ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ನೇಮಕಾತಿ: ಇಲಾಖೆಯಿಂದ ಮಹಿಳಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ

|
Google Oneindia Kannada News

ಶಿವಮೊಗ್ಗ, ಜನವರಿ 4: ಮಹಿಳಾ ಸಬಲೀಕರಣ ಉದ್ದೇಶದಿಂದ ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ಬೊಮ್ಮಾಯಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ಶಿವಮೊಗ್ಗದಲ್ಲಿ ಜಿಲ್ಲಾ ಒಕ್ಕಲಿಗ ಮಹಿಳಾ ವೇದಿಕೆ ಆಯೋಜಿಸಿದ್ದ ಮಲೆನಾಡು ಮೇಳವನ್ನು ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರದಿಂದ 650 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಾಗಾಗಿ, ನಗರ ವ್ಯಾಪ್ತಿಯಲ್ಲಿ 3,000 ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಇಂತಹ ಕ್ಯಾಮೆರಾಗಳನ್ನು ರಾಜ್ಯಾದ್ಯಂತ ಕಾಲೇಜು ಕ್ಯಾಂಪಸ್‌ಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದರು.

ಸದಾ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಳಜಿ ಇರುವ, ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ: ಆರಗ ಜ್ಞಾನೇಂದ್ರಸದಾ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಳಜಿ ಇರುವ, ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ: ಆರಗ ಜ್ಞಾನೇಂದ್ರ

ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರ ವರದಿ ಅನುಷ್ಠಾನದಿಂದ ಶೇ. 80ಕ್ಕೂ ಹೆಚ್ಚು ಪೊಲೀಸರು ಪ್ರಯೋಜನ ಪಡೆದಿದ್ದಾರೆ. ಯಾರಿಗಾದರೂ ಅನ್ಯಾಯವಾದರೆ ಅವ್ಯವಹಾರಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಗಂಭೀರ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂಕಿತರಿಗೆ ವಿಶೇಷ ಕಾರಾಗೃಹವನ್ನು ಕೇಂದ್ರ ಮಂಜೂರು ಮಾಡಿದ್ದು, ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿ ಇದನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

Government Thinking of giving 25% reservation Percentage for women in police recruitment

ಅರಗ ಜ್ಞಾನೇಂದ್ರ ಅವರು ಬುಧವಾರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಕಳೆದ ವರ್ಷದ ಸಾಧನೆಗಳು, ಎದುರಿಸಿದ ಸವಾಲುಗಳು, ಕ್ರಮಿಸಬೇಕಾದ ಹಾದಿಗಳು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಗೃಹ ಇಲಾಖೆಯು ಕಳೆದ ವರ್ಷ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇದಕ್ಕಾಗಿ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ರಾಜ್ಯ ಪೊಲೀಸ್ ಮುಖ್ಯಸ್ಥರಾದ ಶ್ರೀ ಪ್ರವೀಣ್ ಸೂದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಒಳಾಡಳಿತ), ಶ್ರೀ ರಜನೀಶ್ ಗೋಯಲ್, ಶ್ರೀ ಅಲೋಕ್ ಮೋಹನ್ (ಡಿಜಿ ಕಾರಾಗೃಹ), ನಗರ ಪೊಲೀಸ್ ಆಯುಕ್ತ ಶ್ರೀ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Government Thinking of giving 25% reservation Percentage for women in police recruitment

2019ರಲ್ಲಿ ರಾಜ್ಯದ ಪೊಲೀಸ್‌ ನೇರ ನೇಮಕಾತಿಯಲ್ಲಿ ಒಂಬತ್ತು ಹುದ್ದೆಗಳಿಗೆ ಶೇ.25ರಷ್ಟುಕಡ್ಡಾಯ ಮಹಿಳಾ ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತ್ತು. ಈ ಹಿಂದೆ ಎರಡು ಹುದ್ದೆಗಳಿಗೆ ಮಾತ್ರ ಶೇ.20 ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಆ ಎರಡೂ ಹುದ್ದೆ ಸೇರಿದಂತೆ ನೇರ ನೇಮಕಾತಿಯಲ್ಲಿ ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ಆಫ್‌ ಪೊಲೀಸ್‌, ಪೊಲೀಸ್‌ ಕಾನ್‌ಸ್ಟೇಬಲ್‌- ಸಿವಿಲ್‌, ಸಬ್‌ಇನ್‌ಸ್ಪೆಕ್ಟರ್‌ - ಎಸ್‌ಟಿಡಿ, ಪೊಲೀಸ್‌ ಕಾನ್‌ಸ್ಟೇಬಲ್‌-ಐಎಸ್‌ಡಿ, ಸಬ್‌ಇನ್ಸ್‌ಪೆಕ್ಟರ್‌ ವೈರ್‌ಲೆಸ್‌, ಪೊಲೀಸ್‌ ಕಾನ್‌ಸ್ಟೇಬಲ್‌ -ವೈರ್‌ಲೈಸ್‌, ಸಬ್‌ಇನ್ಸ್‌ಪೆಕ್ಟರ್‌- ರಾಜ್ಯ ಗುಪ್ತಚರ, ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌ - ಸಿಐಡಿ ಸೇರಿದಂತೆ ಒಟ್ಟು ಒಂಬತ್ತು ಹುದ್ದೆಗಳಿಗೆ ಶೇ.25 ರಷ್ಟುಮೀಸಲಾತಿ ಕಲ್ಪಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು.

English summary
Home Minister Araga Gyanendra has said that the Bommai-led government is thinking of providing 25% reservation for women in police recruitment with the aim of empowering women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X