KSRTC: ನೌಕರರ ಅಂತರ ನಿಗಮ ಪರಸ್ಪರ ವರ್ಗಾವಣೆಗೆ ಅವಕಾಶ: ಅರ್ಜಿ ಸಲ್ಲಿಕೆ ಕಾಲಾವಕಾಶ ತಿಳಿಯಿರಿ

ಬೆಂಗಳೂರು, ಜಲೈ 04: ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮ ದರ್ಜೆ-3 ಮತ್ತು ದರ್ಜೆ- 4 ನೌಕರರಿಗೆ ಅಂತರ್‌ ನಿಗಮಕ್ಕೆ ವರ್ಗಾವಣೆಗೆ ಅವಕಾಶ ನೀಡಿದೆ. ಹಾಗಾದರೆ ವರ್ಗಾವಣೆಗೆ ಅರ್ಹರಾದವರು ಯಾವಾಗ ಅರ್ಜಿ ಸಲ್ಲಿಸಬೇಕು. ಅದಕ್ಕೆ ಎಷ್ಟು ದಿನ ಅವಕಾಶ ಇದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಅನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ನಿಗಮಗಳ ದರ್ಜೆ-3 ಮೇಲ್ವಿಚಾರಕರು ಮತ್ತು ದರ್ಜೆ- 4ರ ನೌಕರರು ಅಂತರ ನಿಗಮಕ್ಕೆ ವರ್ಗಾವಣೆಗೊಳ್ಳಬಹುದು ಎಂದು ತಿಳಿಸಲಾಗಿದೆ.

Govt Allowed Inter-Corporation Transfer

ಈ ಹಿಂದಿನ ಸುತ್ತಲೋ ಅನ್ವಯ ವರ್ಗಾವಣಗೆ 2021ರಲ್ಲಿಯೇ ಕೆಲವು ಪ್ರಮುಕ ನಿರ್ದೇಶನಗಳನ್ನು ನೀಡಲಾಗಿದೆ. ಅದರಂತೆ ಈ 2023ನೇ ಸಾಲಿನ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆಯು ನಾಳೆ ಜುಲೈ 05 ಬುಧವಾರ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಮುಂದಿನ ತಿಂಗಳು ಆಗಸ್ಟ್ 18ರಂದು ಸಂಜೆ 5.30 ಗಂಟೆ ವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ವರ್ಗಾವಣೆ ಮೀಸಲಾತಿ

ಆಸಕ್ತ ನೌಕರರು, ಮೇಲ್ವಿಚಾರಕರು ಆನ್‌ಲೈನ್‌ ಮೂಲಕ ವೆಬ್‌ಸೈಟ್ www.ksrtc org/transfer ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Govt Allowed Inter-Corporation Transfer

ಇದಷ್ಟೇ ಅಲ್ಲದೇ ಸಾಮಾನ್ಯ ವರ್ಗಾವಣೆಯಲ್ಲಿ ಪತಿ/ಪತ್ನಿ ಪ್ರಕರಣಗಳೊಂದಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು/ತೀವ್ರ ತರಹದ ಆರೋಗ್ಯ (ಹೆಚ್ಐವಿ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್‌ ಕಾರ್ಡ್, ಕಿಡ್ನಿ ವೈಪಲ್ಯ ಮತ್ತು ಮೆದುಳು ಸಂಬಂಧಿ ಖಾಯಿಲೆಗಳು) ಪ್ರಕರಣಗಳಿಗೆ ಪ್ರಸ್ತುತ ವರ್ಗಾವಣೆಯಲ್ಲಿ ಶೇಕಡಾ 5 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

ಇಂತಹ ನೌಕರರು ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ವರ್ಗಾವಣೆ ವೇಳೆ ಸಲ್ಲಿಸಬೇಕಿರುತ್ತದೆ. ಪರಸ್ಪರ ವರ್ಗಾವಣೆಗೆ ಪರಸ್ಪರ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಶೇಕಡಾ 10ರ ಬದಲಾಗಿ ಶೇಕಡಾ 15ರಷ್ಟನ್ನು ಪರಿಗಣಿಸಲಾಗುವುದು. ನೌಕರರು ಸದರಿ ಸೌಲಭ್ಯದ ಸದುಪಯೋಗವನ್ನು ಪಡೆಯಲು ಸರ್ಕಾರ ತಿಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+