ಬೇಲೇಕೇರಿ ಪ್ರಕರಣ, ಅಧಿಕಾರಿಗಳಿಗೆ ಬಂತು ಕುತ್ತು

ರಾಜ್ಯದಲ್ಲಿನ ಅಕ್ರಮ ಹಾಗೂ ಅನಧಿಕೃತ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರು 2011ರ ಜುಲೈ 27ರಂದು ನೀಡಿದ್ದ ಎರಡನೇ ವರದಿಯಲ್ಲಿ ಉಲ್ಲೇಖಿಸಿರುವಂತೆ ಅಧಿಕಾರಿಗಳ ಮೇಲೆ ತನಿಖೆ ನಡೆಸಲು ಆದೇಶಿಸಲಾಗಿದೆ.
ಬೇಲೆಕೇರಿ ಬಂದರಿನಲ್ಲಿ ಕಬ್ಬಿಣ ಅದಿರು ವಿದೇಶಕ್ಕೆ ರಫ್ತು ಮಾಡುತ್ತಿದ್ದ ಸಂಸ್ಥೆಗಳಲ್ಲಿ ಒಂದಾದ ಅಹಮದಾಬಾದ್ ಮೂಲದ ಅದಾನಿ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ 24 ಅಧಿಕಾರಿಗಳ ಮೇಲೆ ತನಿಖೆ ನಡೆಯಲಿದೆ.
ತನಿಖೆಗೆ ಒಳಪಡುವ 24 ಅಧಿಕಾರಿಗಳು: ಕ್ಯಾಪ್ಟನ್ ಆರ್. ಮೋಹನ್, ನಿರ್ದೇಶರು, ಕ್ಯಾಪ್ಟನ್ ಸಿ. ಸ್ವಾಮಿ, ಬಂದರು ಅಧಿಕಾರಿ, ಟಿ.ಎಸ್. ರಾಠೋಡ್,ಕಾರ್ಯನಿರ್ವಾಹಕ ಎಂಜಿನಿಯರ್, ಯಜ್ಞಕುಮಾರ್, ಜಲಮೋಜಿಣಿದಾರರು, ಮಹೇಶ್ ಜೆ. ಬಿಲಿಯೆ, ಉಪ ಬಂದರು ಸಂರಕ್ಷಣಾಧಿಕಾರಿ, ಟಿ.ಆರ್. ನಾಯ್ಕ, ನಿವೃತ್ತ ಬಂದರು ಸಂರಕ್ಷಣಾಧಿಕಾರಿ, ಸುರೇಶ್ ಡಿ. ಶೆಟ್ಟಿ, ಬಂದರು ಸಂರಕ್ಷಣಾಧಿಕಾರಿ, ಯೋಗೇಶ್ ಎ. ಶೆಟ್ಟಿ, ಉಪ ಬಂದರು ಸಂರಕ್ಷಣಾಧಿಕಾರಿ, ಡಿ.ಡಿ. ಪರುಳೇಕರ, ಉಪ ಬಂದರು ಸಂರಕ್ಷಣಾಧಿಕಾರಿ, ಗೌಸ ಅಲಿ, ಸಹಾಯಕ ಬಂದರು ಸಂರಕ್ಷಣಾಧಿಕಾರಿ, ಸಾಯಿನಾಥ ವಿ. ತಾಮಸೆ, ಸಹಾಯಕ ಬಂದರು ಸಂರಕ್ಷಣಾಧಿಕಾರಿ, ರಾಮಚಂದ್ರ ನಾಯಕ, ಸಹಾಯಕ ದೀಪಪಾಲಕ, ಎಂ.ಯು. ಆಚಾರಿ, ಲಾಸ್ಕರ ಎನ್. ಎಂ. ಗಾಂವಕರ, ಲಾಸ್ಕರ, ಸಂತೋಷ ಡಿ. ಮೆಹತಾ, ಲಾಸ್ಕರ, ಎಂ.ಆರ್. ಹರಿಕಂತ್ರ, ನಾವಿಕ, ಜೆ. ಅವರಸೇಕರ, ನಾವಿಕ, ರಾಜು ಕೆ. ಕುಂದರ, ಲಾಸ್ಕರ, ಆರ್.ಎಂ. ನಾಯಕ್, ಲಾಸ್ಕರ, ಕೆ.ವಿ. ನಾಯ್ಕ, ಲಾಸ್ಕರ, ಪಿ.ಎಸ್. ನಾಯ್ಕ, ಲಾಸ್ಕರ, ಗಣು ಎನ್. ಆಗೇರ, ನಾವಿಕ, ಸಾಯಿನಾಥ್ ಕೇರಕರ, ಸಾರಂಗ-3, ಮಹೇಶ್ ಎಲ್. ಹರಿಕಂತ್ರ, ಸಾರಂಗ-3
ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಫೀಲು) ನಿಯಮಗಳು 1957ರ ನಿಯಮ 13ರನ್ವಯ 11ನೇ ನಿಯಮ 2ನೇ ಉಪ ನಿಯಮದಡಿ ಜಂಟಿ ಇಲಾಖಾ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ವಿ. ಶೇಟ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಲೋಕೋಪಯೋಗಿ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಅವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿಯವರು ನಿಯಮಾನುಸಾರ ವಿಚಾರಣೆ ಕೈಗೊಂಡು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.












Click it and Unblock the Notifications