ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಆರಂಭ

Hasanamba temple opens from Oct 24
ಹಾಸನ, ಅ.23: ಜಿಲ್ಲೆಯ ಅಧಿದೇವತೆ ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿ ನಾಳೆ(ಅ.24) ಮುಂಜಾನೆ ತೆರೆಯಲಿದೆ.

ದೇವಿಯ ಮೈಮೇಲೆ ಮುಡಿಸಿದ್ದ ಹೂವು ಹಾಗೂ ಗರ್ಭಗುಡಿಯಲ್ಲಿ ಹಚ್ಚಲಾಗಿರುವ ದೀಪದ ಜ್ಯೋತಿ, ದೇವಿಗಾಗಿ ಇಟ್ಟಿರುವ ನೈವೇದ್ಯವನ್ನು ಕಾಣಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

ಪ್ರತಿ ಸಂವತ್ಸರದ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ದೇವಿಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ. ಈ ಬಾರಿ 13 ದಿನಗಳ ಕಾಲ ದರ್ಶನ ಭಾಗ್ಯ ದೊರೆಯಲಿದೆ. ಕಳೆದ ವರ್ಷ ಹದಿನೈದು ದಿನಗಳ ಕಾಲ ದರ್ಶನದ ಅವಕಾಶ ಸಿಕ್ಕಿತ್ತು ಎಂದು ದೇಗುಲದ ಸಮಿತಿ ಸದಸ್ಯ ಪ್ರಸನ್ನ ಕೃಷ್ಣಮೂರ್ತಿ ಹೇಳಿದ್ದಾರೆ.

ಹಾಸನಾಂಬೆಗೆ ಧರಿಸಿದ ಹೂವು ಹಾಗೂ ದೇವಿಗೆ ಹಚ್ಚಿಡಗಿದ್ದ ದೀಪ ಒಂದು ವರ್ಷದವರೆಗೂ ಹಾಗೆಯೇ ಇರುವುದು ಪವಾಡವಾಗಿದ್ದು, ನಾಳೆ ಗರ್ಭಗುಡಿ ತೆರೆದ ಕೂಡಲೇ ಇದನ್ನು ದರ್ಶನ ಮಾಡಲು ಭಕ್ತರು ಇಂದು ರಾತ್ರಿಯೆಲ್ಲಾ ಕಾದಿರುತ್ತಾರೆ.ಇದಕ್ಕೆ ಕಾರಣವೂ ಇದೆ ಗ್ರಾಮಸ್ಥರು ಯಾರೂ ಹಾಸನಾಂಬೆಯ ಚಿತ್ರವನ್ನು ಮನೆಯಲ್ಲಿ ಇಟ್ಟು ಪೂಜಿಸುವುದಿಲ್ಲ. ದೇಗುಲಕ್ಕೆ ಬಂದೇ ಅಮ್ಮನ ದರ್ಶನ ಪಡೆಯುತ್ತಾರೆ.

ಹಾಸನಾಂಬೆ ಜಾತ್ರೆ : ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ 12ನೇ ಶತಮಾನದಲ್ಲಿ ನಿರ್ಮಿಸಿದ ದೇವಸ್ಥಾನದ ನೂತನ ಗೋಪುರ ನಾಳೆ ಉದ್ಘಾಟನೆಯಾಗಲಿದೆ. ನಾಳೆ ಮುಂಜಾನೆ ಅರಸು ವಂಶಸ್ಥರು ಬನ್ನಿಮರ ಕಡಿಯುವ ಮೂಲಕ ಪೂಜೆ ಸಲ್ಲಿಸಿ ನಂತರ ಹಾಸನಾಂಬೆಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ.

ನಾಳೆ ದೇವಿಯ ದರ್ಶನ ಪ್ರಾರಂಭವಾಗಿ ನ.5ರವರೆಗೆ ಬಾಗಿಲು ತೆರೆದಿರುತ್ತದೆ. ಸಂಪ್ರದಾಯದಂತೆ ಪ್ರತಿ ವರ್ಷ ಕನಿಷ್ಠ 9 ರಿಂದ ಗರಿಷ್ಠ 15 ದಿನಗಳ ಕಾಲ ಮಾತ್ರ ದೇವಾಲಯದ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವುದು ವಿಶೇಷವಾಗಿದೆ. ನಂತರ ದೇವಿಗೆ ಅರಿಶಿನ, ಕುಂಕುಮ, ಬಳೆ ಸೇರಿದಂತೆ ಮಂಗಳ ದ್ರವ್ಯಗಳನ್ನು ಅರ್ಪಿಸಿ ಬಲಿಪಾಡ್ಯದ 3ನೇ ದಿನ ಗರ್ಭಗುಡಿಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುಚ್ಚಲಾಗುತ್ತದೆ ಎಂದು ಪ್ರಧಾನ ಅರ್ಚಕ ಸುರೇಶ್ವರ್ ಅವರು ಹೇಳಿದ್ದಾರೆ.

'ಈ ಬಾರಿ 250 ರು ಗಳ ವಿಶೇಷ ಪಾಸ್ ಗಳನ್ನು ನೀಡಲಾಗುತ್ತಿದ್ದು ಭಕ್ತಾದಿಗಳು ತ್ವರಿತವಾಗಿ ದೇವರ ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಹಾಸನಾಂಬ ಜಾತ್ರೆ ಅ.24 ರಿಂದ ನ.5ರ ತನಕ ನಡೆಯಲಿದ್ದು, ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಾಲಯದ ಸುತ್ತ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿದ ಭಕ್ತರು ಸರತಿಯ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ಹಾಕಲಾಗಿದೆ. ನೀರಿನ ವ್ಯವಸ್ಥೆ ರಾತ್ರಿ ಭಕ್ತರು ಉಳಿಯಲು ವ್ಯವಸ್ಥೆ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿ ವಿ ಅನ್ಬುಕುಮಾರ್ ಹೇಳಿದ್ದಾರೆ.

ಅಸ್ತಿಕರು ಹಾಗೂ ಸ್ಥಳೀಯರಲ್ಲಿ ಒಂದು ವಿನಂತಿ : ಈ ಬಾರಿ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳು ದೇಗುಲದ ಚಿತ್ರವನ್ನು ನಮ್ಮ ವಿಳಾಸಕ್ಕೆ ತಪ್ಪದೇ ಕಳಿಸಿಕೊಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+