ಎಸ್‍ಸಿ, ಎಸ್‍ಟಿ ಮೀಸಲು ಮೊತ್ತದಿಂದ 11,144 ಕೋಟಿ ದುರುಪಯೋಗ: ಬಿಜೆಪಿ ನಾಯಕರು ಕೊಟ್ಟ ಎಚ್ಚರಿಕೆ ಏನು?
ಬೆಂಗಳೂರು, ಸೆಪ್ಟೆಂಬರ್ 11: ಸ್‍ಸಿ, ಎಸ್‍ಟಿ ಮೀಸಲು ಮೊತ್ತದಿಂದ 11,144 ಕೋಟಿ ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟವನ್ನ 11,144 ಕೋಟಿ ಮೊತ್ತವನ್ನು ವಾಪಸ್ ಕೊಡುವ ವರೆಗೆ ಮುಂದುವರಿಯಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಆಡಳಿತ ಮಾಡುವ ಪ್ರತಿಜ್ಞೆ ಸ್ವೀಕರಿಸುವ ಮನಸ್ಸು ನಮ್ಮದಾಗಲಿ. ಎಸ್‍ಸಿ, ಎಸ್‍ಟಿ ಮೀಸಲು ಮೊತ್ತದಿಂದ 11,144 ಕೋಟಿ ದುರುಪಯೋಗ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಪ್ರಾರಂಭಿಸಿ ಎಂದು ಮನವಿ ಮಾಡಿದರು.

ಡೋಂಗಿ ಮಾತು, ಸುಳ್ಳು ಭರವಸೆ ಮೂಲಕ ಮೋಸ ಮಾಡಲು ಸಿದ್ದರಾಮಯ್ಯರವರು ಮುಂದಾಗಿದ್ದಾರೆ. ಎಸ್‍ಸಿ ಎಸ್‍ಟಿ ಜನಾಂಗದ ಶಿಕ್ಷಣ, ಆರೋಗ್ಯ, ಕಲ್ಯಾಣಕ್ಕಾಗಿ ಈ ಹಣವನ್ನು ಬಳಸಬೇಕಿದೆ. ಸರಕಾರದ ಮನಸ್ಸಿಗೆ ಬಂದಂತೆ ಬಳಸಲು ಅಲ್ಲ ಎಂದು ಕಿಡಿಕಾರಿದರು.ಈ ಜನಾಂಗದಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಸಹಿಸಿಕೊಂಡದ್ದು ಹೇಗೆ ಎಂದು ಪ್ರಶ್ನಿಸಿದರು.
ಮತಬ್ಯಾಂಕ್ ರಾಜಕಾರಣಕ್ಕೆ ಅವರೂ ಜೋತುಬಿದ್ದರೇ ಎಂದು ಕೇಳಿದರು. ಬಿಜೆಪಿ ಸರಕಾರದ ಸಾಧನೆಗಳನ್ನು ಅವರು ವಿವರಿಸಿದರು. ಎಸ್‍ಸಿ ಎಸ್‍ಟಿ ಜನಾಂಗವು ಗೌರವಯುತವಾಗಿ ಬಾಳಲು ನಾವು ಶ್ರಮಿಸಿದ್ದೇವೆ. ಇವರಂತೆ ಸುಳ್ಳು ಹೇಳಿಲ್ಲ. ನೀರಾವರಿ, ಪಿಡಬ್ಲ್ಯುಡಿ ಇಲಾಖೆ ಸಚಿವನಾದಾಗ ಮೀಸಲು ಹಣವನ್ನು ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಬಳಸಿದ್ದೇವೆ. ವಸತಿಯುತ ಶಾಲೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ 500 ಕೋಟಿ ನೀಡಿದ್ದೇನೆ. ನೀರಾವರಿ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಪ್ರಾರಂಭವಾದುದೇ ನಮ್ಮ ಸರಕಾರ ಇದ್ದಾಗ ಎಂದು ಹೇಳಿದರು.
ಎಸ್‍ಸಿ ಎಸ್‍ಟಿ ಯುವಕರನೇಕರು ಇಂಜಿನಿಯರ್, ಪದವೀಧರ ಆಗಿದ್ದಾರೆ. ಅವರು ಕೈಗಾರಿಕೆ ಪ್ರಾರಂಭಿಸಲು ಶೇ 50 ಸಬ್ಸಿಡಿಯಲ್ಲಿ ಕೆಐಎಡಿಬಿಯಿಂದ ನಿವೇಶನ ಕೊಡಲಾಗುತ್ತಿತ್ತು. ಅದನ್ನು ಶೇ 75ಕ್ಕೆ ಏರಿಸಲಾಗಿದೆ. ಇದರಿಂದ ಸಾವಿರಾರು ಜನರು ನಿವೇಶನ ಪಡೆಯುವಂತಾಗಿದೆ. ಇದು ನಮ್ಮ ಸಾಧನೆ ಸಿದ್ದರಾಮಯ್ಯನವರೇ ಎಂದು ಕುಟುಕಿದರು.

60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಎಸ್‍ಸಿ, ಎಸ್‍ಟಿ ಸಮಾಜಕ್ಕೆ ನಿರಂತರ ಮೋಸ ಮಾಡುತ್ತಲೇ ಬಂತು. ಬಡತನ ನಿರ್ಮೂಲನೆ ಮಾಡುವುದಾಗಿ ಹೇಳುತ್ತಲೇ ಬಂದ ಇಂದಿರಾ ಗಾಂಧಿಯವರು ಬಸವರಿಗೆ ಮೋಸ ಮಾಡುತ್ತ ಬಂದರು ಎಂದರಲ್ಲದೆ, ಈ ಚುನಾವಣೆಯಲ್ಲಿ ನಾವು ಸೋತರೆ ಆಕಾಶ ಕೆಳಗೆ ಬಿದ್ದಿಲ್ಲ. ಪ್ರಳಯ ಆಗಿಲ್ಲ. ನಮಗೆ ಮುಂದೆ ಅವಕಾಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಮೀಸಲಿಟ್ಟ ಹಣದ ದುರ್ಬಳಕೆ ಆಗಿದೆ. ಸಂಬಂಧಿತರ ಕಿವಿಹಿಂಡಿ ಅದನ್ನು ಬಡವರಿಗೆ ಕೊಡಿಸುವುದು ಹೇಗೆ ಎಂಬ ಚರ್ಚೆ ನಮ್ಮದು ಎಂದರು. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ನಾವು ಮುಂದಾಗಬೇಕಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮುಂದುವರೆಸಬೇಕಿದೆ. ಜನರ ಪರವಾಗಿ ಇರುವವರಾದ ನಾವು ದರ ವಿರುದ್ಧ ಹೋರಾಟಕ್ಕೆ ಧುಮುಕಲೇ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಸುಳ್ಳು ಭರವಸೆ, ಗ್ಯಾರಂಟಿಗಳಿಂದ ಈ ಸರಕಾರ ರಚಿಸಲಾಗಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿ, ಪರಿಶಿಷ್ಟ ಜಾತಿ- ವರ್ಗಕ್ಕೆ ಮೀಸಲಿಟ್ಟ ಹಣದಲ್ಲಿ ಸುಮಾರು 11 ಸಾವಿರ ಕೋಟಿಯನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಡಾ.ಬಾಬಾ ಸಾಹೇಬ ಅಂಬೇಡ್ಕರರ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ನುಡಿದರು. ಒಳ್ಳೆಯ ಕೆಲಸಗಳನ್ನು ಮರೆತುಬಿಡುತ್ತೇವೆ. ಬಿಜೆಪಿ ಸರಕಾರ ಮಾಡಿದ ಒಳ್ಳೆಯ ವಿಚಾರ ಮರೆತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯವನ್ನು ಬಿಜೆಪಿ ಸರಕಾರ ನೀಡಿತ್ತು ಎಂದು ನೆನಪಿಸಿದರು. ಜಾತಿ ಪ್ರಮಾಣಪತ್ರದ ವಿಚಾರದಲ್ಲೂ ಇವತ್ತು ಸಾಕಷ್ಟು ಗೊಂದಲಗಳು ನಡೆದಿವೆ. ನ್ಯಾಯಕ್ಕಾಗಿ ಹೋರಾಟ ಮಾಡಿ ಹಕ್ಕುಗಳನ್ನು ಪಡೆಯೋಣ ಎಂದು ತಿಳಿಸಿದರು.
ಮಾಜಿ ಶಾಸಕ ಎನ್. ಮಹೇಶ್ ಅವರು ಮಾತನಾಡಿ, ಶೇ 80ರಷ್ಟು ಎಸ್‍ಸಿ, ಎಸ್‍ಟಿಗಳು ಬಿಪಿಎಲ್ ರೇಖೆ ಕೆಳಗಿದ್ದಾರೆ. ತಿಂಗಳ ಆದಾಯ ಗಳಿಸುವ ಆಸ್ತಿ ನಮ್ಮಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಸ್ಪೆಷಲ್ ಕಾಂಪೋನೆಂಟ್ ಪ್ಲಾನನ್ನು ಗ್ಯಾರಂಟಿಗಳಿಗೆ ಬಳಸುವುದು ಮೋಸ, ದ್ರೋಹ ಮತ್ತು ಅನ್ಯಾಯ ಎಂದು ಹೇಳಿದರು.
ಉದ್ಯೋಗ ಕೊಡುವುದು, ಉತ್ತಮ ಶಿಕ್ಷಣ, ಭೂಮಿ ಕೊಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಇದನ್ನು ಜನರ ಬಳಿಗೆ ಒಯ್ಯುವುದು ಅನಿವಾರ್ಯ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಗೋಸುಂಬೆತನವನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ನುಡಿದರು. ಕಾಂಗ್ರೆಸ್ ಮತಬ್ಯಾಂಕಿಗೆ ಇದನ್ನು ತಿಳಿಹೇಳಬೇಕಿದೆ ಎಂದು ತಿಳಿಸಿದರು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications