ಮಿತಿ ಮೀರಿದ ಸೊಪ್ಪು, ತರಕಾರಿ ಸೇವನೆಯೇ ಹಲವು ರೋಗಗಳಿಗೆ ಮೂಲ: ರಾಮಚಂದ್ರಾಪುರ ಶ್ರೀ

ಗೋಕರ್ಣ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೇ ಮುಖ್ಯ. ಹಿತ ಮಿತಿ ಆಹಾರ ಸೇವನೆ, ಮಿತ ಪ್ರಮಾಣದ ಊಟ ಹಾಗೂ ಸೂಕ್ತ ಸಮಯದಲ್ಲಿ ಆಹಾರ ಸೇವಿಸುವುದು ಆರೋಗ್ಯಕರ ಜೀವನದ ಮೂಲ ಸೂತ್ರ. ಕೇವಲ ಇಷ್ಟವಾಗಿದ್ದನ್ನು ಮಾತ್ರ ಬೇಕಬಿಟ್ಟಿ ತಿನ್ನೋದಲ್ಲ, ಒಳ್ಳೆಯದನ್ನು ತಿನ್ನಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕರೆ ನೀಡಿದರು.

ಗೋಕರ್ಣದ ಅಶೋಕೆ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 'ಅನ್ನಂ ಬ್ರಹ್ಮ' ಪ್ರವಚನ ಸರಣಿಯ ಆಶೀರ್ವಚನ ನೀಡಿ, ಆಯುರ್ವೇದದ ಪ್ರಸಿದ್ಧ ವೈದ್ಯ ವಾಗ್ಭಟ ಮತ್ತು ಆರೋಗ್ಯದ ಅಧಿದೇವತೆ ಧನ್ವಂತರಿ ಕುರಿತ ಪ್ರಸಂಗವನ್ನು ಉಲ್ಲೇಖಿಸಿ, 'ಯಾರು ರೋಗರಹಿತರು?ʼ ಎಂಬ ಪಕ್ಷಿ ರೂಪದ ಧನ್ವಂತರಿ ಪ್ರಶ್ನೆಗೆ ವಾಗ್ಭಟರು 'ಹಿತಭುಕ್, ಮಿತಭುಕ್, ಅಶಾಕಭುಕ್ʼ ಎಂಬ ಮೂರು ಪದಗಳಲ್ಲೇ ಉತ್ತರ ನೀಡಿರುವುದನ್ನು ವಿವರಿಸಿದರು. 'ಹಿತಭುಕ್ ಎಂದರೆ ದೇಹಕ್ಕೆ ಹಿತವಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವವನು, ಮಿತಭುಕ್ ಎಂದರೆ ಅಗತ್ಯ ಪ್ರಮಾಣದಲ್ಲಿ ಮಾತ್ರ ಆಹಾರ ಸೇವಿಸುವವನು, ಅಶಾಕಭುಕ್ ಎಂದರೆ ಅತಿಯಾಗಿ ಸೊಪ್ಪು - ತರಕಾರಿಗಳನ್ನು ತಿನ್ನದವನು,ʼ ಎಂದು ತಿಳಿಸಿದರು.

Green Leaves

ಸೂರ್ಯೋದಕ್ಕೂ ಮುನ್ನ ಆಹಾರ ಸೇವಿಸಬಹುದಾ?

ಇತ್ತೀಚೆಗೆ ಮುಂಜಾನೆ ಪ್ರಯಾಣಮಾಡುವಾಗ ಬೆಳಗ್ಗೆ 4 ಗಂಟೆಗೇ ಹೋಟೆಲ್'ಗಳ ಮುಂದೆ ಜನ ಸೇರಿರುವುದು ಗಮನಕ್ಕೆ ಬಂತು. ಸೂರ್ಯೋದಯಕ್ಕೂ ಮೊದಲೇ ಆಹಾರವನ್ನು ತಿನ್ನುವ ಕ್ರಮ ಮಹಾ ನಗರದ ಯುವ ಸಮೂಹದಲ್ಲಿ ಹೆಚ್ಚುತ್ತಿದೆ. ಇದು ಸೂಕ್ತ ಪ್ರವೃತ್ತಿಯಲ್ಲ. ಈ ಸಮಯದಲ್ಲಿ ಅಮೃತವನ್ನೇ ತಿಂದರೂ ಅದು ದೇಹಕ್ಕೆ ವಿಷವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು ಊಟವನ್ನು ಕ್ಯಾಲೋರಿಗಳಲ್ಲಿ ಅಳೆದು ತಿನ್ನಲಾಗುತ್ತಿದೆ. ಏನೇ ಮಾಡಿದರೂ ಸೂಕ್ತ ಸಮಯ ಹಾಗೂ ಕ್ರಮದಲ್ಲಿ ಆಹಾರ ಸೇವಿಸುವ ಪದ್ಧತಿಯನ್ನು ಬೆಳಸಿಕೊಂಡರೆ, ಹೊಟ್ಟೆಯೇ ನಮಗೆ ಎಷ್ಟು ತಿನ್ನಬೇಕು ಎಂಬ ಸೂಚನೆ ಕೊಡುತ್ತದೆ. ಆಹಾರವು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ, ಅದು ದೇಹ, ಮನಸ್ಸು ಮತ್ತು ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶ.ಜೀರ್ಣವಾಗದೇ ದೇಹದಲ್ಲಿ ಉಳಿಯುವ ಆಹಾರಕ್ಕೆ ಆಯುರ್ವೇದದಲ್ಲಿ 'ಆಮ' ಎಂದು ಹೇಳಲಾಗಿದೆ. ಜೀರ್ಣವಾಗದ ಆಹಾರವೇ ಅನೇಕ ರೋಗಗಳ ಮೂಲ,ʼ ಎಂದು ಎಚ್ಚರಿಸಿದರು.

ದೇಹವೆಂಬ ಗಣ್ಯವ್ಯಕ್ತಿ ಆರೈಕೆ ಹೇಗೆ?

ಗಣ್ಯವ್ಯಕ್ತಿಗಳನ್ನು ಸಂದರ್ಶಿಸುವಾಗ 'ಮೆಟಲ್ ಡಿಟೆಕ್ಟರ್' ನಿಂದ ಪರಿಶೀಲಿಸಿ, ಆನಂತರ ಅವರ ಬಳಿ ಹೋಗಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ನಮ್ಮ ದೇಹ ಎಂಬ ಗಣ್ಯವ್ಯಕ್ತಿಗೆ ಆಹಾರವನ್ನು ನೀಡುವ ಮೊದಲು ಸಮರ್ಪಕವಾಗಿ ಪರಿಶೀಲಿಸಿ, ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೆ? ಯಾವಾಗ ತಿನ್ನುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡ ನಂತರವಷ್ಟೇ ಆಹಾರ ತಿನ್ನಬೇಕು ಎಂದು ಕಿವಿಮಾತು ಹೇಳಿದರು.

ಮಿತಿ ಮೀರಿದ ಸೊಪ್ಪು, ತರಕಾರಿಗಳು ಹಲವು ರೋಗಗಳಿಗೆ ಮೂಲ. ಹೆಚ್ಚಿನ ಪ್ರಮಾಣದ ಸೊಪ್ಪು ~ ತರಕಾರಿಗಳ ಸೇವನೆ ಕಣ್ಣು , ಮೂಳೆ ಸಮಸ್ಯೆ ಹಾಗೂ ಮಂದಬುದ್ಧಿಗೆ ಕಾರಣ ಎಂದು ಆಯುರ್ವೇದ ಹೇಳಿದೆ, ಎಂದರು.

60 ದಿನಗಳಲ್ಲಿ 300+ ವೈವಿಧ್ಯಮಯ ಆಹಾರ

ಅನ್ನಬ್ರಹ್ಮ ಚಾತುರ್ಮಾಸ್ಯದ 60 ದಿನಗಳಲ್ಲಿ ವೈವಿಧ್ಯಮಯ ಪಾರಂಪರಿಕ ಪಾಕ ಲೋಕದ ಅನಾವರಣವಾಗಲಿದ್ದು, 300ಕ್ಕೂ ಅಧಿಕ ವಿಶೇಷ ಸಾತ್ವಿಕ ಆಹಾರಗಳನ್ನು ಚಾತುರ್ಮಾಸ್ಯದಲ್ಲಿ ಆಗಮಿಸುವವರಿಗೆ ಉಣಬಡಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ಭಕ್ಷ್ಯಗಳನ್ನು ಮಠದ ಮಾತೃ ವಿಭಾಗದ ನೇತೃತ್ವದಲ್ಲಿ ತಯಾರಿಸುವ ವ್ಯವಸ್ಥೆಯಾಗಿದ್ದು, ವೈವಿಧ್ಯಮಯ ತಂಬುಳಿ, ಕೋಸಂಬರಿ, ಪಾಯಸ ಸೇರಿ ವಿವಿಧ ಭಕ್ಷ್ಯಗಳು ದೇಹಕ್ಕೆ ಹಿತವನ್ನು ನಾಲಿಗೆಗೆ ರುಚಿಯನ್ನೂ ಉಣಬಡಿಸಲಿವೆ. 'ಭೋಜನ ಕುತೂಹಲಮ್' ಹಾಗೂ 'ಕ್ಷೇಮ ಕುತೂಹಲಮ್' ಎಂಬ ಪ್ರಾಚೀನ ಗ್ರಂಥಗಳನ್ನು ಆಧರಿಸಿಯೂ ಹಲವು ಆರೋಗ್ಯಯುಕ್ತ ಸಾತ್ವಿಕ ಆಹಾರಗಳೂ ಊಟದ ಬಾಳೆಯನ್ನು ಅಲಂಕರಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+