3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು
Recommended Video

ಬೆಂಗಳೂರು, ಸೆ.28: ಕಡ್ಡಾಯ ಮತ್ತು ಕೋರಿಕೆ ಶಿಕ್ಷಕರ ವರ್ಗಾವಣೆಯನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಅ.1ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ಹೋರಾಟ ಸಮಿತಿ ಮುಂದಾಗಿದೆ.
ಅ.ರಂದು ಶಿಕ್ಷಣ ಇಲಾಖೆ ಎದುರು ಹೋರಾಟ ನಡೆಸಲು ನಿರ್ಧರಿಸಿದೆ, ಅಂದು ಬೆಳಗ್ಗೆ 10 ಗಂಟೆಗೆ ಹೋರಾಟ ಆರಂಭಿಸಲಿದ್ದಾರೆ, ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾನೂನಿನ ಪ್ರಕಾರ ಶಿಕ್ಷಕರ ವರ್ಗಾವಣೆಯನ್ನು ನಡೆಸುವಲ್ಲಿ ಇಲಾಖೆ ವಿಫಲವಾಗಿದೆ.ಇದರಿಂದ ಸಿ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಎಂಬುದು ಶಿಕ್ಷಕರ ವಾದ.
ಈಗಾಗಲೇ ಕೌನ್ಸೆಲಿಂಗ್ ಪೂರ್ಣಗೊಂಡು ವರ್ಗಾವಣೆ ಆದೇಶ ಪಡೆದಿರುವ ಪ್ರೌಢಶಾಲಾ ಮುಖ್ಯಶಿಕ್ಷಕರು, ತಮ್ಮ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹೊರಡಿಸಿರುವ ಆದೇಶ ತಮಗೂ ಅನ್ವಯವಾಗಲಿದೆ.

ಹಾಗಾಗಿ ತಮ್ಮ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವರು ಹೊರಡಿಸಿರುವ ಆದೇಶ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ, ಆದ್ದರಿಂದ ವರ್ಗಾವಣೆ ಆದೇಶ ಪಡೆದಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಸೇವೆಯಿಂದ ಬಿಡುಗಡೆಹೊಂದಬೇಕು ಎಂದು ತಿಳಿಸಲಾಗಿದೆ.












Click it and Unblock the Notifications