟು ವಜ್ರ ಹಾಗೂ 23.20 ಲಕ್ಷ ರೂ. ಮೌಲ್ಯದ 33.5 ಕೆಜಿ ಬೆಳ್ಳಿ ಇದೆ ಎಂದು ಅಫಿಡವಿಟ್​​ನಲ್ಲಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+