ಆಂಜನೇಯಗೆ ಅವಮಾನ ಮಾಡಿದ ಸಿದ್ದುಗೆ ಪಂಚೋ ಪಂಚು!
Recommended Video

ಬೆಂಗಳೂರು, ಏಪ್ರಿಲ್ 15: ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಎಂಬಂತಿದ್ದ ತಮ್ಮ ಆಪ್ತ ಗೆಳೆಯ ಎಚ್ ಆಂಜನೇಯ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲೇ ಅವಮಾನ ಮಾಡಿದ ಘಟನೆ ನಡೆದಿದೆ. ಅದೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಎದುರಿಗೆ!
ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಅಭಿಮಾನಿಗಳಿಗೆ ಕೈಬೀಸುತ್ತಿದ್ದರು. ಈ ಸಂದರ್ಭದಲ್ಲಿ ಎಚ್ ಆಂಜನೇಯ ಅವರು ಸಹ ವೇದಿಕೆಯ ಮೇಲೆ, ಸಿದ್ದರಾಮಯ್ಯ ಅವರ ಪಕ್ಕದಲ್ಲೇ ನಿಂತಿದ್ದರು.
ಆದರೆ ಸಿದ್ದರಾಮಯ್ಯ ಅವರು ಆಂಜನೇಯ ಅವರನ್ನು ಪಕ್ಕಕ್ಕೆ ತಳ್ಳಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಂದೆ ಕರೆತಂದರು. ಆಂಜನೇಯ ಅವರನ್ನು ಹಿಂದೆ ತಳ್ಳಿ, ವೇದಿಕೆಯಲ್ಲಿ ಮುಂದೆ ಕಾಣಿಸಿಕೊಳ್ಳದಂತೆ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಂಜನೇಯ ಅವರನ್ನು ಕಡೆಗಣಿಸಿದ, ಅವಮಾನ ಮಾಡಿದ ಸಿದ್ದರಾಮಯ್ಯ ಅವರನ್ನು ಸಾಕಷ್ಟು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ದಲಿತ ನಾಯಕ ಆಂಜನೇಯ ಅವರನ್ನು ಹೀಗೆ ಅವಮಾನಿಸುವ ಸಿದ್ದರಾಮಯ್ಯ ದಲಿತತರ ಪರ ಕೆಲಸ ಮಾಡುತ್ತಾರೆ ಎಂದು ನಂಬುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ವಿಡಿಯೋವನ್ನು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು, ಇದಕ್ಕೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ.
|
ವೈರಲ್ ವಿಡಿಯೋ
ವೇದಿಕೆಯಲ್ಲಿ, ತಮ್ಮ ಪಕ್ಕವೇ ನಿಂತಿದ್ದ ಎಚ್ ಆಂಜನೇಯ ಅವರನ್ನು ಪಕ್ಕಕ್ಕೆ ತಳ್ಳಿ ಕುಮಾರಸ್ವಾಮಿ ಅವರನ್ನು ಮುಂದಕ್ಕೆ ಕರೆದುಕೊಂದು ಬಂದ ಸಿದ್ದರಾಮಯ್ಯ ಅವರ ವಿಡಿಯೋ ಇಲ್ಲಿದೆ. ಬಿಜೆಪಿ ಕರ್ನಾಟಕ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.
|
ದಲಿತರಿಗೆ ಕೊಡುವ ಮರ್ಯಾದೆ!
ಇದು ಕಾಂಗ್ರೆಸ್ ದಲಿತ ಸಮುದಾಯದ
ನಾಯಕರಿಗೆ ಕೊಡುವ ಮರ್ಯಾದೆ ಎಂದು ವೀರೇಶ್ ಎಸ್ ಜಿ ಟ್ವೀಟ್ ಮಾಡಿದ್ದಾರೆ.
|
ಛೇ ಛೇ... ನಾಚಿಕೆಗೇಡು!
ಪಾಪ ಆಂಜನೇಯ... ದಲಿತ ನಾಯಕರಿಗೆ ಸಿದ್ದರಾಮಯ್ಯನವರು ಹೀಗೆ ಮರ್ಯಾದೆ ತೆಗಿಬಾರದಿತ್ತು. ಅದೂ ತಾನೂ ಒಬ್ಬ ಅಹಿಂದ ನಾಯಕನಾಗಿ...ಛೇ ಛೇ... ನಾಚಿಕೆಗೇಡು!- ಪ್ರವೀಣ್
|
ಡೋಂಗಿ ನಾಯಕರೆಲ್ಲ ಎಲ್ಲಿ?
ತಮ್ಮನ್ನ ತಾವು ದಲಿತರ ನಾಯಕರೆಂದು ಕರೆದುಕೊಂಡಿರುವ ಡೋಂಗಿ ದಲಿತ ನಾಯಕರೆಲ್ಲ ಏನ್ ಕಣ್ಮುಚ್ಕೊಂಡು ನಿದ್ದೆಮಾಡ್ತ ಇದಾರಾ ಅಥವಾ ನಿದ್ದೆ ಮಾಡ್ತಾ ಇರೋ ನಾಟ್ಕಮಾಡ್ತ ಇದರಾ? ಇದೇ ಕೆಲಸ ಬಿಜೆಪಿ ನಾಯಕರೇನಾದರೂ ಮಾಡಿದ್ದಿದ್ದರೆ ಗಂಜಿ ಗಿರಕಿಗಳೆಲ್ಲ ಇಷ್ಟೋತ್ತಿಗಾಗಲೇ ಟೌನ್ ಹಾಲ್ ಮುಂದೆ ಸೇರಿ ಬೊಬ್ಬೆ ಹಾಕ್ತಾ ಇದ್ರು- ಮುಕುಂದ
|
ರಾಮನವಮಿಯಂದು ದಲಿತರಿಗೆ ಉಡುಗೊರೆ
ಪಾಪ. ರಾಮನವಮಿ ದಿನ ರಾಮನ ಭಂಟ ಆಂಜನೇಯ ನಿಗೆ ಅವಮಾನ. ಇದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ರಿಂದ ಅಂಬೇಡ್ಕರ್ ಜನ್ಮದಿನದಂದು ದಲಿತರಿಗೆಕೊಟ್ಟ ಉಡುಗೊರೆ-ದೀಪಕ್ ಕುಮಾರ್
|
ಕೇವಲ ಮತ ಬ್ಯಾಂಕ್ ಗಳಷ್ಟೆ!
ದಲಿತರು, ಮುಸ್ಲಿಮರು ಮತ್ತು ಕ್ರೈಸ್ತರು ಎಂದಿಗೂ ಕಾಂಗ್ರೆಸ್ಸಿಗೆ ಮತ ಬ್ಯಾಂಕ್ ಗಳಷ್ಟೇ. ಅವರನ್ನು ಉದ್ಧಾರ ಮಾಡುವುದು ಕಾಂಗ್ರೆಸ್ಸಿಗೆ ಬೇಕಿಲ್ಲ. ಅವರು ಬಡವರಾಗಿದ್ದರೆ ಮಾತ್ರವೇ ಅವರ ಬಳಿ ಮತ್ತೆ ಮತ ಕೇಳಬಹುದಲ್ಲ ಎಂಬುದು ಕಾಂಗ್ರೆಸ್ ನ ತಂತ್ರ. ಕಾಂಗ್ರೆಸ್ ನ ಈ ಮನಸ್ಥಿತಿಯನ್ನು ಆದಷ್ಟು ಬೇಗ ಅರ್ಥ ಮಾಡಿಕೊಂಡರೆ ಇದು ದಲಿತರಿಗೆ, ಮುಸ್ಲಿಮರು, ಕ್ರೈಸ್ತರಿಗೇ ಒಳ್ಳೆಯದು- ಎಪಿ ಫಾರ್ ಇಂಡಿಯಾ
|
ಆಂಜನೇಯ ಕಾಂಗ್ರೆಸ್ ನಲ್ಲೇ ಉಳೀತಾರಾ?
ಛೇ
ಒಬ್ಬ ದಲಿತ ನಾಯಕನಿಗೆ, ಅದೂ ಕೂಡ ಅಂಬೇಡ್ಕರ್ ಜಯಂತಿ ಹಿಂದಿನ ದಿನಾನೇ ಹೀಗೆ ಅವಮಾನ ಮಾಡ್ಬಾರ್ದಿತ್ತು. ಆಂಜನೇಯರವರು ಇನ್ನೂ ಆ ಪಕ್ಷದಲ್ಲೇ ಇರ್ತಾರಾ? ಕಾದು ನೋಡುವಾ! - ಎಸ್ ಕೆ ಪಾಟೀಲ್
|
ಇಬ್ಬರೂ ಕಡಿಮೆ ಇಲ್ಲ ಬಿಡಿ!
ತಳ್ಳಿದವನು ಕಮ್ಮಿ ಇಲ್ಲ ತಳ್ಳಿಸಿ ಕೊಂಡವನು ಕಮ್ಮಿ ಇಲ್ಲ. ಸರಿ ಇದೆ ಬಿಡಿ- ಖುಶ್












Click it and Unblock the Notifications