ಸಹೋದರರ ಮುನಿಸಿಗೆ ಕಾರಣವಾಯ್ತಾ ಹಾಸನ ಟಿಕೆಟ್ ಫೈಟ್; ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟ ರೇವಣ್ಣ

ಹಾಸನ, ಮಾರ್ಚ್‌ 31: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂತ ಘೋಷಣೆಯಾಗಿದ್ದು, ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ರಣಕಣ ಜೋರಾಗಿದೆ. ಈಗಾಗಲೇ ದಳಪತಿಗಳು ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದು, ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರ ಟಿಕೆಟ್‌ ವಿಚಾರವೇ ಕಗ್ಗಂಟಾಗಿದೆ.

ದಳಪತಿಗಳಿಗೆ ಹಾಸನ ಅಭ್ಯರ್ಥಿಯ ಆಯ್ಕೆಯ ಕಗ್ಗಂಟು ತಾರಕ್ಕಕ್ಕೇರಿದೆ. ದಿನಕ್ಕೊಂದು ಬೆಳವಣಿಗೆಗಳ ಮಧ್ಯೆ ಇದೀಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಹಾಸನ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದು, ಟಿಕೆಟ್‌ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನೂ ಎಚ್‌ ಡಿ ಕುಮಾರಸ್ವಾಮಿಯನ್ನ ಸ್ವರೂಪ್‌ ಪ್ರಕಾಶ್‌ ಭೇಟಿಯಿಂದ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

Hassan Ticket Row : Assembly Ticket Confusion Continue In Hassan

ಈಗಾಗಲೇ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್‌ ನೀಡಬೇಕು ಎಂದು ಪಟ್ಟುಹಿಡಿದಿರುವ ಎಚ್‌.ಡಿ ರೇವಣ್ಣ ಅವರು ಚುನಾವಣಾ ದಿನಾಂಕ ಘೋಷಣೆಯ ಬೆನ್ನಲ್ಲೇ ಜೆಡಿಎಸ್ಸ ವರಿಷ್ಠರಾದ ಹೆಚ್‌ ಡಿ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲೂ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್‌ ನೀಡುವಾಗಿ ಕುಮಾರಸ್ವಾಮಿ ಹೇಳಿದ್ದು, ಈ ಸಭೆಯಲ್ಲೂ ಸಹ ಒಮ್ಮತದ ನಿರ್ಧಾರವನ್ನ ತೆಗೆದುಕೊಂಡಿಲ್ಲ ಎನ್ನಲಾಗಿದೆ.

ಇನ್ನೂ ಟಿಕೆಟ್‌ ವಿಚಾರವಾಗಿ ಎಚ್‌ ಡಿ.ಕುಮಾರಸ್ವಾಮಿ ಅವರನ್ನ ಸ್ವರೂಪ್‌ ಭೇಟಿ ಮಾಡಿದ ಕುರಿತು ಮಾಧ್ಯಮ ಪ್ರತಿನಿಧಿಗಳು ರೇವಣ್ಣ ಅವರನ್ನ ಪ್ರಶ್ನಿಸಿದ್ರೆ, ಸ್ವರೂಪ್‌ ಯಾರು? ನನಗೆ ಅವರು ಗೊತ್ತಿಲ್ಲಪ್ಪ. ಕುಮಾರಣ್ಣ ಹೇಳ್ತಾರೆ ನಾವೇನ್‌ ಮಾಡೋಕೆ ಆಗುತ್ತೆ , ಸಾಮಾನ್ಯ ಕಾರ್ಯಕರ್ತ ಯಾರು ಅಂತ ಗೊತ್ತಿಲ್ಲಪ್ಪ ಅಂತ ನಿಷ್ಟಾವಂತ ಕಾರ್ಯಕರ್ತನಿಗೆ ಟಿಕೆಟ್‌ ಎಂಬ ಕುಮಾರಸ್ವಾಮಿ ಹೇಳಿಕೆಗೆ ಎಚ್‌.ಡಿ. ರೇವಣ್ಣ ಟಾಂಗ್‌ ಕೊಟ್ಟಿದ್ದಾರೆ.

ಇನ್ನೂ ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ರೆ ಎಚ್‌ ಡಿ ಕುಮಾರಸ್ವಾಮಿ ಅವರಿಗೂ ಹಾಗೂ ಎಚ್‌ ಡಿ ರೇವಣ್ಣ ನಡುವೆ ಫೈಟ್ ಉಂಟಾಗಿದೆ ಎಂದು ಸ್ಪಷ್ಟವಾಗುತ್ತಿದೆ. ಅಲ್ಲದೇ ಹಾಸನ ಟಿಕೆಟ್ ವಿಚಾರವಾಗಿ ಎಚ್.​ಡಿ ಕುಮಾರಸ್ವಾಮಿ ಮತ್ತದೇ ಹಳೆಯ ಸಂದೇಶವವನ್ನು ರವಾನಿಸಿದ್ದಾರೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣೆಗೆ ಟಿಕೆಟ್​ ಇಲ್ಲ ಎಂದಿದ್ದಾರೆ. ಕಡ್ಡಿ ಮುರಿದಂತೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗುತ್ತಿದೆ.

Hassan Ticket Row : Assembly Ticket Confusion Continue In Hassan

ಇನ್ನೂ ಹಾಸನ ಟಿಕೆಟ್‌ ವಿಚಾರದಲ್ಲಿ ಕುಟುಂಬದ ಸದಸ್ಯರಿಗೆ ಮಣೆ ಹಾಕಿದರೆ ಚುನಾವಣೆ ಹೊತ್ತಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರಿಗೆ ಈ ವಿಚಾರವೇ ಅಸ್ತ್ರವಾಗಲಿದೆ ಎನ್ನುವ ಭೀತಿಯಲ್ಲಿ ಕುಮಾರಸ್ವಾಮಿ ಅವರಿಗಿದೆ. ಈಗಾಗಲೇ ಹಾಸನ ಟಿಕೆಟ್‌ ಸ್ವರೂಪ್‌ ಗೆ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದು, ಒಂದು ವೇಳೆ ಕುಟುಂಬದವರಿಗೆ ಟಿಕೆಟ್‌ ನೀಡಿದ್ರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ. ಭವಾನಿಗೆ ಟಿಕೆಟ್ ಕೊಟ್ಟರೆ ಮತ್ತೊಮ್ಮೆ ಕುಟುಂಬ ರಾಜಕೀಯ ಹಣೆಪಟ್ಟಿ ಬರುತ್ತದೆ ಎಂಬ ಲೆಕ್ಕಾಚಾರವನ್ನ ಕುಮಾರಸ್ವಾಮಿ ಹಾಕಿಕೊಂಡಿದ್ದು, ಇತ್ತ ಸ್ವರೂಪ್‌ ಗೆ ಟಿಕೆಟ್‌ ನೀಡುವ ನಿರ್ಧಾರದಲ್ಲಿ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ.

ಇನ್ನೂ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವ ಕುರಿತು ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ ಹಾಗೂ ಎಚ್.ಡಿ ರೇವಣ್ಣ ಪಟ್ಟು ಹಿಡಿದಿದ್ದು, ಈ ಕುರಿತು ಜೆಡಿಎಸ್‌ ವರಿಷ್ಠರಾದ ಎಚ್.ಡಿ ರೇವಣ್ಣ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಭವಾನಿ ರೇವಣ್ಣ ಕ್ಷೇತ್ರದಲ್ಲಿ ಮೂರ್ನಾಲ್ಕು ವರ್ಷ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಸಂಘಟನೆಗಾಗಿ ದುಡಿದಿದ್ದರಿಂದ ಭವಾನಿಗೆ ಟಿಕೆಟ್ ಕೊಡಬೇಕು ಎಂದು ರೇವಣ್ಣ ಪಟ್ಟು ಹಿಡಿದಿದ್ದಾರೆ.

ಹಾಸನದಲ್ಲಿ ಮೊದಲನಿಂದಲೂ ನಮ್ಮ ಕುಟುಂಬದ ವಿರುದ್ಧ ಪ್ರೀತಂಗೌಡ ಬಾಯಿಗೆ ಬಂದ ಹಾಗೆ ಮಾತಾಡಿದ್ದಾನೆ. ಅವನಿಗೆ ಪಾಠ ಕಲಿಸಲು ಭವಾನಿಗೆ ಟಿಕೆಟ್ ಕೊಡಲೇಬೇಕು. ಸ್ವರೂಪ್‍ಗೆ ವರ್ಚಸ್ ಇಲ್ಲ.. ಕ್ಷೇತ್ರದಲ್ಲಿ ಪ್ರಭಾವ ಇಲ್ಲ. ಹೀಗಾಗಿ ಭವಾನಿ ಸೂಕ್ತ ಅಭ್ಯರ್ಥಿ. ಎಲ್ಲಾ ಪಕ್ಷದಲ್ಲಿ ಕುಟುಂಬ ರಾಜಕೀಯ ಇದೆ. ಜೆಡಿಎಸ್‍ಗೆ ಮಾತ್ರ ಈ ಹಣೆಪಟ್ಟಿ ಬೇಡ. ಗೆಲುವಿನ ಆಧಾರದ ಮೇಲೆ ಭವಾನಿಗೆ ಟಿಕೆಟ್ ಕೊಡಬೇಕು ಎಂದು ರೇವಣ್ಣ ಒತ್ತಡ ಹಾಕಿದ್ದಾರೆ.

ಒಟ್ನಾಲಿ ಈ ಬಾರಿ ಮಿಷನ್‌ 123 ಪ್ಲಾನ್‌ ಹಾಕಿಕೊಂಡಿರುವ ದಳಪತಿಗಳು ಮೊದಲ ಪಟ್ಟಿಯನ್ನ ಬಿಡುಗಡೆಗೊಳಿಸಿ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದ್ದು, ಈಗಾಗಲೇ ಎರಡನೇ ಪಟ್ಟಿ ರೆಡಿಯಾಗಿದ್ದು, ಇನ್ನೂ ಹಾಸನ ಟಿಕೆಟ್‌ ಯಾರಿಗೆ ಕೊಡ್ಬೇಕು ಎಂಬುದು ಮಾತ್ರ ಇನ್ನೂ ಫೈನಲ್‌ ಆಗಿಲ್ಲ. ಈಗಾಗಲೇ ಮೂರ್ನಾಲ್ಕು ಬಾರೀ ಹಾಸನ ಟಿಕೆಟ್‌ ಕುರಿತು ಸಭೆ ನಡೆಸಿದ್ದು,ಏಪ್ರಿಲ್‌ 10 ರೊಳಗೆ ಜೆಡಿಎಸ್‌ ಪಟ್ಟಿ ಬಿಡುಗಡೆಯಾಗಲಿದ್ದು, ಹಾಸನ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬುದನ್ನ ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+