ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು, ನವೆಂಬರ್ 15: ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ (ಕೆಆರ್ಎಸ್) ಜಲಾಶಯದ ಅಭಿವೃದ್ಧಿ ಯೋಜನೆಯ ಭಾಗವಾಗಿ ನಿರ್ಮಾಣ ಮಾಡಲಿರುವ ಕಾವೇರಿ ತಾಯಿಯ ಪ್ರತಿಮೆ ಗೋಪುರದಂತೆ ಇರಲಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಆರ್‌ಎಸ್‌ನಲ್ಲಿ ಸರ್ಕಾರಕ್ಕೇ ಸೇರಿದ ಜಮೀನಿದೆ. ಅದರಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಆಹ್ವಾನಿಸುತ್ತೇವೆ. ಅದರಲ್ಲಿ ಸರ್ಕಾರದ ಹಣವನ್ನು ಬಳಸಿಕೊಳ್ಳುವುದಿಲ್ಲ. ಸಂಪೂರ್ಣವಾಗಿ ಪ್ರತಿಮೆ ಎಂದು ಹೇಳಲು ಸಾಧ್ಯವಿಲ್ಲ. ಅದು ಗೋಪುರದಂತೆ ಇರಲಿದೆ ಎಂದು ಅವರು ತಿಳಿಸಿದ್ದಾರೆ.

government will not use its money to cauvery statue dk shivakumar krs

ಜಲಾಶಯದ ಪಕ್ಕದಲ್ಲಿ ಹೊಸದೊಂದು ಕೆರೆಯನ್ನು ನಿರ್ಮಿಸಲಾಗುವುದು. ಅದರ ವಿನ್ಯಾಸ ಇನ್ನೂ ಮಾಡಬೇಕಿದೆ. ಮ್ಯೂಸಿಯಂ ಸ್ಥಾಪಿಸಿ ಅದರ ಮೇಲ್ಭಾಗದಲ್ಲಿ ಮತ್ತು ಗಾಜಿನ ಗೋಪುರಗಳ ನಡುವೆ ಪ್ರತಿಮೆಯ ಗೋಪುರವನ್ನು ಅಳವಡಿಸಲಾಗುವುದು.

ಈ ಪ್ರತಿಮೆ ಕೆಆರ್ಎಸ್ ಜಲಾಶಯಕ್ಕಿಂತಲೂ ಎತ್ತರ ಇರಲಿದೆ. ಭೂಮಿಯನ್ನು ಹೊರತುಪಡಿಸಿ ಬೇರೇನನ್ನೂ ಸರ್ಕಾರ ಹೂಡಿಕೆ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

ಈ ಪ್ರದೇಶದಲ್ಲಿ ಒಂದು ಒಳಾಂಗಣ ಕ್ರೀಡಾಂಗಣ, ಬ್ಯಾಂಡ್‌ಸ್ಟ್ಯಾಂಡ್, ಐತಿಹಾಸಿಕ ಸ್ಥಳಗಳ ನಕಲು ಸೃಷ್ಟಿ ಇರಲಿವೆ. ಒಟ್ಟಾರೆ ಯೋಜನೆಯ ವೆಚ್ಚ ಸುಮಾರು 1200 ಕೋಟಿ ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+