ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಜೊತೆ 6 ತಾಸು ಗೌಡರ ದುಂಡು ಮೇಜಿನ ಸಭೆ!

ಬೆಂಗಳೂರು, ಅಕ್ಟೋಬರ್ 21; ಕರ್ನಾಟಕ ಜೆಡಿಎಸ್ ಮೈಸೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗರ ಮುಕ್ತಾಯಗೊಂಡಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ಅಭ್ಯರ್ಥಿಗಳ ಜೊತೆ ಪಕ್ಷದ ಪರಿಷ್ಠ ಎಚ್. ಡಿ. ದೇವೇಗೌಡ ದುಂಡು ಮೇಜಿನ ಸಭೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಮೈಸೂರಿನಲ್ಲಿ ಗುರುವಾರ ಮುಕ್ತಾಯವಾದ ಜೆಡಿಎಸ್ ಸಂಘಟನಾ ಸಮಾಲೋಚನಾ ಸಭೆ ಮತ್ತು ಪಂಚರತ್ನ ರಥಯಾತ್ರೆ ಕಾರ್ಯಾಗಾರದ ಕೊನೆಯಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾವಾರು ಅಭ್ಯರ್ಥಿಗಳ ದುಂಡು ಮೇಜಿನ ಸಭೆ ನಡೆಯಿತು ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿ. ಎಂ.ಇಬ್ರಾಹಿಂ, ಶಾಸಕಾಂಗ ಪಕ್ಷದ ಉಪ ನಾಯಕರಾದ ಶ್ರೀ ಬಂಡೆಪ್ಪ ಕಾಶೆಂಪೂರ್ ಅವರು ಸಭೆಯಲ್ಲಿದ್ದರು. ಪ್ರತಿ ಅಭ್ಯರ್ಥಿಯನ್ನು ನೇರವಾಗಿ ಮಾತನಾಡಿದ ಮಾಜಿ ಪ್ರಧಾನಿಗಳು, ಸೂಕ್ತ ಮಾರ್ಗದರ್ಶನ ನೀಡಿದರಲ್ಲದೆ, ಸತತ 6 ಗಂಟೆಗೂ ಹೆಚ್ಚು ಕಾಲ ಈ ಸಭೆಯಲ್ಲಿ ಉಪಸ್ಥಿತರಿದ್ದರು' ಎಂದು ತಿಳಿಸಿದ್ದಾರೆ.

HD Deve Gowda Round Table Meeting With JDS Ticket Aspirants

ದೇವೇಗೌಡರು ಭಾಗಿ; ಬುಧವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ರೆಸಾರ್ಟ್‌ನಲ್ಲಿ ಜೆಡಿಎಸ್ ಕಾರ್ಯಾಗಾರ ಆರಂಭವಾಗಿತ್ತು. ಗುರುವಾರ ಎಚ್. ಡಿ. ದೇವೇಗೌಡರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪಕ್ಷದ ಶಾಸಕರು, ಮುಂದಿನ ಟಿಕೆಟ್ ಆಕಾಂಕ್ಷಿಗಳಿಗಾಗಿಯೇ ಕಾರ್ಯಾಗಾರ ಆಯೋಜಿಸಲಾಗಿತ್ತು. ಆದ್ದರಿಂದ ಎಚ್. ಡಿ. ದೇವೇಗೌಡರು ಸುಮಾರು 6 ತಾಸು ಟಿಕೆಟ್ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಿ ಹಲವು ಸೂಚನೆಗಳನ್ನು ನೀಡಿದರು.

ಜಿಲ್ಲಾವಾರು ಟಿಕೆಟ್ ಆಕಾಂಕ್ಷಿಗಳ ಜೊತೆ ದುಂಡು ಮೇಜಿನ ಸಭೆ ನಡೆಸಿದರು. ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶ ಪಕ್ಷಕ್ಕಿದೆ. ಯಾವುದೇ ಕಾರಣಕ್ಕೂ ಗೊಂದಲ ಉಂಟಾಗಬಾರದು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ನಿರ್ದೇಶನ ಕೊಟ್ಟರು.

HD Deve Gowda Round Table Meeting With JDS Ticket Aspirants

ಬಿ-ಫಾರಂ ಪಡೆದುಕೊಳ್ಳಿ; ಸಭೆಯಲ್ಲಿ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ,"2023ರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಗೆಲ್ಲುವ ವಿಶ್ವಾಸವಿದ್ದರೆ ಮಾತ್ರ ಬಿ-ಫಾರಂ ಪಡೆದುಕೊಳ್ಳಿ. ನಮಗೆ ಫಲಿತಾಂಶ ಮುಖ್ಯ" ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಎಚ್. ಡಿ. ದೇವೇಗೌಡರು, "ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಮುಖ್ಯವಲ್ಲ. ಈ ಪಕ್ಷ ಉಳಿಯಬೇಕು ಎಂಬುದು ನನ್ನ ಆಶಯ. ನನ್ನ ಹೋರಾಟ ನಿಲ್ಲುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಬೇಕು ಎಂಬುದಷ್ಟೇ ಉದ್ದೇಶವಲ್ಲ. ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಕೆಲಸ ಮಾಡಿದರೆ ಅನುಕೂಲವಾಗುತ್ತದೆ" ಎಂದರು.

"ಎಲ್ಲರೂ ಹೋರಾಟದ ಸಂಕಲ್ಪ ಮಾಡಬೇಕು. ಪಕ್ಷಕ್ಕೆ ಶಕ್ತಿ ಇಲ್ಲ ಎಂಬ ಮನೋಭಾವನೆ ಅನೇಕರಲ್ಲಿದೆ. ಹಾಗೆ ಭಾವಿಸಬೇಡಿ, ನಾನು ನಿಮ್ಮ ಜೊತೆ ಇದ್ದೇನೆ. ಜೆಡಿಎಸ್ ಪಕ್ಷ ಮುಳುಗಿ ಹೋಯಿತು ಎನ್ನುವವರಿಗೆ ಹೇಗೆ ಉತ್ತರ ಕೊಡಬೇಕು ತಿಳಿದಿದೆ" ಎಂದು ದೇವೇಗೌಡರು ಹೇಳಿದರು.

ಅಭ್ಯರ್ಥಿಗಳ ಘೋಷಣೆ; ಗುರುವಾರ ಕಾರ್ಯಾಗಾರ ಮುಗಿದ ಬಳಿಕ ಶುಕ್ರವಾರ ಜೆಡಿಎಸ್ ಮೈಸೂರಿನ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಚ್. ಡಿ. ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡರ ಮನವೊಲಿಕೆ ಮಾಡಿ ಪಕ್ಷದಲ್ಲೇ ಉಳಿಯುವಂತೆ ಮಾಡಿದ್ದಾರೆ. ಅವರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಸಹ ನೀಡಲಾಗಿದೆ.

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ. ಟಿ. ದೇವೇಗೌಡ, ಹುಣಸೂರು ಕ್ಷೇತ್ರದಿಂದ ಜಿ. ಟಿ. ದೇವೇಗೌಡ ಪುತ್ರ ಹರೀಶ್ ಗೌಡ, ಕೆ. ಆರ್. ನಗರ ಕ್ಷೇತ್ರದಿಂದ ಹಾಲಿ ಶಾಸಕ ಸಾ. ರಾ. ಮಹೇಶ್, ಪಿರಿಯಾಪಟ್ಟಣದಿಂದ ಕೆ. ಮಹದೇವ್ ಕಣಕ್ಕಿಳಿಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+