Gruha Lakshmi: ಮೃತ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಹಣ? ಸರ್ಕಾರ ಕೊಟ್ಟ ಸ್ಪಷ್ಟನೆ, ಅಂಕಿ-ಅಂಶ ಇಲ್ಲಿದೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ 'ಗೃಹಲಕ್ಷ್ಮಿ' ಯೋಜನೆಗೆ ಫಲಾನುಭವಿಗಳ ಅಲ್ಲದವರಿಗೂ ಅಂದರೆ ಅನರ್ಹರಿಗೆ, ಮರಣ ಹೊಂದಿದ ಫಲಾನುಭವಿಗಳ ಖಾತೆಗೂ ಧನಸಹಾಯ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಈ ಸುದ್ದಿ ಮಾಧ್ಯಮಗಳ ವರದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದೆ. ಫಲಾನುಭವಿಗಳ ಅಂಕಿ ಸಂಖ್ಯೆಗಳನ್ನು, ಮಾಸಿಕ 2000 ರೂ.ನಂತೆ ಜಮೆಯಾದ ಲೆಕ್ಕ ಕೊಟ್ಟಿದೆ.

ನೋಂದಣಿಯಾದ ಫಲಾನುಭವಿಗಳ ಪೈಕಿ ಈವರೆಗೆ ಒಟ್ಟು 2,88,376 ಮಹಿಳೆಯರು ಮರಣ ಹೊಂದಿರುತ್ತಾರೆ. ಅದರಲ್ಲಿ 1,03,922 ಫಲಾನುಭವಿಗಳು ಮೃತ ಕುಟುಂಬದ ಯಜಮಾನಿಯ ಹೆಸರು ಬದಲಾಯಿಸಿ, ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿ ಪಡೆದು, ಮರು ನೋಂದಣಿ ಮಾಡಿಕೊಂಡಿದ್ದು, ಧನಸಹಾಯ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

Gruha Lakshmi Scheme

1.30 ಕೋಟಿಗೂ ಅಧಿಕ ಮಂದಿ ನೋಂದಣಿ

ಪ್ರಸ್ತುತ ಏಪ್ರಿಲ್-2026ರ ಅಂತ್ಯಕ್ಕೆ 1,30,35,318 ಫಲಾನುಭವಿಗಳು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿರುತ್ತಾರೆ. ಅದರಲ್ಲಿ 95,66,679 ಫಲಾನುಭವಿಗಳು, ಪರಿಶಿಷ್ಟ ಜಾತಿಯ 24,95,604 ಫಲಾನುಭವಿಗಳು ಹಾಗೂ ಪರಿಶಿಷ್ಟ ಪಂಗಡದ 9,73,035 ಫಲಾನುಭವಿಗಳು ನೋಂದಣಿಯಾಗಿದ್ದಾರೆ.

ಸರ್ಕಾರದ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅರ್ಹ ಕುಟುಂಬದ ಯಜಮಾನಿಗೆ (ಮಹಿಳೆ/ ಲಿಂಗತ್ವ ಅಲ್ಪಸಂಖ್ಯಾತರಿಗೆ) ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆ 6-06-2023ರಲ್ಲಿ ಚಾಲನೆ ನೀಡಲಾಯಿತು. ಅರ್ಹ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ/ಮಹಿಳೆಯನ್ನು ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದಾರೆ. ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಮತ್ತು ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವವರಾಗಿದ್ದರೆ ಅವರು ಯೋಜನೆಗೆ ಅರ್ಹರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಬ್ಯಾಂಕ್‌ನಿಂದಲೂ ಪರಿಶೀಲಿಸಿ ಖಾತೆಗೆ ಹಣ ಜಮೆ

ಗೃಹಲಕ್ಷ್ಮಿ ಯೋಜನೆಯನ್ನು ಇ-ಆಡಳಿತ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (EDCS), DBT ಕೋಶ ಹಾಗೂ ಖಜಾನೆ ಇಲಾಖೆಯ ಸಹಯೋಗದೊಂದಿಗೆ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ (DBT) ಧನಸಹಾಯ ಪಾವತಯಾಗಿದೆ.

ಐಟಿ ರಿಟರ್ನ್ ಸಂಖ್ಯೆ 1.94 ಲಕ್ಷ

ನೋಂದಣಿಯಾದ ಫಲಾನುಭವಿಗಳ ಪೈಕಿ ಈವರೆಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುತ್ತಿರುವ ಒಟ್ಟು 1,94,560 ಮಹಿಳೆಯರಿದ್ದಾರೆ. ಅವರನ್ನು ಅನರ್ಹರೆಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳು ಐಟಿ ರಿಟರ್ನ್ ಕುರಿತು ಅಧಿಕಾರಿಗಳು ಪಾಲಿಸುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ API ಮೂಲಕ Kutumba ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ ಅರ್ಹರಿಗೆ ಮಾತ್ರವೇ ಧನಸಹಾಯ ಪಾವತಿಗಾಗಿ EDCS ಹಂತದಿಂದ ಕಡತಗಳನ್ನು DBT ಕೋಶಕ್ಕೆ ಕಳುಹಿಸಲಾಗುತ್ತದೆ. ಅನರ್ಹ ಫಲಾನುಭವಿಗಳನ್ನು ಕೈ ಬಿಡಸಲಾಗಿದೆ.

ಫಲಾನುಭವಿಗಳ ಮರಣದ ಮಾಹಿತಿಯನ್ನು e-janma/ Kutumba ತಂತ್ರಾಂಶದಲ್ಲಿ ಪರಿಶೀಲಿಸಲಾಗುತ್ತದೆ. ಅನರ್ಹರನ್ನು ಯಾವ ಕಾರಣಕ್ಕೂ ನೋಂದಣಿಗೆ ಬಿಟ್ಟಿಲ್ಲ, ಅವರಿಗೆ ಹಣ ಪಾವತಿ ಆಗಿಲ್ಲ. Aadhaar Based Payment System ವ್ಯವಸ್ಥೆಯಲ್ಲಿ ಆಧಾ‌ರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಆಧಾರ್ ಸಂಖ್ಯೆಯನ್ನು NPCI Mapper ಪರಿಶೀಲಿಸಿ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ಆ ಬ್ಯಾಂಕ್ ತನ್ನ CBS ವ್ಯವಸ್ಥೆ, ಆಧಾರ್ ಜೋಡಣೆ ನೋಡಿಯೇ ಫಲಾನುಭವಿಯ ಖಾತೆಗೆ ಹಣ ಜಮೆ ಮಾಡುತ್ತಿದೆ. ಯಾರೊಬ್ಬ ಅನರ್ಹರ/ ಮರಣ ಹೊಂದಿದವರ ಖಾತೆಗೆ ಹಣ ಜಮೆ ಮಾಡುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮರಣ ಹೊಂದಿದವರ ಮಾಹಿತಿ ಖುದ್ದು ಪರಿಶೀಲನೆ

ಯೋಜನೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಗಳಿಗೆ ಗೃಹಲಕ್ಷ್ಮಿ ಫಲಾನುಭವಿಗಳು ಮರಣ ಹೊಂದಿದ ಕೂಡಲೇ ಮಾಹಿತಿ ನೀಡಲು ಸೂಚಿಸಲಾಗಿದೆ. ಮೃತ ಫಲಾನುಭವಿಗಳ ಮಾಹಿತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವರ Loginನಲ್ಲಿ ನಮೂದಿಸಿ EDCSಗೆ ಸಲ್ಲಿಸುತ್ತಿದ್ದಾರೆ. ಆ ಮಾಹಿತಿ ಮೇರೆಗೆ ಮರಣ ಹೊಂದಿದ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಫಲಾನುಭವಿಗಳು ಗಮನಿಸಿ

ಆಧಾರ್ ಜೋಡಣೆ ಮಾಡುವ ಆಯ್ಕೆಯು ಫಲಾನುಭವಿಗಳದ್ದಾಗಿದೆ. ಆದ್ದರಿಂದ, ಆಧಾರ್ ಜೋಡಣೆಯೊಂದಿಗೆ ಬ್ಯಾಂಕ್ ಖಾತೆಯನ್ನು ಬದಲಾಯಿಸಿಕೊಳ್ಳಲು ಅವಕಾಶ ಇದೆ. ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳಲ್ಲಿ ಧನಸಹಾಯ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ. ಕೆಲವೊಮ್ಮೆ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂ ಖಾತೆ ವಿವರಗಳಿಲ್ಲದ ಸಮಸ್ಯೆ ಆಗಿರುತ್ತದೆ ಎಂದು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+