ಶನಿ ಕಾಟದ ಮಧ್ಯೆಯೂ ಯಡಿಯೂರಪ್ಪನವರ ಕೈ ಹಿಡಿದ ಗುರು

By: ನಂದೀಶ್
Subscribe to Oneindia Kannada

ಯಡಿಯೂರಪ್ಪನವರು ಸಿಬಿಐ ವಿಶೇಷ ಕೋರ್ಟ್ ತೀರ್ಪಿನಿಂದ ನಿರಾಳವಾಗಿದ್ದಾರೆ. ವಿಶಾಖ ನಕ್ಷತ್ರ ನಾಲ್ಕನೇ ಪಾದ, ವೃಶ್ಚಿಕ ರಾಶಿಯವರಾದ ಅವರಿಗೆ ಹನ್ನೊಂದನೆ ಮನೆಯಲ್ಲಿರುವ ಗುರು ಶುಭ ಸುದ್ದಿ ತಂದಿದ್ದಾನೆ. ಸದ್ಯಕ್ಕೆ ಅವರಿಗೆ ಚಂದ್ರ ದಶೆ ನಡೆಯುತ್ತಿದೆ. ಆದರೆ ಗೋಚಾರದಿಂದ ಸಾಡೇಸಾತಿ ನಡೆಯುತ್ತಿದೆ. ಅಂದರೆ ಜನ್ಮರಾಶಿಯಲ್ಲೇ ಶನಿ ಇರುವುದರಿಂದ ನೆಮ್ಮದಿ ಸಿಗುವುದು ಸುಲಭವಲ್ಲ.

ಯಡಿಯೂರಪ್ಪನವರ ಜನ್ಮ ಕುಂಡಲಿಯಲ್ಲಿ ಶುಕ್ರ ಉಚ್ಚನಾಗಿದ್ದು, ಸುಖ ಸ್ಥಾನದಲ್ಲಿದೆ. 1986ರಿಂದ 2006ರ ವರೆಗೆ ಶುಕ್ರ ದಶೆ ನಡೆದ ವೇಳೆ ಉತ್ತಮವಾದ ಫಲಗಳನ್ನು ಅನುಭವಿಸಿದ್ದಾರೆ. ಇನ್ನು 2017ರ ಜನವರಿ 26ರ ನಂತರ ಶನಿ ಧನುಸ್ಸು ರಾಶಿ ಪ್ರವೇಶ ಮಾಡಲಿದ್ದು, ಅವರ ಆರೋಗ್ಯ ಕೈ ಕೊಡುವ ಸಾಧ್ಯತೆಗಳಿವೆ.[ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ]

ಆಗಸ್ಟ್ 11ರಂದು ಗುರು ಕನ್ಯಾ ರಾಶಿ ಪ್ರವೇಶ ಮಾಡಿದ ನಂತರ ಯಡಿಯೂರಪ್ಪನವರಿಗೆ ಒಂದಿಷ್ಟು ಅನುಕೂಲ ಮಾಡಿಕೊಟ್ಟಿದ್ದಾನೆ. ಡಿಸೆಂಬರ್ 2014ರಲ್ಲಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದ ಶನಿಯು ನೆಮ್ಮದಿಯನ್ನು ಪೂರ್ತಿ ಹಾಳು ಮಾಡಿದ್ದ.

2012ರಲ್ಲಿ ಯಾವಾಗ ಶನಿಯು ತುಲಾ ರಾಶಿ ಪ್ರವೇಶ ಮಾಡಿದನೋ ಆಗಿನಿಂದಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ ಯಡಿಯೂರಪ್ಪ. ಭ್ರಷ್ಟಾಚಾರದ ಆರೋಪ, ನಷ್ಟ, ಅಪಮಾನ ಎದುರಿಸುವಂತೆ ಮಾಡಿದ ಸಾಡೇಸಾತ್ ಶನಿಯು ಇನ್ನೂ ಪೂರ್ಣವಾಗಿ ಬಿಟ್ಟುಹೋಗಿಲ್ಲ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಸಾಡೇಸಾತ್ ತೊಂದರೆ

ಸಾಡೇಸಾತ್ ತೊಂದರೆ

ಸಾಡೇಸಾತ್ ಎಂದರೆ ಏಳೂವರೆ ವರ್ಷಗಳ ಕಾಲ ಶನಿ ಸಂಚಾರ ಎಂದರ್ಥ. ಅಂದರೆ ಜನ್ಮರಾಶಿಯ ಹಿಂದಿನ ಮನೆ, ಜನ್ಮ ರಾಶಿ ಹಾಗೂ ಎರಡನೇ ಸ್ಥಾನದಲ್ಲಿ ಶನಿ ಸಂಚರಿಸುವಾಗ ಹೀಗೆನ್ನುತ್ತಾರೆ. ಹನ್ನೆರಡರಲ್ಲಿ ಸಂಚರಿಸುವಾಗ ಅಪಮಾನ, ಹಣಕಾಸು ನಷ್ಟ ಇತರ ತೊಂದರೆಗಳು ಎದುರಿಸಬೇಕಾಗುತ್ತದೆ.

ನೆಮ್ಮದಿ ಹಾಳು, ಹಿತಶತ್ರುಗಳ ಮೇಲುಗೈ

ನೆಮ್ಮದಿ ಹಾಳು, ಹಿತಶತ್ರುಗಳ ಮೇಲುಗೈ

ಇನ್ನು ಜನ್ಮರಾಶಿಯಲ್ಲಿ ಸಂಚರಿಸುವಾಗ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಿತಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಎಷ್ಟೇ ಶ್ರಮ ಹಾಕಿದರೂ ನಿರೀಕ್ಷಿತ ಫಲ ದೊರೆಯುವುದಿಲ್ಲ. ಎರಡನೇ ಸ್ಥಾನದಲ್ಲಿ ಸಂಚರಿಸುವಾಗ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ತುಂಬ ಹತ್ತಿರದವರ ಅನಾರೋಗ್ಯವೋ ಅಗಲಿಕೆಯೋ ಚಿಂತೆಗೆ ಕಾರಣವಾಗುತ್ತದೆ.

ಗುರುವಿನ ಆಶೀರ್ವಾದ

ಗುರುವಿನ ಆಶೀರ್ವಾದ

ಅದರೆ, ಮುಂದಿನ ವರ್ಷ ಸೆಪ್ಟೆಂಬರ್ ವರೆಗೆ ಯಡಿಯೂರಪ್ಪನವರ ರಾಶಿಗೆ ಗೋಚಾರದಲ್ಲಿ ಲಾಭ ಸ್ಥಾನದಲ್ಲಿ ಸಂಚರಿಸುವ ಗುರು ಕೆಲವು ಶುಭ ಫಲಗಳನ್ನು ಕೊಡುತ್ತಾನೆ. ಶನಿಯ ಅವಕೃಪೆ ಸ್ವಲ್ಪ ಮಟ್ಟಿಗೆ ಗುರುವಿನ ಆಶೀರ್ವಾದದಿಂದ ನಿಯಂತ್ರಣಕ್ಕೆ ಬರುತ್ತದೆ. ನಾಲ್ಕರಲ್ಲಿರುವ ಕೇತು ಮಾತಿನ ಕಾರಣಕ್ಕೆ ವೈರಿಗಳನ್ನು ಸೃಷ್ಟಿಸುತ್ತಾನೆ. ಹತ್ತನೇ ಸ್ಥಾನದಲ್ಲಿರುವ ರಾಹು ಯತ್ನ ಕಾರ್ಯದಲ್ಲಿ ಯಶಸ್ಸು ಕೊಡುವುದು ಸಹ ಕಡಿಮೆ.

ಶನಿ ಮಕರ ಪ್ರವೇಶಿಸಬೇಕು

ಶನಿ ಮಕರ ಪ್ರವೇಶಿಸಬೇಕು

ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ನಂತರ ಅದ್ಭುತವಾದ ಯಶಸ್ಸು ಕೊಡುತ್ತಾನೆ. ಆದರೆ ಅದಕ್ಕೆ ಇನ್ನೂ ಎರಡೂವರೆ ವರ್ಷ ಸಮಯವಿದೆ. ಯಡಿಯೂರಪ್ಪನವರ ಜಾತಕ ಪರಿಶೀಲಿಸಿ, ಸದ್ಯಕ್ಕೆ ಅವರಿಗೆ ನಡೆಯುತ್ತಿರುವ ದಶೆ, ಭುಕ್ತಿ ಗಮನಿಸಿ, ಅಗತ್ಯ ಶಾಂತಿ ಮಾಡಿಸುವ ಅಗತ್ಯ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BS Yeddyurappa has been aquitted in Rs. 40 crore bribery case by special CBI court. Yeddyurappa's zodiac sign is Scorpio (Vruschika). Though Yeddyurappa is going through Sade Sati. But due to effect of Jupiter he has come out victorious. But, what lies ahead?
Please Wait while comments are loading...