IAS transfer; ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಪಟ್ಟಿ
ಬೆಂಗಳೂರು, ಡಿಸೆಂಬರ್ 27; ಕರ್ನಾಟಕ ಸರ್ಕಾರ ಹಲವು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. 2024 ಲೋಕಸಭೆ ಚುಣಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಮತ್ತೆ ಅಧಿಕಾರಿಗಳ ವರ್ಗಾವಣೆಯನ್ನು ಆರಂಭಿಸಿದೆ.
ಬುಧವಾರ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಹಲವು ಉಪ ವಿಭಾಗಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಆದೇಶದ ತನಕ ಈ ವರ್ಗಾವಣೆ ಜಾರಿಯಲ್ಲಿರುತ್ತದೆ.

ಐಎಎಸ್ ವರ್ಗಾವಣೆ
* ಅರ್ಪಣಾ ರಮೇಶ್ (ಕೆಎನ್: 2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಅರ್ಪಣಾ ರಮೇಶ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ನರ್ವಾಡೆ ವಿನಾಯಕ್ ಕಾರಭಾರಿ (ಕೆಎನ್: 2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಉಪವಿಭಾಗಾಧಿಕಾರಿ, ಮಡಿಕೇರಿ. ಕೊಡಗು ಜಿಲ್ಲೆಗೆ ನೇಮಕ ಮಾಡಲಾಗಿದೆ.
* ಕಾನಿಷ್ಕ್ (ಕೆಎನ್; 2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ಜುಬಿನ್ ಮೊಹಪಾತ್ರ (ಕೆಎನ್:2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ದಲ್‌ಜಿತ್ ಕುಮಾರ್ (ಕೆಎನ್:2021) ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ಯತೀಶ್ ಆರ್. (ಕೆಎನ್:2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ಎಂಡಿ ಹ್ಯಾರಿಸ್ ಸುಮೈನಾರ್ (ಕೆಎನ್:2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಮೈಸೂರು ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ರೂಪಿಂದರ್ ಕೌರ್ (ಕೆಎನ್:2021). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ಕಲಬುರಗಿಯ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಕೆಎಎಸ್ ಅಧಿಕಾರಿಗಳ ಪಟ್ಟಿ
* ಡಾ. ಯತೀಶ್ ಉಳ್ಳಾಲ್ (ಕೆಎಎಸ್ ಹಿರಿಯ ಶ್ರೇಣಿ) ಮಡಿಕೇರಿ ಉಪವಿಭಾಗಾಧಿಕಾರಿ ಕುಲಸಚಿವರು (ಆಡಳಿತ) ಮಂಗಳೂರು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ.
* ಜಯಲಕ್ಷ್ಮೀ (ಕೆಎಎಸ್ ಹಿರಿಯ ಶ್ರೇಣಿ) ಉಪವಿಭಾಗಾಧಿಕಾರಿ ಕಾರವಾರ ವರ್ಗಾವಣೆ. ಕುಲಸಚಿವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಹುದ್ದೆಗೆ ನೇಮಕ.
* ಮಮತಾ ಕುಮಾರಿ (ಕೆಎಎಎಸ್ ಹಿರಿಯ ಶ್ರೇಣಿ) ಉಪವಿಭಾಗಾಧಿಕಾರಿ ಕಲಬುರಗಿ. ಉಪ ಆಯುಕ್ತರು (ಕಂದಾಯ). ಕಲಬುರಗಿ ಮಹಾನಗರ ಪಾಲಿಕೆ ಹುದ್ದೆಗೆ ನೇಮಕ.
* ದೇವರಾಜ್ ಆರ್. (ಕೆಎಎಎಸ್ ಕಿರಿಯ ಶ್ರೇಣಿ). ಉಪವಿಭಾಗಾಧಿಕಾರಿ ಶಿರಸಿ. ವಿಶೇಷ ಭೂಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಧಾರವಾಡ ನೇಮಕ.
* ಗಿರೀಶ್ ನಂದನ್ ಎಂ. (ಕೆಎಎಸ್ ಕಿರಿಯ ಶ್ರೇಣಿ). ಪುತ್ತೂರು ಉಪವಿಭಾಗಾಧಿಕಾರಿ. ಉಪ ಆಯುಕ್ತರು (ಕಂದಾಯ) ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನೇಮಕ.
* ರಾಜೇಶ್ ಹೆಚ್. ಡಿ. (ಕೆಎಎಸ್ ಕಿರಿಯ ಶ್ರೇಣಿ). ಉಪವಿಭಾಗಾಧಿಕಾರಿ ಚಿಕ್ಕಮಗಳೂರು. ಆಯುಕ್ತರು ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರ, ಚಿಕ್ಕಮಗಳೂರು ಹುದ್ದೆಗೆ ನೇಮಕ.












Click it and Unblock the Notifications