'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ'

ಈಗೀಗ ಪ್ರತಿ ದಿನವೂ ಸಮಾಜದ ಒಳಗೆ ಧರ್ಮದ ಹೆಸರಿನಲ್ಲಿ ಗಲಭೆ ಎಬ್ಬಿಸುತ್ತಿರುವ ಪುಂಡ ಪೋಕರಿಗಳ ಹಾವಳಿ ಭೀಕರವಾಗಿ ಹೆಚ್ಚಾಗುತ್ತಿದೆ. ಇವುಗಳನ್ನು ನಿಯಂತ್ರಿಸಬೇಕಿದ್ದ ಸರ್ಕಾರವೇ ಇವರ ಬೆನ್ನ ಹಿಂದೆ ನಿಂತು ಈ ಭೀಕರತೆಯನ್ನು ಪೋಷಣೆ ಮಾಡುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ.

ಇನ್ನು ಸರ್ಕಾರ ವಿಪರೀತ ಅರಾಜಕತೆಯಿಂದ ವರ್ತಿಸುತ್ತಿದ್ದರೂ ಅವರಿಗೆ ಚಾಟಿ ಬೀಸದೇ ನ್ಯಾಯಂಗವೂ ಸುಮ್ಮನೆ ಇರುವುದು ಸಮಾಜವನ್ನು ಬಹಳ ಬೇಗನೇ ನಾಗರೀಕ ಯುದ್ಧಗಳ ಕಡೆಗೆ ಕೊಂಡೊಯ್ಯುವಂತಹ ಆತಂಕವನ್ನು ಸೃಷ್ಟಿ ಮಾಡುತ್ತಿದೆ.

ಚುನಾವಣೆಯ ಕಾರಣಕ್ಕಾಗಿಯೇ ಪ್ರತಿದಿನವೂ ಸಮಾಜದಲ್ಲಿ ಪ್ರತಿ ದಿನವೂ ಅಶಾಂತಿಯನ್ನು ಉಂಟು ಮಾಡಲಾಗುತ್ತಿದ್ದು ಈಗಷ್ಟೇ ಸಹಜ ಜೀವನಕ್ಕೆ ಮರಳಿರುವ ಜನರಲ್ಲಿ ಮತ್ತೆ ಆತಂಕದ ಛಾಯೆ ಆವರಿಸಿದೆ. ಜನ ಸಾಮಾನ್ಯರ ಮೂಕ ಅಳುವಿನಲ್ಲಿ, ಎಲ್ಲವನ್ನೂ ಧ್ವಂಸ ಮಾಡುವ ಶಕ್ತಿ ಇದೆ ಎಂಬ ಸಂಗತಿಯನ್ನು ಮರೆಯದಿರೋಣ.

Government Should Control Those Involved In Communal Disturbances Said Dr. H C Mahadevappa

ಈ ದೇಶದ ಮೂಲ ನಿವಾಸಿಗಳೇನಾದರೂ ಅಶಾಂತಿಯ ಮತ್ತು ದ್ವೇಷದ ಮಾರ್ಗ ಹಿಡಿದರೆ ಈಗ ಕಪಿ ಚೇಷ್ಟೆ ಮಾಡುತ್ತಿರುವ ಜನರು ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಒಂದೊಳ್ಳೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರುವಾಗಲೂ ತಿಂದ ಕೊಬ್ಬು ಜಾಸ್ತಿಯಾಗಿ ದುರಹಂಕಾರದಿಂದ ವರ್ತಿಸುವ ಧಾರ್ಮಿಕ ಭಯೋತ್ಪಾದಕರಿಗೆ ಇಲ್ಲಿ ಶಾಂತಿಯುತವಾಗಿ ಬದುಕಲು ಇಷ್ಟವಿಲ್ಲದೇ ಹೋದರೆ ಈ ದೇಶ ಬಿಟ್ಟು ತೊಲಗಲಿ.

ಶ್ರಮಿಕರ ಬದುಕನ್ನು disturb ಮಾಡುತ್ತಿರುವ ಈ ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ, ಇಲ್ಲದೇ ಹೋದರೆ ಜನ ಸಾಮಾನ್ಯರೇ ಅವರನ್ನು ನಿಯಂತ್ರಿಸುತ್ತಾರೆ. ಅಂತಹ ಕೆಟ್ಟ ಸನ್ನಿವೇಶ ಬಾರದಿರಲಿ ಎಂದು ಮತ್ತೊಮ್ಮೆ ಸರ್ಕಾರವನ್ನು ಎಚ್ಚರಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+